ಮನೆಯಲ್ಲಿಯೇ ಕೊರೋನಾ ಲಸಿಕೆ ತೆಗೆದುಕೊಂಡ ಕರ್ನಾಟಕದ ಬಿಜೆಪಿ ಸರಕಾರದ ಕೃಷಿ ಸಚಿವರು !

  • ಟೀಕೆಗಳಾದ ನಂತರವೂ ತಪ್ಪಿನ ಸಮರ್ಥನೆ!
  • ಸರಕಾರದ ನಿಯಮಗಳನ್ನು ಉಲ್ಲಂಘಿಸುವ ಇಂತಹ ಸಚಿವರ ವಿರುದ್ಧ ಬಿಜೆಪಿ ಕ್ರಮ ಕೈಗೊಳ್ಳುತ್ತದೆ ಎಂದು ಜನರು ನಿರೀಕ್ಷಿಸುತ್ತಾರೆ !
ಮನೆಯಲ್ಲಿಯೇ ಕೊರೋನಾ ಲಸಿಕೆ ತೆಗೆದುಕೊಂಡ ಬಿಜೆಪಿ ಸರಕಾರದ ಕೃಷಿ ಸಚಿವ ಬಿ.ಸಿ. ಪಟೇಲ್

ಬೆಂಗಳೂರು – ಪ್ರಧಾನಿ ನರೇಂದ್ರ ಮೋದಿ ಮತ್ತು ಹಲವಾರು ಕೇಂದ್ರ ಸಚಿವರು ಆಸ್ಪತ್ರೆಗಳಿಗೆ ಹೋಗಿ, ಹಾಗೂ ಜನರು ಆಸ್ಪತ್ರೆಗಳ ಹೊರಗೆ ಸರತಿ ಸಾಲಿನಲ್ಲಿ ನಿಂತು ಕೊರೋನಾ ವಿರುದ್ಧ ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ. ಇದೀಗ ಕರ್ನಾಟಕದ ಕೃಷಿ ಸಚಿವ ಬಿ.ಸಿ. ಪಾಟೀಲ್ ಆರೋಗ್ಯ ಕಾರ್ಯಕರ್ತರನ್ನು ತಮ್ಮ ಬಂಗಲೆಗೆ ಕರೆದು ಪತ್ನಿ ಸಹಿತ ಲಸಿಕೆ ಹಾಕಿಸಿಕೊಂಡರು. ವ್ಯಾಪಕ ಟೀಕೆಗಳಾದ ನಂತರವೂ ಅವರು ಈ ಘಟನೆಯನ್ನು ಸಮರ್ಥಿಸಿ “ಇದರಲ್ಲಿ ಏನು ತಪ್ಪಾಗಿದೆ?” ಎಂದು ಮರುಪ್ರಶ್ನಿಸಿದ್ದಾರೆ. ಈ ಘಟನೆಯನ್ನು ಕೇಂದ್ರ ಆರೋಗ್ಯ ಇಲಾಖೆ ದಾಖಲಿಸಿಕೊಂಡಿದ್ದು, ಕರ್ನಾಟಕ ಸರಕಾರದಿಂದ ವರದಿ ಕೋರಿದೆ.

ಬಿ.ಸಿ. ಪಾಟೀಲರು, “ನಾನು ಕಳ್ಳತನ ಮಾಡಿದ್ದೇನಾ? ನಾನು ಮನೆಯಲ್ಲಿ ಲಸಿಕೆ ಪಡೆದಿದ್ದೇನೆ. ಹಾಗೆ ಮಾಡುವುದು ಅಪರಾಧವಲ್ಲ. ನಾನು ವ್ಯಾಕ್ಸಿನೇಷನ್ಗಾಗಿ ಆಸ್ಪತ್ರೆಗೆ ಹೋಗಿದ್ದರೆ, ಸರದಿಯಲ್ಲಿ ನಿಂತಿರುವ ಜನರಿಗೆ ಸಮಸ್ಯೆ ಉಂಟಾಗುತ್ತಿತ್ತು”. ಎಂದು ಹೇಳಿದ್ದಾರೆ.