ಉಪಮುಖ್ಯಮಂತ್ರಿಗಳಿಂದ ತನಿಖೆಯ ಆದೇಶ !
* ಈ ಘಟನೆಯು ಭಾರತದಲ್ಲಿ ನೈತಿಕಮೌಲ್ಯಗಳು ಎಷ್ಟು ಕುಸಿದಿದೆ ಎಂಬುದನ್ನು ತೋರಿಸುತ್ತದೆ ! ಹಿಂದೂಗಳಿಗೆ ಧರ್ಮಶಿಕ್ಷಣ ಇಲ್ಲದಿರುವುದರಿಂದ ಅವರಿಗೆ ದೇವರಿಗಾಗಿ ತ್ಯಾಗ ಮಾಡಿ ಅದರಿಂದ ಹೇಗೆ ಆನಂದ ಪಡೆದುಕೊಳ್ಳಬೇಕು ಎಂದು ತಿಳಿಯದೇ ಇರುವುದರಿಂದ ತಾತ್ಕಾಲಿಕ ವಿಷಯಗಳಿಗಾಗಿ ಈ ರೀತಿಯ ಕೆಲಸಗಳನ್ನು ಮಾಡುತ್ತಾರೆ ! ಹಿಂದೂ ರಾಷ್ಟ್ರದಲ್ಲಿ ಪ್ರತಿಯೊಬ್ಬರಿಗೂ ಧರ್ಮಶಿಕ್ಷಣ ನೀಡಲಾಗುವುದು ! * ಈ ರೀತಿಯ ಘಟನೆಗಳಿಂದ ದೇವಾಲಯಗಳನ್ನು ಸರಕಾರಿಕರಣಗೊಳಿಸಲು ರಾಜ್ಯ ಸರಕಾರಗಳಿಗೆ ಕಾರಣ ಸಿಗುತ್ತಿದ್ದು ಅವರು ದೇವಾಲಯಗಳ ಮೇಲೆ ನಿಯಂತ್ರಣ ಪಡೆದುಕೊಳ್ಳುತ್ತಾರೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ ! * ಸರಕಾರವು ಈ ಕೃತ್ಯವೆಸಗಿದ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಲು ಪ್ರಯತ್ನಿಸಬೇಕು ಇಲ್ಲದಿದ್ದರೆ ನಾಳೆ ‘ಸರಕಾರ ಹಾಗೂ ಆಡಳಿತ ಮಂಡಳಿ ಅಸುನೀಗಿದೆ, ಎಂದು ಹೇಳಿ ಸರಕಾರೀ ಭೂಮಿಯನ್ನೇ ಸ್ವಾಧೀನಪಡಿಸಿಕೊಳ್ಳುವರು ! |
ಲಕ್ಷ್ಮಣಪುರಿ (ಉತ್ತರಪ್ರದೇಶ) ಉತ್ತರಪ್ರದೇಶದ ಮೋಹನಲಾಲಗಂಜದಲ್ಲಿನ ಕುಶಮೌರಾ ಹಲುವಾಪೂರ ಎಂಬ ಊರಿನಲ್ಲಿ ಏಕೀಕೃತವಾಗಿರುವ ಭಗವಾನ್ ಶ್ರೀಕೃಷ್ಣ ಹಾಗೂ ಶ್ರೀರಾಮನ ದೇವಾಲಯದ ಭೂಮಿಯನ್ನು ಕಬಳಿಸಲು ಈ ದೇವತೆಗಳು ಸಾವನ್ನಪ್ಪಿದಂತೆ ಕಾಗದಪತ್ರಗಳಲ್ಲಿ ತೋರಿಸಲಾಗಿರುವ ಘಟನೆ ಬೆಳಕಿಗೆ ಬಂದಿದೆ. ದೇವಾಲಯದ ಮೂಲ ಧರ್ಮದರ್ಶಿಗಳಾದ ಸುಶೀಲಕುಮಾರ ತ್ರಿಪಾಠಿಯವರು ೨೦೧೬ ನೇ ಇಸವಿಯಲ್ಲಿ ಉಪ ತಹಶೀಲ್ದಾರರ ಬಳಿ ಮಾಡಿದ ತಕರಾರಿನಿಂದ ೨೫ ವರ್ಷಗಳ ಹಿಂದಿನ ಪ್ರಕರಣವು ಈಗ ಬೆಳಕಿಗೆ ಬಂದಿದೆ. (೨೦೧೬ ನೇ ಇಸವಿಯಲ್ಲಿ ಉಪ ತಹಶೀಲ್ದಾರರ ಬಳಿ ತಕರಾರು ನೀಡಿದ್ದರೂ ಈ ವಿಷಯ ೨೦೨೧ ರಲ್ಲಿ ಬೆಳಕಿಗೆ ಬಂದಿದೆ, ಇದರಿಂದ ಕಾರ್ಯಾಂಗದ ಕಾರುಬಾರು ಹೇಗೆ ನಡೆಯುತ್ತಿದೆ ಎಂಬುದರ ಕಲ್ಪನೆ ಸಿಗುತ್ತಿದೆ ! – ಸಂಪಾದಕರು) ಉಪಮುಖ್ಯಮಂತ್ರಿ ದಿನೇಶ ಶರ್ಮಾರವರು ಈ ಪ್ರಕರಣದ ತನಿಖೆ ನಡೆಸಲು ಉಪವಿಭಾಗೀಯ ದಂಡಾಧಿಕಾರಿ (ನ್ಯಾಯಾಧೀಶರು)ಗಳಾದ ಪ್ರಫುಲ್ಲ ತ್ರಿಪಾಠಿಯವರಿಗೆ ಆದೇಶಿಸಿದ್ದಾರೆ. (ಈಗ ಈ ತನಿಖೆ ಎಷ್ಟು ವರ್ಷಗಳು ಬೇಕಾಗುತ್ತದೆ ಎಂಬುದು ಆ ದೇವರಿಗೇ ಗೊತ್ತು! – ಸಂಪಾದಕರು)
In 1987, Lord Krishna-Ram was declared 'dead' and the temple trust was transferred to his purported father Gaya Prasad in 1991 and later Gaya Prasad too was declared dead and the trust passed on to his brothers identified as Ramnath and Haridwar. https://t.co/9IppajBZ3p
— IBTimes 🇮🇳 (@ibtimes_india) February 17, 2021
೧. ಈ ದೇವಾಲಯವು ೧೦೦ ವರ್ಷಗಳಿಗಿಂತ ಹೆಚ್ಚು ಹಳೆಯದು. ಈ ದೇವಾಲಯದ ಒಡೆತನದಲ್ಲಿ ೭ ಸಾವಿರ ೩೦೦ ಚದರ ಮೀಟರ್ ಭೂಮಿಯಿದೆ ಹಾಗೂ ಅದನ್ನು ಕೃಷ್ಣ-ರಾಮ ಟ್ರಸ್ಟ್ ನಡೆಸುತ್ತಿದೆ. ಕಾಗದಪತ್ರಗಳಲ್ಲಿ ಗಯಾಪ್ರಸಾದ ಎಂಬ ವ್ಯಕ್ತಿಯು ದೇವಾಲಯದಲ್ಲಿರುವ ಶ್ರೀರಾಮ ಹಾಗೂ ಶ್ರೀಕೃಷ್ಣ ಈ ದೇವತೆಗಳ ತಂದೆಯೆಂದು ಉಲ್ಲೇಖಿಸಲಾಗಿದೆ.
೨. ೧೯೮೭ರಲ್ಲಿ ಈ ದೇವಾಲಯದ ಭೂಮಿಯ ಕಾಗದಪತ್ರಗಳಲ್ಲಿ ಪರಿವರ್ತನೆ ಮಾಡಿ ಭಗವಾನ್ ಶ್ರೀಕೃಷ್ಣ ಹಾಗೂ ಶ್ರೀರಾಮ ಈ ದೇವತೆಗಳು ಸಾವಿಗೀಡಾಗಿರುವುದಾಗಿ ತೋರಿಸಿ ಈ ಎಲ್ಲಾ ಭೂಮಿಯನ್ನು ಗಯಾಪ್ರಸಾದರವರ ಹೆಸರಿಗೆ ಮಾಡಲಾಯಿತು. ಅನಂತರ ಕೃಷ್ಣ-ರಾಮ ಟ್ರಸ್ಟ್‌ನ ಸಂಪೂರ್ಣ ಕಾರುಬಾರನ್ನು ಅವರ ಸಹೋದರರಾದ ರಾಮನಾಥ ಹಾಗೂ ಹರಿದ್ವಾರರವರು ವಹಿಸಿಕೊಂಡರು.