ಉತ್ತರಾಖಂಡದಲ್ಲಿ ಬಿಜೆಪಿ ಸರಕಾರದ ಅವಧಿಯಲ್ಲಿ ನಡೆಯಲಿರುವ ಕುಂಭಮೇಳಾದ ಆಯೋಜನೆ ಬಗ್ಗೆ ಸಂತರು ಮತ್ತು ಮಹಂತರು ಅಸಮಾಧಾನ ಹೊಂದಿದ್ದರೆ, ಇದರ ಬಗ್ಗೆ ಸರಕಾರ ವಿಚಾರ ಮಾಡಬೇಕು!
ಹರಿದ್ವಾರ (ಉತ್ತರಾಖಂಡ) – ರಾಜ್ಯ ಸರ್ಕಾರವು ತನ್ನದೇ ಆದ ನ್ಯೂನತೆಗಳನ್ನು ಮರೆಮಾಚಲು ಕರೋನಾ ಹೆಸರಿನಲ್ಲಿ ತೆಗೆದುಕೊಂಡ ನಿರ್ಧಾರವನ್ನು ಸಂತರ ತಲೆಗೆ ಕಟ್ಟುತ್ತಿದ್ದಾರೆ ಎಂದು ಅಖಿಲ ಭಾರತ ಅಖಾಡಾ ಪರಿಷತ್ ಅಧ್ಯಕ್ಷ ಮಹಂತ್ ನರೇಂದ್ರ ಗಿರಿ ಆರೋಪಿಸಿದ್ದಾರೆ. ಕುಂಭಮೇಳದ ಸಂದರ್ಭದಲ್ಲಿ ಸರಕಾರವು ಸಂತರಿಗೆ ಸೌಲಭ್ಯಗಳನ್ನು ಒದಗಿಸುತ್ತಿಲ್ಲ ಎಂದು ಅವರು ಟೀಕಿಸಿದರು. ಸಂನ್ಯಾಸಿ ಅಖಾಡಾಗಳು ಮತ್ತು ಸಂತರೊಂದಿಗೆ ಚರ್ಚಿಸಿದ ನಂತರ ಅವರು ಮಾತನಾಡುತ್ತಿದ್ದರು. ಸರಕಾರವು ಸೌಲಭ್ಯಗಳನ್ನು ಒದಗಿಸದಿರುವ ಬಗ್ಗೆ ಸಂನ್ಯಾಸಿ ಅಖಾಡಗಳು ಅಸಮಾಧಾನ ಹೊಂದಿದ್ದರಿಂದ ಮಹಂತ್ ಗಿರಿ ಸಂತರ ಅಖಾಡಾದವರನ್ನು ಭೇಟಿ ಮಾಡಲು ಇಲ್ಲಿಗೆ ಬಂದಿದ್ದರು. ಮಹಾಂತ್ ನರೇಂದ್ರ ಗಿರಿ ಅವರು ಪ್ರಯಾಗರಾಜ್ ಮತ್ತು ವೃಂದಾವನದ ಕುಂಭದಲ್ಲಿ ನಮಗೆ ಯಾವುದೇ ಸಮಸ್ಯೆ ಉಂಟಾಗದಿರುವಾಗ, ದೇವಭೂಮಿಯಲ್ಲಿ ಹೇಗೆ ಸಮಸ್ಯೆ ಉಂಟಾಗುತ್ತದೆ ? ಅಖಿಲ ಭಾರತೀಯ ಅಖಾಡಾ ಪರಿಷತ್‌ಗೆ ಹೇಳಿ ಮುಖ್ಯಮಂತ್ರಿ ೪ ರಾಜಯೋಗಿ ಸ್ನಾನಗಳನ್ನು ಘೋಷಿಸಿದ್ದರು; ಆದಾಗ್ಯೂ, ಸಂತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಸರಕಾರವು ಅದರ ಸಂಖ್ಯೆಯನ್ನು ಎರಡಕ್ಕೆ ಇಳಿಸಿತು ಮತ್ತು ಕುಂಭದ ಅವಧಿಯನ್ನು ಕಡಿಮೆ ಮಾಡಿತು. ಸರಕಾರದ ನಿರ್ಧಾರಗಳನ್ನು ಸಂತರು ಒಪ್ಪಿಕೊಳ್ಳುವುದಿಲ್ಲ.