ಒಟಿಟಿ ಪ್ಲ್ಯಾಟಫಾರ್ಮ್ ನಿಯಂತ್ರಿಸಲು ನಿಯಮಗಳಲ್ಲ, ಕಠಿಣ ಕಾನೂನೇ ಬೇಕಾಗಿದೆ ! – ಸರ್ವೋಚ್ಚ ನ್ಯಾಯಾಲಯ

ಅಮೆಜಾನ್ ಪ್ರೈಮ್ ಇಂಡಿಯಾ ಮುಖ್ಯಸ್ಥರನ್ನು ಬಂಧನಕ್ಕೆ ತಡೆ

ಅನೇಕ ಹಿಂದೂಪರ ಸಂಘಟನೆಗಳ ಬೇಡಿಕೆಯಿದ್ದಾಗ, ಸರ್ಕಾರವು ತಾತ್ಕಾಲಿಕ ಉಪಾಯಯೋಜನೆಯೆಂದು ನಿಯಮಗಳನ್ನು ರೂಪಿಸಿ ಮಂಡಿಸಿದೆ ಎಂದು ಅರ್ಥಮಾಡಿಕೊಳ್ಳಬೇಕೇ? ಕಾನೂನು ರೂಪಿಸುವ ವಿಷಯ ಸರಕಾರಕ್ಕೆ ಹೇಗೆ ಗಮನಕ್ಕೆ ಬರಲಿಲ್ಲ? ಸರಕಾರ ಈಗ ಕೂಡಲೇ ಕಾನೂನು ರೂಪಿಸಬೇಕು ಎಂದು ಜನರಿಗೆ ಅನ್ನಿಸುತ್ತದೆ !

ನವ ದೆಹಲಿ : ಒಟಿಟಿ ಪ್ಲ್ಯಾಟಫಾರ್ಮ್ ನಿಯಂತ್ರಿಸಲು ಕೇಂದ್ರ ಸರ್ಕಾರ ಮಾಡಿದ ನಿಯಮಗಳಲ್ಲಿ ಯಾವುದೇ ಅರ್ಥವಿಲ್ಲ. ಮೊಕದ್ದಮೆ ದಾಖಲಿಸುವ ಬಗ್ಗೆ ಉಲ್ಲೇಖಿಸಿಲ್ಲ. ಒಟಿಟಿ ಪ್ಲ್ಯಾಟಫಾರ್ಮ್ ನಿಯಂತ್ರಿಸಲು ನಿಯಮಗಳಲ್ಲ, ಕಾನೂನೇ ಬೇಕಾಗಿದೆ , ಎಂದು ಸರ್ವೋಚ್ಚ ನ್ಯಾಯಾಲಯವು ಕೇಂದ್ರ ಸರ್ಕಾರ ತಯಾರಿಸಿರುವ ನಿಯಮಗಳ ನಿರರ್ಥಕತೆಯನ್ನು ಬಹಿರಂಗಪಡಿಸಿದೆ.

ತಾಂಡವ್ ವೆಬ್ ಸರಣಿಗೆ ಸಂಬಂಧಿಸಿದಂತೆ ಭಾರತದ ಅಮೆಜಾನ್ ಪ್ರೈಮ್ ಕಂಟೆಂಟ್ ಮುಖ್ಯಸ್ಥೆ ಅಪರ್ಣಾ ಪುರೋಹಿತ್ ಅವರನ್ನು ಬಂಧನಕ್ಕೆ ನ್ಯಾಯಾಲಯ ನಕಾರ ನೀಡಿದೆ. ಈ ಬಗ್ಗೆ ನಡೆಯುತ್ತಿರುವ ತನಿಖೆಯಲ್ಲಿ ಅಪರ್ಣಾ ಪುರೋಹಿತ್ ಪೊಲೀಸರೊಂದಿಗೆ ಸಹಕರಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.