ದೇಶವನ್ನು ಆಳುವಾಗಲೂ ಕಾಂಗ್ರೆಸ್ ಇಂತಹ ಗಂಭೀರ ತಪ್ಪುಗಳನ್ನು ಮಾಡಿದ ಪರಿಣಾಮ ದೇಶವು ಇನ್ನೂ ಅನುಭವಿಸುತ್ತಿದೆ!
ನವ ದೆಹಲಿ: ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಪತ್ನಿ ಕಮಲಾ ನೆಹರುರವರ ಪುಣ್ಯತಿಥಿಯು ಫೆಬ್ರವರಿ ೨೮ ರಂದು ಇತ್ತು; ಆದರೆ ಕಾಂಗ್ರೆಸ್ ಇದನ್ನು ಜಯಂತಿ ಎಂದು ಆಚರಿಸಿತು. ಕಾಂಗ್ರೆಸ್ ಅಧಿಕೃತ ಟ್ವಿಟರ್ ಖಾತೆಯಿಂದ ಅವರಿಗೆ ವಂದನೆ ಸಲ್ಲಿಸಿತು. ಟ್ವೀಟ್ ಜೊತೆಗಿರುವ ಚಿತ್ರದಲ್ಲಿ ಅವರ ಜನ್ಮ ದಿನಾಂಕ ಮತ್ತು ಮೃತರಾದ ದಿನಾಂಕವನ್ನು ಸ್ಪಷ್ಟವಾಗಿ ಬರೆಯಲಾಗಿದೆ, ಆದರೂ ಈ ತಪ್ಪಾಗಿದೆ. ಇದರ ನಂತರ ಕಾಂಗ್ರೆಸ್ ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆಗೆ ಗುರಿಯಾಯಿತು.
ಕಾಂಗ್ರೆಸ್ ೨೦೧೯ ರಲ್ಲಿ ಕಮಲಾ ನೆಹರೂ ಅವರ ಜಂತಿಯಂದು ಮಾಡಿದ ’ಪೋಸ್ಟ್’ ಅನ್ನು ಕಾಪಿ ಮಾಡಿದ್ದರಿಂದ ಈ ತಪ್ಪನ್ನು ಮಾಡಿರುವುದು ಗಮನಕ್ಕೆ ಬಂದಿದೆ. ಕಮಲಾ ನೆಹರೂ ಅವರ ಛಾಯಾಚಿತ್ರವನ್ನು ಮಾತ್ರ ಬದಲಾಯಿಸಲಾಗಿದೆ. ಈ ದೋಷವನ್ನು ನಂತರ ಸರಿಪಡಿಸಲಾಗಿದೆ.
We recall Kamala Nehru on her death anniversary. She played a pivotal role in Indian Independence struggle & was arrested many times by the British during the non-cooperation movement. She ran the Congress dispensary which was later converted to the Kamala Nehru Memorial Hospital pic.twitter.com/sIhaBaAfqD
— Congress (@INCIndia) February 28, 2021