‘ಅಮೆಜಾನ್ ಪ್ರೈಮ್’ ನಿಂದ ಬೇಷರತ್ತು ಕ್ಷಮೆ!

ತಾಂಡವ್ ವೆಬ್ ಸಿರೀಸ್ ನಲ್ಲಿ ಹಿಂದೂ ದೇವತೆಗಳನ್ನು ಅವಮಾನಿಸಿದ ಪ್ರಕರಣ

* ಹಿಂದೂಗಳ ಸಂಘಟಿತ ವಿರೋಧದ ಪರಿಣಾಮ!

* ಅಮೆಜಾನ್ ಪ್ರೈಮ್ ಮತ್ತು ಇತರ ಒಟಿಟಿ ಫೋರಂಗಳು ಹಿಂದೂ ದೇವತೆಗಳನ್ನು ಅವಮಾನಿಸುವ ವೆಬ್ ಸಿರೀಸ್ ಗಳನ್ನು ನಿರಂತರವಾಗಿ ಪ್ರಸಾರ ಮಾಡುತ್ತಿರುವುದರಿಂದ, ಕೇವಲ ಕ್ಷಮೆಯಾಚಿಸಿದರೆಂಬ ಮಾತ್ರಕ್ಕೆ ಅವರನ್ನು ಬಿಡಬಾರದು. ಅವರನ್ನು ಶಿಕ್ಷಿಸಲು ಪ್ರಯತ್ನಿಸಬೇಕು, ಆಗ ಮಾತ್ರ ಅವರಿಗೆ ಬುದ್ಧಿ ಬರುವುದು!

ನವದೆಹಲಿ: ‘ತಾಂಡವ್’ ಎಂಬ ವೆಬ್ ಸಿರೀಸ್ ಪ್ರಸಾರ ಮಾಡುತ್ತಿರುವ ‘ಅಮೆಜಾನ್ ಪ್ರೈಮ್’, ಸರಣಿಯಲ್ಲಿ ಹಿಂದೂ ದೇವತೆಗಳನ್ನು ಅವಮಾನಿಸಿದ್ದಕ್ಕಾಗಿ ಬೇಷರತ್ತು ಕ್ಷಮೆಯಾಚಿಸಿದೆ. ಅಲ್ಲದೇ ಈಗಾಗಲೇ ಆಕ್ಷೇಪಾರ್ಹ ದೃಶ್ಯಗಳನ್ನು ತೆಗೆದುಹಾಕಲಾಗಿದೆ ಎಂದು ಮಾಹಿತಿಯನ್ನು ನೀಡಿದೆ. ಈ ವೆಬ್ ಸಿರೀಸ್ ನ ಮೇಲೆ ಅಪರಾಧವನ್ನು ದಾಖಲಿಸಲಾಗಿದ್ದು ಅದರ ಖಟ್ಲೆ ನಡೆಯುತ್ತಿದೆ.

‘ನಮ್ಮ ಕಾಲ್ಪನಿಕ ವೆಬ್ ಸಿರೀಸ್ “ತಾಂಡವ”ನಲ್ಲಿ ತೋರಿಸಿರುವ ಕೆಲವು ದೃಶ್ಯಗಳು ಜನರಿಗೆ ಆಕ್ಷೇಪಾರ್ಹ ಎಂದು ಅನಿಸಿದೆ’ ಎಂದು ಅಮೆಜಾನ್ ಪ್ರೈಮ್ ಕ್ಷಮೆಯಾಚಿಸಿದೆ. ತಮ್ಮ ಕ್ಷಮಾಯಾಚನೆಯಲ್ಲಿ, ‘ನಾವು ಯಾರ ಭಾವನೆಗಳನ್ನು ನೋಯಿಸಲು ಬಯಸುವುದಿಲ್ಲ. ಈ ಬಗ್ಗೆ ನಮಗೆ ಅರಿವು ಮೂಡಿಸಿದ ನಂತರ, ನಾವು ಆ ದೃಶ್ಯಗಳನ್ನು ತೆಗೆದುಹಾಕಿದ್ದೇವೆ ಅಥವಾ ಸಂಕಲಿಸಿದ್ದೇವೆ. ನಮ್ಮ ಪ್ರೇಕ್ಷಕರ ಶ್ರದ್ಧೆಯನ್ನು ನಾವು ಗೌರವಿಸುತ್ತೇವೆ ಮತ್ತು ಅವರ ಭಾವನೆಗಳಿಗೆ ನೋವುಂಟು ಮಾಡಿದಕ್ಕಾಗಿ ಬೇಷರತ್ತು ಕ್ಷಮೆಯಾಚಿಸುತ್ತೇವೆ’ ಎಂದು ತಿಳಿಸಿದೆ.