ಅಖಂಡ ಭಾರತದ ಆವಶ್ಯಕತೆಗೆ ಒತ್ತು ನೀಡಿದ ಸರಸಂಘಚಾಲಕರು ಬಲದಿಂದಲ್ಲ, ಹಿಂದೂ ಧರ್ಮದ ಆಧಾರದಲ್ಲಿ ‘ಅಖಂಡ ಭಾರತ’ವನ್ನು ರಚಿಸಲು ಸಾಧ್ಯವಿದೆ! – ಸರಸಂಘಚಾಲಕ ಡಾ. ಮೋಹನ್ ಭಾಗವತ್

ಭಾಗ್ಯನಗರ (ತೆಲಂಗಾಣ) – ಹಿಂದೂ ಧರ್ಮದ ಆಧಾರದಲ್ಲಿ ವಿಶ್ವದ ಕಲ್ಯಾಣಕ್ಕಾಗಿ ಗೌರವಶಾಲಿ ‘ಅಖಂಡ ಭಾರತ’ವನ್ನು ರಚಿಸಲು ಸಾಧ್ಯವಿದೆ; ಆದರೆ ಇದನ್ನು ಬಲದಿಂದ ಮಾಡಲು ಸಾಧ್ಯವಿಲ್ಲ. ಇದಕ್ಕಾಗಿ ದೇಶಭಕ್ತಿಯ ಮನೋಭಾವವನ್ನು ಜಾಗೃತಗೊಳಿಸುವುದು ಆವಶ್ಯಕ ಎಂದು ಸರಸಂಘಚಾಲಕ ಡಾ. ಮೋಹನ ಭಾಗವತ್ ಇವರು ಇಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪ್ರತಿಪಾದಿಸಿದರು.

ಸರಸಂಘಚಾಲಕರು ಮಂಡಿಸಿದ ಅಂಶಗಳು

೧. ನೀವು ಅವರ (ಪಾಕಿಸ್ತಾನ ಮತ್ತು ಬಾಂಗ್ಲಾದೇಶ) ಮೇಲೆ ದಬ್ಬಾಳಿಕೆ ಮಾಡುವ ಅಗತ್ಯವಿಲ್ಲ. ನಾವು ಅವರನ್ನು ಒಟ್ಟಿಗೆ ಸೇರಿಸುವ ಬಗ್ಗೆ ಮಾತನಾಡುತ್ತಿದ್ದೇವೆ. ನಾವು ಅಖಂಡ ಭಾರತದ ಬಗ್ಗೆ ಮಾತನಾಡುವಾಗ, ಅದನ್ನು ಅಧಿಕಾರದ ಬಲದಿಂದ ಸಾಧಿಸಲು ನಾವು ಬಯಸುವುದಿಲ್ಲ, ಆದರೆ ಸನಾತನ ಧರ್ಮದ ಆಧಾರದ ಮೇಲೆ ಜೋಡಿಸುವ ಬಗ್ಗೆ ಹೇಳುತ್ತೇವೆ. ಸನಾತನ ಧರ್ಮವು ಮನುಕುಲ ಮತ್ತು ಇಡೀ ಜಗತ್ತಿನ ಧರ್ಮವಾಗಿದ್ದು, ಈಗ ಇದನ್ನು ‘ಹಿಂದೂ ಧರ್ಮ’ ಎಂದು ಕರೆಯಲಾಗುತ್ತದೆ. ‘ವಸುಧೈವ ಕುಟುಂಬಕಮ್’ನ ಆಧಾರದಲ್ಲಿ ಜಗತ್ತಿನಲ್ಲಿ ಆನಂದ ಮತ್ತು ಶಾಂತಿಯನ್ನು ಪುನಃ ಸ್ಥಾಪಿಸಬಹುದು.

. ತಮ್ಮನ್ನು ತಾವು ಭಾರತದ ಭಾಗವೆಂದು ಪರಿಗಣಿಸದ ಭಾಗಗಳನ್ನು ಭಾರತದೊಂದಿಗೆ ಜೋಡಿಸುವುದು ಈಗ ಹೆಚ್ಚು ಮುಖ್ಯವಾಗಿದೆ. ಈ ದೇಶಗಳು ತಮಗೆ ಸಾಧ್ಯವಿರುವ ಎಲ್ಲವನ್ನೂ ಮಾಡಿದವು; ಆದರೆ ತೃಪ್ತರಾಗಿಲ್ಲ. ಅವರ ಬಿಕ್ಕಟ್ಟಿಗೆ ಉತ್ತರವೆಂದರೆ ಭಾರತದೊಂದಿಗೆ ಮರುಜೋಡಣೆ. ಅದು ಅವರ ಎಲ್ಲಾ ಸಮಸ್ಯೆಗಳಿಗೆ ಪರಿಹಾರಿವಾಗಿದೆ.

. ಗಾಂಧಾರವನ್ನು ಅಫ್ಘಾನಿಸ್ತಾನವಾಗಿ ಪರಿವರ್ತಿಸಲಾಯಿತು, ಪಾಕಿಸ್ತಾನವನ್ನು ರಚಿಸಲಾಯಿತು. ಅವರ ಸ್ಥಾಪನೆಯ ನಂತರ ಶಾಂತಿ ಇದೆಯೇ?

೪. ವಿಭಜನೆಯ ಬಗ್ಗೆ ನೆಹರೂ ಅವರನ್ನು ಕೇಳಿದಾಗ, ಅವರು ಅದನ್ನು ‘ಇದು ಮೂರ್ಖರ ಕನಸು’ ಎಂದು ಹೇಳಿ ನಿರಾಕರಿಸಿದ್ದರು. ವಿಭಜನೆಗೆ ೬ ತಿಂಗಳ ಮೊದಲು, ವಿಭಜನೆ ನಡೆಯುತ್ತದೆ ಎಂದು ಯಾರೂ ನಂಬಲೂ ಸಾಧ್ಯವಾಗಲಿಲ್ಲ; ಆದರೆ ಹಾಗೆ ಆಯಿತು.

. ಬ್ರಿಟಿಷ್ ಆಡಳಿತದ ಅವಧಿಯಲ್ಲಿ ಲಾರ್ಡ್ ವೇವೆಲ್ ತಮ್ಮ ಸಂಸತ್ತಿನಲ್ಲಿ, ‘ಭಾರತವನ್ನು ದೇವರು ನಿರ್ಮಿಸಿದ್ದಾನೆ. ಅದನ್ನು ಯಾರು ವಿಭಜಿಸಬಹುದು?’, ಎಂದಿದ್ದರು. ಆದರೆ ಕೊನೆಗೆ ಅಸಾಧ್ಯವೆಂದು ತೋರಿದ್ದು ಸಂಭವಿಸಿತು. ಈಗ ‘ಅಖಂಡ ಭಾರತ’ ಅಸಾಧ್ಯವೆಂದು ತೋರುತ್ತದೆ; ಆದಾಗ್ಯೂ, ಅದು ನನಸಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ; ಏಕೆಂದರೆ ಅದರ ಆವಶ್ಯಕತೆ ಇಂದಿದೆ.