ದೂರಿನ ನಂತರ ೨೪ ಗಂಟೆಗಳ ಒಳಗೆ ಮಾಹಿತಿ ಅಳಿಸಬೇಕಾಗುತ್ತದೆ !
ರಾಷ್ಟ್ರಪ್ರೇಮಿ ಮತ್ತು ಧರ್ಮಪ್ರೇಮಿಗಳು ಈ ನಿಯಮಾವಳಿಗಳನ್ನು ರೂಪಿಸಬೇಕೆಂದು ಒತ್ತಾಯಿಸಿದ ನಂತರ, ಸರ್ಕಾರವು ಅದನ್ನು ಗಮನಿಸಿ ಅದನ್ನು ಸಿದ್ಧಪಡಿಸಿತು. ಆದರೆ ಇದು ಈಗಾಗಲೇ ಆಗಬೇಕಿತ್ತು. ಭಾರತ ಮತ್ತು ಹಿಂದೂ ಧರ್ಮದ ಬಗ್ಗೆ ಸಾಮಾಜಿಕ ಮಾಧ್ಯಮ ಮತ್ತು ಒಟಿಟಿ ಮೂಲಕ ಯಾರಿಗೂ ಅಪಪ್ರಚಾರ ಮಾಡುವ ಧೈರ್ಯವಾಗದಂತೆ ನಿಯಮಾವಳಿ ಜೊತೆಗೆ ಸರ್ಕಾರವು ಕಠಿಣ ಕ್ರಮ ಜರುಗಿಸುವುದು ಆವಶ್ಯಕವಾಗಿದೆ !
ನವ ದೆಹಲಿ: ಹಿಂದೂ ಧರ್ಮ, ದೇವತೆಗಳು, ರಾಷ್ಟ್ರಪುರುಷರು ಇತ್ಯಾದಿಗಳನ್ನು ಅವಮಾನಿಸಿದ್ದಕ್ಕಾಗಿ ಕೇಂದ್ರವು ಸಾಮಾಜಿಕ ಮಾಧ್ಯಮಗಳು ಹಾಗೂ ‘ಓವರ್ ದಿ ಟಾಪ್’ (OTT) ಪ್ಲಾಟ್‌ಫಾರ್ಮಗಳಿಗೆ ಹೊಸ ನಿಯಮಗಳನ್ನು ಘೋಷಿಸಿದೆ. ರಾಷ್ಟ್ರಪ್ರೇಮಿಗಳು ಮತ್ತು ಧರ್ಮಪ್ರೇಮಿಗಳು ಈ ಬೇಡಿಕೆಗಳನ್ನು ಈಡೇರಿಸುವಂತೆ ಸತತವಾಗಿ ಒತ್ತಾಯಿಸುತ್ತಿದ್ದರು.
New social media and OTT rules: Government notifies Information Technology (Intermediary Guidelines and Digital Media Ethics Code) Rules 2021 https://t.co/iep3iuSfma via @eOrganiser
— Organiser Weekly (@eOrganiser) February 25, 2021
ಇಷ್ಟು ಕಾಲಾವಧಿಯ ನಂತರ ಸರ್ಕಾರ ಸ್ಪಂದಿಸಿದೆ. ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಮತ್ತು ಮಾಹಿತಿ ಹಾಗೂ ಪ್ರಸಾರ ಸಚಿವ ಪ್ರಕಾಶ ಜಾವಡೇಕರ್ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು. ಈ ನಿಯಮಗಳು ಸಾಮಾಜಿಕ ಮಾಧ್ಯಮಗಳಾದ ಫೇಸ್‌ಬುಕ್, ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಮ್, ವಾಟ್ಸಾಪ್ ಜೊತೆಗೆ ಒಟಿಟಿ ಪ್ಲಾಟ್‌ಫಾರ್ಮಗಳಾದ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್, ಹಾಟ್ ಸ್ಟಾರಗಳಿಗೆ ಅನ್ವಯವಾಗುತ್ತವೆ. ಈ ನಿಯಮಗಳನ್ನು ಮುಂದಿನ ೩ ತಿಂಗಳಲ್ಲಿ ಜಾರಿಗೆ ತರಲಾಗುವುದು.
Government notifies new rules for social media, digital news and OTT platforms. @PayaswiniLLB
Read more: https://t.co/sSk1ns14Mi pic.twitter.com/vRsu8jYg2L
— BloombergQuint (@BloombergQuint) February 25, 2021
ರವಿಶಂಕರ್ ಪ್ರಸಾದ್ ಇವರು, ‘ಸಾಮಾಜಿಕ ಮಾಧ್ಯಗಳಲ್ಲಿ ತಮಗೆ ಬೇಕಾದಂತೆ ಬದಲಾವಣೆ ಮಾಡಿದ ಛಾಯಾಚಿತ್ರಗಳನ್ನು ಹಂಚಿಕೊಳ್ಳಲಾಗುತ್ತಿದೆ ಎಂಬ ದೂರುಗಳು ನಮಗೆ ಬರುತ್ತವೆ. ದೇಶದ ನಾಗರಿಕ ವ್ಯವಸ್ಥೆಗೆ ಧಕ್ಕೆ ತರುವಂತಹ ಸಂಗತಿಗಳು ನಡೆಯುತ್ತಿವೆ. ಸಾಮಾಜಿಕ ಮಾಧ್ಯಮಗಳನ್ನು ಭಯೋತ್ಪಾದಕರು ಮತ್ತು ರಾಷ್ಟ್ರವಿರೋಧಿ ಶಕ್ತಿಗಳು ಬಳಸುತ್ತಾರೆ. ಸುಳ್ಳು ಸುದ್ದಿ ಕೂಡ ದೊಡ್ಡ ಪ್ರಮಾಣದಲ್ಲಿ ಹರಡಿದೆ. ಹಣಕಾಸಿನ ಹಗರಣಗಳು ನಡೆಯುತ್ತಿವೆ. ಸಂಸತ್ತಿನಲ್ಲಿ ಮಾತ್ರವಲ್ಲ, ಈ ವಿಷಯವು ಸರ್ವೋಚ್ಚ ನ್ಯಾಯಾಲಯದವರೆಗೂ ತಲುಪಿದೆ. ಅದಕ್ಕಾಗಿಯೇ ನಾವು ಸಾಮಾಜಿಕ ಮಾಧ್ಯಮಗಳಿಗಾಗಿ ಹೊಸ ನೀತಿಯನ್ನು ತರುತ್ತಿದ್ದೇವೆ.
ಸಾಮಾಜಿಕ ಮಾಧ್ಯಮಗಳಿಗಾಗಿ ನಿಯಮಗಳು !
೧. ದೂರನ್ನು ಪರಿಹರಿಸಲು ಪ್ರತಿಯೊಬ್ಬರೂ ವ್ಯವಸ್ಥೆಯನ್ನು ಹೊಂದಿರಬೇಕು. ದೂರು ಪರಿಹಾರ ವೇದಿಕೆ ಮತ್ತು ಅಧಿಕಾರಿಗಳನ್ನು ನೇಮಿಸಬೇಕಾಗುತ್ತದೆ. ೨೪ ಗಂಟೆಗಳ ಒಳಗೆ ದೂರು ದಾಖಲಿಸಬೇಕು ಮತ್ತು ೧೪ ದಿನಗಳಲ್ಲಿ ವಿಲೇವಾರಿ ಮಾಡಬೇಕು.
೨. ಸಾಮಾಜಿಕ ಮಾಧ್ಯಮದ ಬಳಕೆದಾರರು, ವಿಶೇಷವಾಗಿ ಮಹಿಳೆಯರಿಗೆ ಕಿರುಕುಳ ನೀಡುವ ವಿಷಯ ಉದಾ. ಆಕ್ಷೇಪಾರ್ಹ ಛಾಯಾಚಿತ್ರಗಳನ್ನು ಪ್ರಸಾರ ಮಾಡಿದರೆ, ದೂರು ದಾಖಲಾದ ೨೪ ಗಂಟೆಗಳ ಒಳಗೆ ಅವುಗಳನ್ನು ತೆಗೆದುಹಾಕಬೇಕು.
೩. ದೂರುಗಳ ವರದಿಯನ್ನು ಪ್ರತಿ ತಿಂಗಳು ನೀಡಬೇಕಾಗುತ್ತದೆ. ತಿಂಗಳಲ್ಲಿ ಎಷ್ಟು ದೂರುಗಳು ಬಂದವು ಮತ್ತು ಅದರ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳುವುದು ಆವಶ್ಯಕ.
೪. ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಅಪಪ್ರಚಾರ ನಡೆದರೆ ಅದನ್ನು ಯಾರು ಪ್ರಾರಂಭಿಸಿದರು ಎಂಬ ಮಾಹಿತಿಯನ್ನು ಸಂಬಂಧಪಟ್ಟ ಕಂಪನಿಯು ನೀಡಬೇಕು. ಬರವಣಿಗೆ ಭಾರತದ ಹೊರಗಿನಿಂದ ಬಂದಿದ್ದರೆ, ಅದನ್ನು ಭಾರತದಲ್ಲಿ ಮೊದಲ ಬಾರಿಗೆ ಹಂಚಿದವರು ಯಾರು?, ಎಂದು ಹೇಳಬೇಕಾಗುವುದು.
೫. ಬಳಕೆದಾರರ ವೆರಿಫಿಕೇಶನ್ ಯಾವ ರೀತಿ ಮಾಡಲಾಗಿದೆ ಅದರ ಮಾಹಿತಿ ತಿಳಿಸಬೇಕಾಗುತ್ತದೆ.
೬. ಬಳಕೆದಾರರ ಡೇಟಾ, ಟ್ವೀಟ್‌ಗಳು ಅಥವಾ ಬರವಣಿಗೆಯನ್ನು ಅಳಿಸಿದ್ದರೆ, ಅವರಿಗೆ ಆ ಬಗ್ಗೆ ತಿಳಿಸಿ ವಿಚಾರಣೆ ನಡೆಸಬೇಕಾಗುವುದು.
ಒಟಿಟಿ ಪ್ಲಾಟ್‌ಫಾರ್ಮಗಳಿಗೆ ನಿಯಮಗಳು
೧. ಒಟಿಟಿ ಮತ್ತು ಡಿಜಿಟಲ್ ನ್ಯೂಸ್ ಮಾಧ್ಯಮಗಳು ತಮ್ಮ ಬಗ್ಗೆ ವಿವರವಾದ ಮಾಹಿತಿಯನ್ನು ಒದಗಿಸಬೇಕಾಗಿದೆ. ನೋಂದಣಿ ಕಡ್ಡಾಯವಾಗುವುದಿಲ್ಲ.
೨. ಇಬ್ಬರೂ ದೂರು ನಿವಾರಣಾ ವ್ಯವಸ್ಥೆಯನ್ನು ಪ್ರಾರಂಭಿಸಬೇಕಾಗುತ್ತದೆ. ತಪ್ಪು ಇದ್ದರೆ, ಸ್ವತಃ ನಿಯಂತ್ರಿಸಿಕೊಳ್ಳಬೇಕು.
೩. ಒಟಿಟಿ ಪ್ಲಾಟ್‌ಫಾರ್ಮಗಳು ತಮ್ಮನ್ನು ನಿಯಂತ್ರಿಸುವ ಸಂಸ್ಥೆಯನ್ನು ಸ್ಥಾಪಿಸಬೇಕು. ಇದನ್ನು ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರು ಅಥವಾ ಯಾರಾದರೂ ಖ್ಯಾತ ವ್ಯಕ್ತಿಯು ನಿರ್ವಹಿಸಬೇಕು.
೪. ಸೆನ್ಸಾರ್ ಮಂಡಳಿಯಂತೆ, ಒಟಿಟಿಯ ಮೇಲಿನ ವಿಷಯಗಳೂ ವಯಸ್ಸಿನ ಪ್ರಮಾಣೀಕರಣ ವ್ಯವಸ್ಥೆಯನ್ನು ಹೊಂದಿರಬೇಕು. ಟಿವಿ, ಚಲನಚಿತ್ರಗಳಿಗೆ ಇರುವಂತಹ ನೀತಿ ಸಂಹಿತೆಯನ್ನು ಹೊಂದಿರಬೇಕು.
೫. ಡಿಜಿಟಲ್ ಮೀಡಿಯಾ ಪೋರ್ಟಲ್‌ಗಳಿಗೆ ವದಂತಿಗಳು ಮತ್ತು ತಪ್ಪು ಮಾಹಿತಿಯನ್ನು ಹಬ್ಬಿಸುವ ಯಾವುದೇ ಹಕ್ಕಿಲ್ಲ.