೧೯೨೧ ರಲ್ಲಿ ಮಲಬಾರ್‌ನಲ್ಲಾದ ಹಿಂದೂಗಳ ನರಮೇಧದ ಶತಮಾನೋತ್ಸವವನ್ನು ಆಚರಿಸಿದ ಪಿಎಫ್‌ಐ

ರಾ.ಸ್ವ.ಸೇವಕ ಸಂಘದ ಸಮವಸ್ತ್ರ ಧರಿಸಿದ ಜನರಿಗೆ ಕೈಕೋಳ ತೋಡಿಸಿದ ದೃಶ್ಯಾವಳಿಯನ್ನು ತೋರಿಸಿ ಮೆರವಣಿಗೆ

* ಹಿಂದೂ ಬಹುಸಂಖ್ಯಾತ ದೇಶದಲ್ಲಿ ಹಿಂದೂಗಳ ನರಮೇಧದ ಶತಮಾನೋತ್ಸವವನ್ನು ಆಚರಿಸಲಾಗುತ್ತದೆ ಎಂಬುದು ಹಿಂದೂಗಳಿಗೆ ನಾಚಿಕೆಗೇಡಿನ ಸಂಗತಿ ! ಇದು ಹಿಂದೂಗಳ ನರಮೇಧಕ್ಕೆ ಕಾರಣವಾಗಬಹುದು ಎಂದು ತೋರಿಸಲು ಪಿಎಫ್‌ಐ ಪ್ರಯತ್ನಿಸಿದೆ. ಈಗಲಾದರೂ ಕೇಂದ್ರ ಸರಕಾರವು ಪಿಎಫ್‌ಐಗೆ ನಿಷೇಧ ಹಾಕುವುದೇನು?

* ಕೇರಳದಲ್ಲಿ ಹಿಂದೂ ವಿರೋಧಿ ಕಮ್ಯುನಿಸ್ಟರ ಸರಕಾರ ಇರುವುದರಿಂದಲೇ, ಹಿಂದೂಗಳ ನರಮೇಧದ ಶತಮಾನೋತ್ಸವವನ್ನು ಯಾವುದೇ ಅಡೆತಡೆಯಿಲ್ಲದೆ ಆಚರಿಸಲಾಗುತ್ತಿದೆ ಎಂದು ಹೇಳಿದರೆ ಅದರಲ್ಲಿ ಆಶ್ಚರ್ಯವೇನಿಲ್ಲ !

ಮಲಪ್ಪುರಂ (ಕೇರಳ) – ಮೊಪ್ಲಾ ಹತ್ಯಾಕಾಂಡದ ೧೦೦ ನೇ ವಾರ್ಷಿಕೋತ್ಸವದ ಸ್ಮರಣಾರ್ಥನ ಫೆಬ್ರವರಿ ೧೯ ರಂದು ಜಿಹಾದಿ ಸಂಘಟನೆಯ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಮಲ್ಲಪುರಂ ಜಿಲ್ಲೆಯ ತೆನಿಪಲ್ಲಂ ನಗರದಲ್ಲಿ ಮೆರವಣಿಗೆಯನ್ನು ನಡೆಸಿತು. ಆ ಸಮಯದಲ್ಲಿ ಮತಾಂಧರು ಹಿಂದೂಗಳನ್ನು ಹತ್ಯಾಕಾಂಡ ಮಾಡಿದ್ದರು. ಈ ಮೆರವಣಿಗೆಯಲ್ಲಿ, ರಾ.ಸ್ವ. ಸಂಘದ ಸಮವಸ್ತ್ರ ಧರಿಸಿದ ಪುರುಷರಿಗೆ ಕೈಕೊಳ ಹಾಕಿದಂತೆ ತೋರಿಸಲಾಗಿದೆ. (ಸಂಘವು ಹಿಂದೂಗಳ ಮತಾಂತರವನ್ನು ವಿರೋಧಿಸುತ್ತದೆ. ಆದ್ದರಿಂದ, ಪಿಎಫ್‌ಐನಂತಹ ಜಿಹಾದಿ ಸಂಘಟನೆಗಳು ಸಂಘವನ್ನು ಕೀಳಾಗಿ ಕಾಣುತ್ತವೆ. ಇಂತಹ ತೀವ್ರ ಹಿಂದೂ ವಿರೋಧಿ ಸಂಘಟನೆಯು ಭಾರತದಲ್ಲಿ ಇನ್ನೂ ಹೇಗೆ ಸ್ವಚ್ಛಂದವಾಗಿ ಅಸ್ತಿತ್ವದಲ್ಲಿದೆ? – ಸಂಪಾದಕರು) ಈ ಮೆರವಣಿಗೆಯಲ್ಲಿ ಅಲ್ಹಾ ಹೂ ಅಕ್ಬರ್ ಸಹಿತ ಅನೇಕ ಇಸ್ಲಾಮಿ ಘೋಷಣೆಗಳನ್ನು ಹಾಕಲಾಯಿತು. ಈ ಮೆರವಣಿಗೆಯ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಲಾಗಿದೆ.

. ಮೆರವಣಿಗೆಯ ಸಂಘದ ಸಮವಸ್ತ್ರಧಾರಿ ಸದಸ್ಯರ ಜೊತೆಗೆ, ಬ್ರಿಟಿಷ್ ಅಧಿಕಾರಿಗಳ ಸಮವಸ್ತ್ರ ಧರಿಸಿದ ಜನರೂ ಇದ್ದರು. ಅವರನ್ನು ಹಗ್ಗಗಳಿಂದ ಕೈಕೊಳ ಹಾಕಲಾಗಿತ್ತು. ಹಗ್ಗದ ಇನ್ನೊಂದು ತುದಿಯು ದುಂಡಗಿನ ಟೋಪಿಗಳು ಮತ್ತು ಲುಂಗಿಗಳನ್ನು ಧರಿಸಿದ ಜನರ ಕೈಯಲ್ಲಿತ್ತು.

. ಪಿಎಫ್‌ಐ ಮೆರವಣಿಗೆಯ ಉದ್ದೇಶವು ೧೯೨೧ ರ ’ಮಲಬಾರ್ ಹಿಂದೂ ಹತ್ಯಾಕಾಂಡ’ ಅಥವಾ ’ಮೊಪ್ಲಾ ಹತ್ಯಾಕಾಂಡ’ದ ಶತಮಾನೋತ್ಸವದ “ಆಚರಣೆ” ಎಂದು ಬಲ್ಲ ಮೂಲಗಳು ತಿಳಿಸಿವೆ. ಈ ಹತ್ಯಾಕಾಂಡದಲ್ಲಿ ೧೦,೦೦೦ ಕ್ಕೂ ಹೆಚ್ಚು ಹಿಂದೂಗಳು ಕೊಲ್ಲಲ್ಪಟ್ಟಿದ್ದರು. ಅಲ್ಲದೆ ೧ ಲಕ್ಷ ಹಿಂದೂಗಳಿಗೆ ಕೇರಳವನ್ನು ಬಿಡಲು ಒತ್ತಾಯಿಸಲಾಯಿತು.

ಮಲಬಾರ್ ಹಿಂದೂ ನರಮೇಧದ ಬಗ್ಗೆ ಗಣ್ಯರ ಮಾಡಿದ ಉಲ್ಲೇಖ!

೧. ಸ್ವಾತಂತ್ರ್ಯ ಹೋರಾಟಗಾರ್ತಿ ಎನಿ ಬೆಸೆಂಟ್ರು ತಮ್ಮ ಪುಸ್ತಕದಲ್ಲಿ ‘ಮುಸ್ಲಿಮರು ಹೆಚ್ಚಿನ ಸಂಖ್ಯೆಯ ಹಿಂದೂಗಳನ್ನು ಕೊಂದು ಲೂಟಿ ಮಾಡಿದ್ದಾರೆ. ಮತಾಂತರಗೊಳ್ಳದ ಎಲ್ಲಾ ಹಿಂದೂಗಳನ್ನು ಕೊಲ್ಲಲಾಯಿತು ಅಥವಾ ಪಲಾಯನಗೈದರು. ಮಲಬಾರ್ ಘಟನೆಯು ಇಸ್ಲಾಮಿಕ್ ಕಾನೂನು ಇನ್ನೂ ಹೇಗೆ ಜಾರಿಯಲ್ಲಿದೆ ಎಂದು ನನಗೆ ಕಲಿಸಿದೆ ಮತ್ತು ಭಾರತದಲ್ಲಿ ಖಿಲಾಫತ ರಾಜ್ಯದ ಮತ್ತೊಂದು ಮಾದರಿಯನ್ನು ನೋಡಲು ನಾವು ಬಯಸುವುದಿಲ್ಲ, ಎಂದು ಬರೆದಿದ್ದಾರೆ.

೨. ಸಂವಿಧಾನಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಇವರು ತಮ್ಮ ಪುಸ್ತಕದಲ್ಲಿ ಮಲಬಾರ್‌ನಲ್ಲಿ ಮೊಪಾಲ್‌ಗಳಿಂದ ಹಿಂದೂಗಳ ಮೇಲಾದ ದೌರ್ಜನ್ಯವನ್ನು ವರ್ಣಿಸಲಾಗದು. ದಕ್ಷಿಣ ಭಾರತದಾದ್ಯಂತ, ಎಲ್ಲಾ ಹಿಂದೂಗಳಲ್ಲಿ ಭಯಾನಕ ಭಾವನೆಯ ಅಲೆಯಿತ್ತು. ನಿರ್ದಿಷ್ಟವಾಗಿ ಹೇಳುವುದಾದರೆ, ಖಿಲಾಫತ ನಾಯಕರು ಧರ್ಮಕ್ಕಾಗಿ “ಧೈರ್ಯಶಾಲಿ ಹೋರಾಟ” ನಡೆಸಿದರೆಂದು ಮೊಪಾಲ್‌ಗಳನ್ನು ಅಭಿನಂದಿಸುವ ನಿರ್ಣಯವನ್ನು ಅಂಗೀಕರಿಸಿದರು. ನರಮೇಧದಲ್ಲಿ ಸುಮಾರು ೧೦೦ ರಷ್ಟು ಹಿಂದೂ ದೇವಾಲಯಗಳನ್ನು ನಾಶಗೊಳಿಸಲಾಗಿದೆ ಎಂದು ಅಂದಾಜಿಸಲಾಗಿದೆ. ಆ ಸಮಯದಲ್ಲಿ ಬಲವಂತವಾಗಿ ಹಿಂದೂಗಳ ಮತಾಂತರವನ್ನೂ ಮಾಡಲಾಯಿತು