ಅನೈತಿಕ ಸಂಬಂಧದ ಅನುಮಾನದ ಮೇಲೆ ಗಂಡನಿಂದ ಹೆಂಡತಿಯ ಕೊಲೆ

ಸಾಕ್ಷಿಗಳಿಂದ ಸಹಾಯ ಮಾಡುವ ಬದಲು ಮೊಬೈಲ್‌ನಲ್ಲಿ ಘಟನೆಯ ಚಿತ್ರೀಕರಣ

* ಇದು ಸಮಾಜದ ಸಂವೇದನಾಶೀಲತೆ ನಾಶವಾಗುತ್ತಿದೆ ಎಂಬುದರ ಸಂಕೇತವಾಗಿದೆ. ಸ್ವಾತಂತ್ರ್ಯದ ೭೪ ವರ್ಷಗಳಲ್ಲಿ ಇದುವರೆಗಿನ ಆಡಳಿತಗಾರರು ‘ಅಂತಹ ಪರಿಸ್ಥಿತಿಯಲ್ಲಿ ಪರಸ್ಪರರನ್ನು ಸಹಾಯ ಮಾಡಬೇಕು’, ಎಂದು ಕಲಿಸಲಿಲ್ಲ ಎಂಬುದರ ಫಲಿತಾಂಶ ಇದು !

* ಇಂತಹ ಘಟನೆಗಳು ನಡುರಸ್ತೆಯಲ್ಲಿ ಹಾಡುಹಗಲೇ ನಡೆಯುತ್ತವೆ ಅಂದರೆ ಉತ್ತರ ಪ್ರದೇಶದ ಕಾನೂನು ವ್ಯವಸ್ಥೆ ಎಷ್ಟು ಚಿಂತಾಜನಕವಾಗಿದೆ ಎಂಬುದನ್ನು ತೋರಿಸುತ್ತದೆ!

ಲಕ್ಷ್ಮಣಪುರಿ (ಉತ್ತರಪ್ರದೇಶ) – ಮಡಿಯಾವ್ ಪ್ರದೇಶದ ಪ್ರೀತಿನಗರದಲ್ಲಿ ರಫೀಕ್‌ ಎಂಬವನು ತನ್ನ ಪತ್ನಿ ಅಫ್ಸಾನಾಳನ್ನು ಚಾಕುವಿನಿಂದ ಇರಿದು ಸಾಯಿಸಿರುವ ಘಟನೆ ನಡೆಡಿದೆ. ಅವಳು ರಕ್ತಸಿಕ್ತಳಾಗಿ ರಸ್ತೆಯಲ್ಲಿ ನರಳುತ್ತಿದ್ದಳು. ಅಲ್ಲಿದ್ದ ಜನರು ಮೊಬೈಲ್‌ನಲ್ಲಿ ವೀಡಿಯೋವನ್ನು ಚಿತ್ರಿಸಿದರು; ಆದರೆ ಅವಳ ಸಹಾಯಕ್ಕೆ ಯಾರೂ ಮುಂದೆ ಬರಲಿಲ್ಲ. ಪೊಲೀಸರು ಸ್ಥಳಕ್ಕೆ ಧಾವಿಸಿ ಆಕೆಯನ್ನು ಆಸ್ಪತ್ರೆಗೆ ಸಾಗಿಸಿದರು. ಅಲ್ಲಿ ವೈದ್ಯರು ಅಫ್ಸಾನಾ ಸಾವನ್ನಪ್ಪಿದ್ದಾರೆಂದು ಘೋಷಿಸಿದರು. ಪೊಲೀಸರು ರಫೀಕ್‌ನನ್ನು ಬಂಧಿಸಿದ್ದಾರೆ. ರಫೀಕ್‌ನಿಗೆ ಅಫ್ಸಾನಾಗೆ ಅನೈತಿಕ ಸಂಬಂಧವಿದೆ ಎಂದು ಸಂಶಯವಿತ್ತು. ಅವನು ಅನೇಕ ಬಾರಿ ಅದರ ಬಗ್ಗೆ ಅವಳಿಗೆ ತಿಳಿಹೇಳಿದ್ದನು. ಅವಳನ್ನು ‘ಹಳ್ಳಿಗೆ ಹೋಗೋಣ’ ಎಂದೂ ಹೇಳಿದ್ದನು; ಆದರೆ ಅವಳು ಏನೂ ಕೇಳಲಿಲ್ಲ. ಅವಳು ವಿಚ್ಛೇದನೆ ಕೂಡ ಕೊಡುತ್ತಿರಲಿಲ್ಲ. ‘ನರಳಾಡಿ ಸಾಯಬೇಕು ನೀನು’ ಎಂದು ಅವಳು ಹೇಳಿದ್ದಳು, ಎಂದು ರಫೀಕನು ಪೊಲೀಸರಿಗೆ ತಿಳಿಸಿದ್ದಾನೆ.