ಕಾನಪುರದ ಮಸೀದಿಗಳ ಮೇಲೆ ಅಕ್ರಮ ಭೋಂಗಾಗಳ ವಿರುದ್ಧ ಹಿಂದುತ್ವನಿಷ್ಠ ಸಂಘಟನೆಗಳಿಂದ ಸಹಿ ಅಭಿಯಾನ !

ಹಿಂದುತ್ವನಿಷ್ಠ ಮತ್ತು ರಾಷ್ಟ್ರನಿಷ್ಠ ಯೋಗಿ ಆದಿತ್ಯನಾಥರು ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿದ್ದಾಗ, ರಾಷ್ಟ್ರಪ್ರೇಮಿಗಳು ಇಂತಹ ಅಭಿಯಾನವನ್ನು ನಡೆಸಬೇಕಾಗುವುದು ಅಪೇಕ್ಷಿತವಲ್ಲ! ಸರ್ಕಾರವೇ ಈಗ ಉಪಕ್ರಮವನ್ನು ಕೈಗೆತ್ತಿಕೊಂಡು ಅಕ್ರಮ ಭೋಂಗಾಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು!

ಕಾನಪುರ (ಉತ್ತರ ಪ್ರದೇಶ) – ಭಜರಂಗದಳದ ನೇತೃತ್ವದಲ್ಲಿ ಹಿಂದುತ್ವನಿಷ್ಠ ಸಂಘಟನೆಗಳು ಇಲ್ಲಿನ ಮಸೀದಿಗಳ ಮೇಲೆ ಅಕ್ರಮ ಭೋಂಗಾಗಳ ವಿರುದ್ಧ ಸಹಿ ಅಭಿಯಾನವನ್ನು ಪ್ರಾರಂಭಿಸಿದ್ದು ೧ ಲಕ್ಷ ಸಹಿಗಳನ್ನು ಸಂಗ್ರಹಿಸುವುದು ಅವರ ಉದ್ದೇಶವಾಗಿದೆ. ಈ ಸಹಿಗಳ ಜೊತೆಗೆ, ಭಾರತದ ರಾಷ್ಟ್ರಪತಿಗಳಿಗೆ ಮನವಿಯನ್ನೂ ಸಲ್ಲಿಸಲಾಗುವುದು.

(ಅಂತಹ ಸಂದರ್ಭಗಳಲ್ಲಿ, ರಾಷ್ಟ್ರಪತಿಗಳಿಗಲ್ಲ ರಾಜ್ಯ ಸರ್ಕಾರಕ್ಕೆ ಅಧಿಕಾರವಿರುವುದರಿಂದ ದೇಶಪ್ರೇಮಿಗಳು ಈ ಅಭಿಯಾನದ ಸರಿಯಾದ ಫಲಿತಾಂಶವನ್ನು ಪಡೆಯಲು ರಾಜ್ಯ ಸರ್ಕಾರವನ್ನು ಒತ್ತಾಯಿಸುವ ಅಪೇಕ್ಷಿತವಿದೆ! – ಸಂಪಾದಕರು)