ಬಂಗಾಲದಲ್ಲಿ ಬಾಂಬ್ ಹಲ್ಲೆಯಲ್ಲಿ ರಾಜ್ಯದ ಸಚಿವ ಝಾಕಿರ ಹುಸೇನ್ ಗೆ ಗಾಯ

೨೨ ಕ್ಕೂ ಹೆಚ್ಚು ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರಿಗೆ ಗಾಯ

ತೃಣಮೂಲ ಕಾಂಗ್ರೆಸ್ ಸರ್ಕಾರದ ಮಂತ್ರಿಗಳು ಸಹ ಬಂಗಾಳದಲ್ಲಿ ಸುರಕ್ಷಿತವಾಗಿಲ್ಲ, ಅದು ಅಲ್ಲಿನ ಕಾನೂನು ವ್ಯವಸ್ಥೆ ಪರಿಸ್ಥಿತಿಯನ್ನು ತೋರಿಸುತ್ತದೆ ! ಪ್ರಜಾಪ್ರಭುತ್ವದಲ್ಲಿ ಕೆಲಸ ಮಾಡುವ ಇಂತಹ ಸರ್ಕಾರ ಜನರಿಗೆ ನಾಚಿಕೆಗೇಡು !

ರಾಜ್ಯದ ಸಚಿವ ಝಾಕಿರ ಹುಸೇನ್

ಮುರ್ಷಿದಾಬಾದ್ (ಬಂಗಾಲ) – ಇಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ತೃಣಮೂಲ ಕಾಂಗ್ರೆಸ್ ಸರ್ಕಾರದ ರಾಜ್ಯ ಸಚಿವ ಜಕೀರ್ ಹುಸೇನ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಫೆಬ್ರವರಿ ೧೭ ರಂದು ರಾತ್ರಿ ೯.೩೦ ರ ಸುಮಾರಿಗೆ ನಿಮತಿಯಾ ರೈಲ್ವೆ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ತೃಣಮೂಲ ಕಾಂಗ್ರೆಸ್ಸಿನ ೨೨ ಕ್ಕೂ ಹೆಚ್ಚು ಕಾರ್ಯಕರ್ತರು ಕೂಡ ಗಾಯಗೊಂಡಿದ್ದಾರೆ. ಅವರಲ್ಲಿ ೭ ಮಂದಿ ಗಂಭೀರ ಸ್ಥಿತಿಯಲ್ಲಿದ್ದಾರೆ. ಜಾಕಿರ್ ಹುಸೇನ್ ಕಾಲಿಗೆ ತೀವ್ರ ಪೆಟ್ಟಾಗಿದೆ. ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹುಸೇನ್ ಮೊದಲು ಕಾಂಗ್ರೆಸ್‌ನಲ್ಲಿದ್ದು, ನಂತರ ತೃಣಮೂಲ ಕಾಂಗ್ರೆಸ್ ಸೇರಿದರು. ಈ ದಾಳಿಯನ್ನು ಬಿಜೆಪಿ ನಡೆಸಿದೆ ಎಂದು ತೃಣಮೂಲ ಕಾಂಗ್ರೆಸ್ ಆರೋಪಿಸಿದೆ. ಕೆಲವು ದಿನಗಳ ಹಿಂದೆ ಬಿಜೆಪಿ ನಾಯಕನ ಮೇಲೆ ಬಾಂಬ್ ಮತ್ತು ಗುಂಡಿನ ದಾಳಿ ನಡೆಸಲಾಗಿತ್ತು.

. ಹುಸೇನ್ ರೈಲಿನಲ್ಲಿ ಪ್ರಯಾಣಿಸಲು ರೈಲು ನಿಲ್ದಾಣಕ್ಕೆ ತೆರಳುತ್ತಿದ್ದರು. ಅವರು ತಮ್ಮ ಕಾರ್ಯಕರ್ತರೊಂದಿಗೆ ಪ್ಲಾಟ್‌ಫಾರ್ಮ್ ನಂ ೨ ಗೆ ತೆರಳುತ್ತಿದ್ದಾಗ ಅವರ ಮೇಲೆ ಬಾಂಬ್ ಎಸೆಯಲಾಯಿತು. ಇಲ್ಲಿ ಸ್ಥಾಪಿಸಲಾದ ಸಿಸಿಟಿವಿಯ ದೃಶ್ಯಾವಳಿಗಳ ಮೂಲಕ ಆರೋಪಿಗಳನ್ನು ಪತ್ತೆ ಹಚ್ಚಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.

೨. ದಾಳಿಯ ಹಿಂದಿನ ಉದ್ದೇಶದ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತೃಣಮೂಲ ಕಾಂಗ್ರೆಸ್ ಮೂಲಗಳ ಪ್ರಕಾರ, ಮುರ್ಷಿದಾಬಾದ್‌ನಲ್ಲಿ ಪ್ರಾಣಿ ಕಳ್ಳಸಾಗಣೆದಾರರ ವಿರುದ್ಧ ಹುಸೇನ್ ಸರ್ಕಾರಕ್ಕೆ ಲಿಖಿತ ದೂರು ನೀಡಿದ್ದರು. ಅವರು ಇಲ್ಲಿನ ವ್ಯಾಪಾರಿಗಳೊಂದಿಗೆ ವಿವಾದವನ್ನು ಹೊಂದಿದ್ದರು. ಇದು ದಾಳಿಗೆ ಕಾರಣವಾಗಿರಬಹುದು ಎಂದು ಹೇಳಲಾಗುತ್ತಿದೆ. ಹುಸೇನ್ ಈಗಾಗಲೇ ತನ್ನ ಮೇಲೆ ಹಲ್ಲೆಯಾಗುವ ಬಗ್ಗೆ ಭಯ ವ್ಯಕ್ತಪಡಿಸಿದ್ದರು.

. ಬಿಜೆಪಿ ರಾಜ್ಯ ಅಧ್ಯಕ್ಷ ದಿಲೀಪ್ ಘೋಷ್, “ರಾಜ್ಯ ಸಚಿವರು ಸಹ ಸುರಕ್ಷಿತವಾಗಿಲ್ಲದಿರುವುದು ದುರದೃಷ್ಟಕರ. ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹೀಗಿದ್ದರೆ, ಸಾರ್ವಜನಿಕರ ಭದ್ರತೆಗೆ ಅಪಾಯವಿದೆ” ಎಂದು ಸರ್ಕಾರವನ್ನು ಟೀಕಿಸಿದ್ದಾರೆ.

(ಸೌಜನ್ಯ :BTV Bharat)

ಹುಸೇನ್ ಹತ್ಯೆಗೆ ಯತ್ನಿಸಲಾಗಿದೆ! – ಮಮತಾ ಬ್ಯಾನರ್ಜಿ

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹುಸೇನ್ ಅವರನ್ನು ಹತ್ಯೆ ಮಾಡುವ ಪ್ರಯತ್ನ ನಡೆದಿದೆ ಎಂದು ಆರೋಪಿಸಿದರು. ಪ್ರಜಾಪ್ರಭುತ್ವವು ವಿವಾದಗಳಿರಬಹುದು, ಆದ್ರೆ ಹತ್ಯೆಗೆ ಏಕೆ ಇಳಿಯುತ್ತಾರೆ ? ಈ ದಾಳಿಗೆ ಕೇಂದ್ರ ಸರ್ಕಾರವೇ ಹೊಣೆ. (ಕಳೆದ ಹಲವು ವರ್ಷಗಳಲ್ಲಿ ರಾಜ್ಯದಲ್ಲಿ ಭಾಜಪದ ಕಾರ್ಯರ್ತರ ಮೇಲೆ ಹಲ್ಲೆಯಾಗಿ ಅದರಿಂದ ನೂರಾರು ಜನರು ಬಲಿಯಾಗಿದ್ದರು. ಅದಕ್ಕೆ ಯಾರು ಜವಾಬ್ದಾರರು ಎಂಬುದಕ್ಕೂ ಮಮತಾ ಬ್ಯಾನರ್ಜಿ ಉತ್ತರಿಸಬೇಕು – ಸಂಪಾದಕರು)

ಮತ್ತೊಂದೆಡೆ, ತೃಣಮೂಲ ಕಾಂಗ್ರೆಸ್ನಿಂದ ಉಚ್ಚಾಟಿಸಲ್ಪಟ್ಟ ಮುರ್ಷಿದಾಬಾದ್ ಜಿಲ್ಲಾ ಪರಿಷತ್ ಅಧ್ಯಕ್ಷ ಮುಷರಫ್ ಹುಸೇನ್, ಈ ದಾಳಿಯು ಆಂತರಿಕ ವಿವಾದದ ಪರಿಣಾಮವಾಗಿದೆ ಎಂದು ಹೇಳಿದ್ದಾರೆ.