೬ ತಿಂಗಳಲ್ಲಿ ಬ್ಯಾಂಕ್ ಆಫ್ ಮಹಾರಾಷ್ಟ್ರ, ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಓವರಸೀಸ ಬ್ಯಾಂಕ್ ಹಾಗೂ ಸೆಂಟ್ರಲ್ ಬ್ಯಾಂಕ್‌ನ ಖಾಸಗೀಕರಣವಾಗಲಿದೆ !

ಸರಕಾರವು ದೇವಸ್ಥಾನಗಳ ಸರಕಾರೀಕರಣವನ್ನು ಮಾಡುತ್ತಿರುವಾಗ ಸರಕಾರಿ ಬ್ಯಾಂಕ್‌ಗಳನ್ನು ಮಾತ್ರ ಖಾಸಗೀಕರಣ ಮಾಡುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು ದೇವಸ್ಥಾನಗಳ ಸರಕಾರೀಕರಣವನ್ನು ರದ್ದುಗೊಳಿಸಲು ಸರಕಾರಕ್ಕೆ ಒತ್ತಾಯಿಸಿ !

ನವ ದೆಹಲಿ – ಕೇಂದ್ರ ಸರಕಾರವು ಮುಂದಿನ ೬ ತಿಂಗಳಲ್ಲಿ ದೇಶದ ಬ್ಯಾಂಕ್ ಆಫ್ ಮಹಾರಾಷ್ಟ್ರ, ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಓವರಸೀಸ್ ಬ್ಯಾಂಕ್ ಹಾಗೂ ಸೆಂಟ್ರಲ್ ಬ್ಯಾಂಕ್‌ನ ಖಾಸಗೀಕರಣ ಮಾಡಲು ನಿರ್ಧರಿಸಿದೆ. ಸರಕಾರವು ಬಜೆಟಿನಲ್ಲಿ ೨ ಸರಕಾರಿ ಬ್ಯಾಂಕ್‌ಗಳ ಶೇರುಬಂಡವಾಳ ಮಾರಾಟ ಮಾಡುವುದಾಗಿ ಹೇಳಿತ್ತು. ಈ ಹಿಂದಿನ ಸರಕಾರಗಳು ಸರಕಾರಿ ಬ್ಯಾಂಕ್‌ಗಳು ಖಾಸಗೀ ಬ್ಯಾಂಕ್ ಆಗುವುದನ್ನು ತಡೆಯುತ್ತಿದ್ದವು; ಏಕೆಂದರೆ ಇದರಿಂದ ಲಕ್ಷಾಂತರ ನೌಕರರ ಕೆಲಸಕ್ಕೆ ಅಪಾಯವಿತ್ತು. ಆದರೆ ಈಗಿನ ಸರಕಾರವು ಬ್ಯಾಂಕ್‌ಗಳ ಖಾಸಗೀಕರಣವಾಗುವುದರಿಂದ ‘ನೌಕರರ ಕೆಲಸಕ್ಕೆ ಯಾವುದೇ ತೊಂದರೆಯಾಗುವುದಿಲ್ಲ’ ಎಂಬುದನ್ನು ಸ್ಪಷ್ಟಪಡಿಸಿದೆ.