ಕೆಲಸದ ಆಮಿಷವನ್ನು ತೋರಿಸಿ ಯುವತಿಯ ಅತ್ಯಾಚಾರ ಮಾಡಿದ ಆರೋಪ
|
ಬೆಂಗಳೂರು – ಬಿಜೆಪಿ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವ ಮತ್ತು ಬೆಳಗಾವಿಯ ಉಸ್ತುವಾರಿ ಸಚಿವ ರಮೇಶ ಜಾರಕೀಹೋಳಿಯವರು ೨೫ ವರ್ಷದ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಮತ್ತು ನಾಗರಿಕ ಹಕ್ಕುಗಳ ಹೋರಾಟ ಸಮಿತಿಯ ಅಧ್ಯಕ್ಷ ದಿನೇಶ ಕಲ್ಹಳ್ಳಿ ದೂರನ್ನು ದಾಖಲಿಸಿದ್ದಾರೆ. ಕೆಪಿಟಿಸಿಎಲ್ (ಕರ್ನಾಟಕ ಪವರ್ ಟ್ರಾನ್ಸ್ ಮಿಶನ್ ಕಾರ್ಪೊರೇಶನ್ ಲಿಮಿಟೆಡ್) ನಲ್ಲಿ ಉದ್ಯೋಗ ನೀಡುವ ಭರವಸೆ ನೀಡುವ ಮೂಲಕ ಈ ದೌರ್ಜನ್ಯ ಎಸಗಲಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ. ದಿನೇಶ್ ಕಲ್ಹಳ್ಳಿಯವರು ಸಂತ್ರಸ್ತೆ ಮತ್ತು ಜಾರಕೀಹೋಳಿ ನಡುವಿನ ಖಾಸಗಿ ಕ್ಷಣಗಳ ಸಿಡಿಯನ್ನು ಪ್ರಸಾರ ಮಾಡಿದ್ದಾರೆ. ರಮೇಶ್ ಜಾರಕೀಹೋಳಿ ಈ ಹಿಂದೆ ಕಾಂಗ್ರೆಸ್ ನಲ್ಲಿದ್ದರು. ಪ್ರತಿಭಟನೆಯ ನಂತರ ಜಾರಕೀಹೋಳಿ ರಾಜೀನಾಮೆ ನೀಡಿದರು.
Social activist #DineshKallahalli alleged in his complaint that the woman aged about 25 was sexually assaulted by #BJP leader & Minister #RameshJarkiholi many times after being promised a job in KPTCL. @ManjuS_TNIE @santwana99 @XpressBengaluru https://t.co/wciLjzVTo8
— The New Indian Express (@NewIndianXpress) March 2, 2021
ಈ ದೂರಿನ ನಂತರ ಕಾಂಗ್ರೆಸ್ ಕಾರ್ಯಕರ್ತರು ರಮೇಶ್ ಜಾರಕೀಹೋಳಿಯವರ ವಿರುದ್ಧ ವಿವಿಧ ಸ್ಥಳಗಳಲ್ಲಿ ಪ್ರತಿಭಟನೆ ನಡೆಸಿದರು, ಜಾರಕೀಹೋಳಿ ರಾಜೀನಾಮೆಗೆ ಒತ್ತಾಯಿಸಿದರು. ಆರೋಪಕ್ಕೆ ಸಂಬಂಧಿಸಿದಂತೆ, ಇದು ರಾಜಕೀಯ ಪಿತೂರಿಯಾಗಿದೆ. ಇದನ್ನು ಕೂಲಂಕಷವಾಗಿ ತನಿಖೆ ನಡೆಸಿ ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜಾರಕೀಹೋಳಿಯವರು ಹೇಳಿದ್ದಾರೆ.