ಉತ್ತರ ಪ್ರದೇಶ ಗಡಿಯಲ್ಲಿ ನೇಪಾಳ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಓರ್ವ ಭಾರತೀಯನ ದುರ್ಮರಣ

ಕಳೆದ ಕೆಲವು ತಿಂಗಳುಗಳಿಂದ ನೇಪಾಳದ ದುಷ್ಕೃತ್ಯಗಳು ನಡೆಯುತ್ತಿವೆ, ಇದನ್ನು ಭಾರತವು ಚೀನಾ ಮತ್ತು ಪಾಕಿಸ್ತಾನದಷ್ಟೇ ಗಂಭೀರವಾಗಿ ಪರಿಗಣಿಸಬೇಕಾಗಿದೆ !


ಪಿಲಿಭಿತ್ (ಉತ್ತರ ಪ್ರದೇಶ) – ಭಾರತ ಪ್ರಜೆಗಳು ಮತ್ತು ನೇಪಾಳ ಪೊಲೀಸರ ನಡುವಿನ ವಿವಾದದ ನಂತರ ಇಲ್ಲಿ ಭಾರತ-ನೇಪಾಳ ಗಡಿಯಲ್ಲಿ ಘರ್ಷಣೆ ಸಂಭವಿಸಿದೆ. ನೇಪಾಳ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಓರ್ವ ಭಾರತೀಯನು ಸಾವನ್ನಪ್ಪಿದ್ದಾನೆ. ಆತನೊಂದಿಗಿದ್ದವರಲ್ಲಿ ಒಬ್ಬ ಸಂಘರ್ಷದ ನಡುವೆಯೇ ಗಡಿ ದಾಟಿದ್ದರಿಂದ ಬದುಕುಳಿದನು, ಆದರೆ ಅವರ ಮೂರನೇ ವ್ಯಕ್ತಿ ಇನ್ನೂ ನಾಪತ್ತೆಯಾಗಿದ್ದಾನೆ. ಈ ಘಟನೆ ಬೆಳಕಿಗೆ ಬಂದ ನಂತರ ಈ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಮೃತಪಟ್ಟ ೨೬ ವರ್ಷದ ಯುವಕನನ್ನು ಗೋವಿಂದಾ ಎಂದು ಗುರುತಿಸಲಾಗಿದ್ದು, ಅವನ ಸ್ನೇಹಿತರಾದ ಪಪ್ಪು ಸಿಂಗ್ ಮತ್ತು ಗುರ್ಮೀತ್ ಸಿಂಗ್ ಅವರೊಂದಿಗೆ ನೇಪಾಳಕ್ಕೆ ಹೋಗಿದ್ದ.

ಈ ಘಟನೆ ಬೆಳಕಿಗೆ ಬಂದ ನಂತರ ಈ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಮೃತಪಟ್ಟ ೨೬ ವರ್ಷದ ಯುವಕನನ್ನು ಗೋವಿಂದಾ ಎಂದು ಗುರುತಿಸಲಾಗಿದ್ದು, ಅವನ ಸ್ನೇಹಿತರಾದ ಪಪ್ಪು ಸಿಂಗ್ ಮತ್ತು ಗುರ್ಮೀತ್ ಸಿಂಗ್ ಅವರೊಂದಿಗೆ ನೇಪಾಳಕ್ಕೆ ಹೋಗಿದ್ದ.