ನಟಿ ದಿಯಾ ಮಿರ್ಜಾ ತಮ್ಮ ಮದುವೆಯಲ್ಲಿ ಕನ್ಯಾದಾನ ಸಂಪ್ರದಾಯವನ್ನು ಕೈಬಿಟ್ಟರು !

‘ಆಸಕ್ತಿಗನುಸಾರ ಪರಿವರ್ತನೆ ಆರಂಭವಾಗುತ್ತದೆ (ಯಂತೆ) ! – ದಿಯಾ ಮಿರ್ಜಾ

ಕನ್ಯಾದಾನ ಮಾಡುವ ವ್ಯಕ್ತಿಯ ಹಿಂದಿನ ೧೨ ತಲೆಮಾರುಗಳು, ಮುಂದಿನ ೧೨ ತಲೆಮಾರುಗಳು ಮತ್ತು ಸ್ವಂತ ೧ ತಲೆಮಾರಿನ ಉದ್ಧಾರವಾಗುತ್ತದೆ ಎಂದು ಧರ್ಮಶಾಸ್ತ್ರವು ಹೇಳುತ್ತದೆ. ಮದುವೆಯ ಸಮಯದಲ್ಲಿ, ವರರನ್ನು ಲಕ್ಷ್ಮೀನಾರಾಯಣನ ರೂಪದಲ್ಲಿ ಪೂಜಿಸಲಾಗುತ್ತದೆ, ಮತ್ತು ಎಲ್ಲ ವಿಧಿಗಳನ್ನು ಈ ರೀತಿ ಭಾವವಿಟ್ಟು ನೆರವೇರಿಸಿದರೆ, ಅದು ಆಧ್ಯಾತ್ಮಿಕ ಸ್ತರದಲ್ಲಿ ಎಲ್ಲರಿಗೂ ಲಾಭವನ್ನು ನೀಡುತ್ತದೆ; ಆದರೆ ತಾವೆಷ್ಟು ಪ್ರಗತಿಪರರು ಎಂದು ಮೆರೆಯಲು ಇಂತಹ ಸಂಪ್ರದಾಯಗಳನ್ನು ಕೈಬಿಡುವ ಸ್ಫರ್ಧೆ ಸದ್ಯ ಏರ್ಪಟ್ಟಿದೆ. ಹಿಂದೂಗಳು ಈ ಬಗ್ಗೆ ಎಚ್ಚರದಿಂದಿರಬೇಕು!

ಮುಂಬೈ: ಖ್ಯಾತ ನಟಿ ದಿಯಾ ಮಿರ್ಜಾ ಉದ್ಯಮಿ ವೈಭವ್ ರೇಖಿ ಅವರನ್ನು ಫೆಬ್ರವರಿ ೧೫ ರಂದು ಹಿಂದೂ ಪದ್ಧತಿಯಲ್ಲಿ ವಿವಾಹವಾದರು. ಇದು ಅವರ ಎರಡನೇ ಮದುವೆಯಾಗಿದೆ.

ಈ ಬಾರಿ ಪೌರೋಹಿತ್ಯವನ್ನು ಶೀಲಾ ಅಟ್ಟಾ ಎಂಬ ಮಹಿಳಾ ಅರ್ಚಕರು ನೆರವೇರಿಸಿದರು. ಅಲ್ಲದೆ, ಈ ಸಮಯದಲ್ಲಿ ಕನ್ಯಾದಾನ ಮಾಡಲಾಗಿಲ್ಲ. ಈ ಬಗ್ಗೆ ದಿಯಾ ಮಿರ್ಜಾ ಅವರು ಟ್ವೀಟ್ ಮಾಡುತ್ತಾ, “ಪರಿವರ್ತನೆಯು ಆಸಕ್ತಿಯ ಮೇಲೆ ಆರಂಭವಾಗುತ್ತದೆ. ಮಹಿಳೆಯರು ತಮ್ಮದೇ ಆದ ನಿಯಮಗಳನ್ನು ರೂಪಿಸುವ ಸಮಯ ಇದು”, ಎಂದಿದ್ದಾರೆ.