ಹಿಂದೂ ದೇವತೆಗಳು, ರಾಷ್ಟ್ರಪುರುಷರು, ಭಾರತೀಯ ವಾಯುಪಡೆ ಇತ್ಯಾದಿಗಳನ್ನು ವೆಬ್ ಸಿರೀಸಗಳ ಮೂಲಕ ಒಟಿಟಿ ಅಪ್ಲಿಕೇಶನ್‌ಗಳಲ್ಲಿ ಅವಮಾನಿಸಲಾಗುತ್ತಿದೆ ಮತ್ತು ಇದು ಹಲವು ತಿಂಗಳುಗಳಿಂದ ನಡೆಯುತ್ತಿದೆ. ಅನೇಕ ಸಂಘಟನೆಗಳು ಇದನ್ನು ವಿರೋಧಿಸುತ್ತಿರುವಾಗ, ಸರ್ಕಾರ ಇನ್ನೂ ಯೋಚಿಸುತ್ತ ಕುಳಿತಿರುವುದನ್ನು ರಾಷ್ಟ್ರಪ್ರೇಮಿಗಳು ಮತ್ತು ಹಿಂದೂ ಧರ್ಮಪ್ರೇಮಿಗಳು ನಿರೀಕ್ಷಿಸುವುದಿಲ್ಲ! ರಾಷ್ಟ್ರ ಮತ್ತು ಧರ್ಮವನ್ನು ರಕ್ಷಿಸಲು ಸರ್ಕಾರ ತುರ್ತು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ರಾಷ್ಟ್ರಪ್ರೇಮಿ ಮತ್ತು ಹಿಂದೂ ಧರ್ಮಪ್ರೇಮಿಗಳಿಗೆ ಅನಿಸುತ್ತದೆ !
ನವ ದೆಹಲಿ : ಒಟಿಟಿ ಆಪ್‌ಗಳನ್ನು ನಿಯಂತ್ರಿಸುವಂತಹ ಕ್ರಮ ಕೈಗೊಳ್ಳಲು ಕೇಂದ್ರ ಚಿಂತನೆ ನಡೆಸುತ್ತಿದೆ ಎಂದು ಕೇಂದ್ರ ಸರಕಾರವು ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದೆ. ಆರು ವಾರಗಳಲ್ಲಿ ಉತ್ತರಿಸಲು ನ್ಯಾಯಾಲಯ ಸರ್ಕಾರಕ್ಕೆ ಹೇಳಿದೆ. ನ್ಯಾಯವಾದಿ ಶಶಾಂಕ್ ಶೇಖರ್ ಮತ್ತು ನ್ಯಾಯವಾದಿ ಅಪೂರ್ವಾ ಅರಹಟಿಯಾ ಅವರು ಸಲ್ಲಿಸಿದ್ದ ಅರ್ಜಿಯಲ್ಲಿ ‘ಒಟಿಟಿಯನ್ನು ನಿಯಂತ್ರಿಸಲು ಸ್ವಾಯತ್ತ ಸಂಸ್ಥೆ ಇರಬೇಕು’ ಎಂದು ಕೋರಲಾಗಿದೆ. ಈ ನಿಟ್ಟಿನಲ್ಲಿ ನ್ಯಾಯಾಲಯವು ಹೆಚ್ಚುವರಿ ಸಾಲಿಸಿಟರ್ ಜನರಲ್ ಸಂಜಯ್ ಜೈನ್ ಅವರಿಗೆ ‘ಈ ನಿಟ್ಟಿನಲ್ಲಿ ಸರಕಾರ ಯಾವ ಕ್ರಮ ತೆಗೆದುಕೊಳ್ಳುತ್ತದೆ ಎಂಬುದನ್ನು ಮಂಡಿಸಿ’, ಎಂದು ನಿರ್ದೇಶಿಸಿತು.
ಸರ್ವೋಚ್ಚ ನ್ಯಾಯಾಲಯ ಹಿಂದಿನ ವರ್ಷ ಅಕ್ಟೋಬರ್ ೧೫ ರಂದು ಕೇಂದ್ರ ಸರಕಾರ, ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಮತ್ತು ಇಂಟರ್ನೆಟ್ ಆಂಡ್ ಮೊಬೈಲ್ ಅಸೋಸಿಯೇಷನ್ ಆಫ್ ಇಂಡಿಯಾಗೆ ನೋಟಿಸ್ ನೀಡಿತ್ತು.