‘ಬಂಗಾಲವು ಬಾಂಬ್‌ಗಳ ಕಾರ್ಖಾನೆ’, ಎಂಬ ಸಮೀಕರಣವಾಗಿದೆ. ರಾಜ್ಯ ಸರಕಾರ ಬಿಡಿ ಕೇಂದ್ರ ಸರಕಾರ ಸಹ ಈ ಬಗ್ಗೆ ಏನೂ ಮಾಡುತ್ತಿಲ್ಲ, ಇದು ಬಂಗಾಲಿ ನಾಗರಿಕರ ದೌರ್ಭಾಗ್ಯ!
ಕೋಲಕಾತಾ (ಬಂಗಾಲ) – ರಾಜ್ಯದ ದಕ್ಷಿಣ ೨೪ ಪರಗಣಾ ಜಿಲ್ಲೆಯ ರಾಮಪುರದಲ್ಲಿ ಅಜ್ಞಾತರು ನಡೆಸಿದ ಬಾಂಬ್ ದಾಳಿಯಲ್ಲಿ ಆರು ಬಿಜೆಪಿ ಕಾರ್ಯಕರ್ತರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ದಾಳಿಯ ಹಿಂದೆ ತೃಣಮೂಲ ಕಾಂಗ್ರೆಸ್ ಕೈವಾಡವಿದೆ ಎಂದು ಈ ಕಾರ್ಯಕರ್ತರು ಆರೋಪಿಸಿದ್ದಾರೆ. ಮತ್ತೊಂದೆಡೆ, ಬಿಜೆಪಿ ನಾಯಕ ವರುಣ್ ಪ್ರಾಮಾಣಿಕ್ ಅವರು ಬಾಂಬ್ ಹಾಕಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ ಹೇಳಿಕೊಂಡಿದೆ.