‘ಒಸಿಐ’ ಕಾರ್ಡ್ ಹೊಂದಿರುವವರು ಭಾರತದಲ್ಲಿ ತಬಲಿಗೀ ಅಥವಾ ಮಿಷನರಿಯಾಗಿ ಕೆಲಸ ಮಾಡಲು ಅನುಮತಿ ಪಡೆಯಬೇಕು ! – ಕೇಂದ್ರ ಸರಕಾರದ ಹೊಸ ನಿಯಮ

ನವ ದೆಹಲಿ : ಒಸಿಐ (ಓವರಸೀಜ್ ಸಿಟಿಜನ್ ಆಫ್ ಇಂಡಿಯಾ – ಭಾರತೀಯ ಮೂಲದ ವಿದೇಶಿಗರು. ಈ ಕಾರ್ಡ್ ಹೊಂದುವ ಮೂಲಕ ಅವರಿಗೆ ಭಾರತದಲ್ಲಿ ಕೆಲವು ಹಕ್ಕುಗಳನ್ನು ನೀಡಲಾಗುತ್ತದೆ.) ಈ ಕಾರ್ಡ್ ಹೊಂದಿರುವ ವಿದೇಶಿ ನಾಗರಿಕರು ಭಾರತದಲ್ಲಿ ತಬಲಿಗೀ, ಮಿಶನರಿ ಅಥವಾ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಲು ‘ಫಾರೆನ್ ರೀಜನಲ್ ರಿಜಿಸ್ಟ್ರೆಶನ್ ಆಫೀಸ್’ನಿಂದ ವಿಶೇಷ ಅನುಮತಿ ಪಡೆಯಬೇಕಾಗುತ್ತದೆ ಎಂಬ ಹೊಸ ನಿಯಮವನ್ನು ಕೇಂದ್ರ ಸರಕಾರ ರೂಪಿಸಿದೆ. ಈ ಕಾರ್ಡ್ ಹೊಂದಿರುವವರು ವಿದೇಶಿ ಪ್ರಾಜೆಕ್ಟ್‌ನಲ್ಲಿ ಕೆಲಸ ಮಾಡುವವರಿದ್ದರೆ ಅಥವಾ ನಿಷೇಧಿತ ಪ್ರದೇಶಕ್ಕೆ ಹೋಗಲಿಕ್ಕಿದ್ದರೂ ಅವರು ಅನುಮತಿಯನ್ನು ತೆಗೆದುಕೊಳ್ಳಬೇಕಾಗುವುದು. ನಿವಾಸ ಸ್ಥಳ ಬದಲಾದಲ್ಲಿ ಅದರ ಮಾಹಿತಿಯೂ ನೀಡಬೇಕಾಗಿದೆ.