ತಮಿಳುನಾಡಿನಲ್ಲಿ ಜಿಲ್ಲಾಧಿಕಾರಿ ಕಛೇರಿಗಾಗಿ ೧ ಸಾವಿರ ವರ್ಷ ಪುರಾತನ ದೇವಾಲಯದ ೩೫ ಏಕರೆ ಭೂಮಿ ವಶಪಡಿಸಿಕೊಳ್ಳಲು ಅನುಮೋದನೆ !

ಮದರಾಸ್ ಉಚ್ಚ ನ್ಯಾಯಾಲಯದ ತೀರ್ಪು!

*  ಚರ್ಚ್ ಅಥವಾ ಮಸೀದಿಯ ಭೂಮಿಯ ವಿಷಯದಲ್ಲಿ ಈ ರೀತಿಯ ಆದೇಶ ನೀಡುತ್ತಿದ್ದರೇ ? ಒಂದು ವೇಳೆ ನೀಡಿದ್ದರೆ ಅವರು ಅದನ್ನು ಒಪ್ಪಿಕೊಳ್ಳುತ್ತಿದ್ದರೆ? ಎಂಬ ಪ್ರಶ್ನೆ ಹಿಂದೂಗಳ ಮನಸ್ಸಿನಲ್ಲಿ ಮೂಡುತ್ತದೆ !

* ಭಾರತದಲ್ಲಿ ವಕ್ಫ್ ಬೋರ್ಡ್‌ಗೆ ರೈಲ್ವೆ ಇಲಾಖೆಯ ನಂತರ ಅತ್ಯಧಿಕ ಭೂಮಿಯ ಮಾಲಿಕತ್ವವಿದೆ. ಅವರ ಭೂಮಿಯನ್ನು ವಶಪಡಿಸಿಕೊಳ್ಳುವ ಧೈರ್ಯ ಸರಕಾರಕ್ಕಿದೆಯೇ? ಜಿಲ್ಲಾಧಿಕಾರಿ ಕಛೇರಿಯನ್ನು ಕಟ್ಟಲು ಸರಕಾರಿ ಭೂಮಿಯ ಜೊತೆಗೆ ಬೇರೆ ಭೂಮಿಯನ್ನೂ ಕೂಡ ವಶಪಡಿಸಿಕೊಳ್ಳಬಹುದಲ್ಲ? ನ್ಯಾಯಾಲಯವು ಈ ರೀತಿಯ ತೀರ್ಪು ನೀಡುವ ಮೊದಲು ಹಿಂದೂಗಳ ಧಾರ್ಮಿಕ ಭಾವನೆಗಳ ಬಗ್ಗೆ ವಿಚಾರ ಮಾಡಬೇಕು, ಎಂಬುದು ಹಿಂದೂಗಳ ಅಪೇಕ್ಷೆ !

ಅರ್ಧನಾರೀಶ್ವರ ದೇವಾಲಯ

ಚೆನ್ನೈ – ತಮಿಳುನಾಡು ರಾಜ್ಯದಲ್ಲಿ ಹೊಸದಾಗಿ ನಿರ್ಮಾಣವಾಗಿರುವ ಕಲ್ಲಾಕುರುಚಿ ಜಿಲ್ಲೆಗಾಗಿ ಜಿಲ್ಲಾಧಿಕಾರಿ ಕಾರ್ಯಾಲಯ ಹಾಗೂ ಇತರ ಸರಕಾರಿ ಕಟ್ಟಡಗಳನ್ನು ಕಟ್ಟಲು ಕಲ್ಲಕುರುರ್ಚಿಯ ೧ ಸಾವಿರ ವರ್ಷ ಪುರಾತನ ಅರ್ಧನಾರೀಶ್ವರ ದೇವಾಲಯಕ್ಕೆ ಸೇರಿದ ೩೫ ಏಕರೆ ಜಮೀನನ್ನು ವಶಪಡಿಸಿಕೊಳ್ಳಲು ಮದ್ರಾಸ್ ಉಚ್ಚ ನ್ಯಾಯಾಲಯವು ಸರಕಾರಕ್ಕೆ ಅನುಮತಿ ನೀಡಿದೆ.

. ಸರಕಾರದ ತೀರ್ಮಾನದ ವಿರುದ್ಧ ರಂಗಕರ್ಣ ನರಸಿಂಹರವರು ೧ ಸಪ್ಟೆಂಬರ್ ೨೦೨೦ ರಂದು ಸಾರ್ವಜನಿಕಹಿತಾಸಕ್ತಿ ಅರ್ಜಿಯನ್ನು ದಾಖಲಿಸಿದ್ದರು. ಅದರಲ್ಲಿ ಅವರು ಈ ಭೂಮಿಯು ೧ ಸಾವಿರ ವರ್ಷಕ್ಕಿಂತಲೂ ಹೆಚ್ಚು ಪುರಾತನವಾಗಿರುವ ದೇವಾಲಯಕ್ಕೆ ಸೇರಿದೆ. ಇತ್ತೀಚೆಗೆ ದೇವಾಲಯವು ದುರ್ಬಲ ಸ್ಥಿತಿಯಲ್ಲಿದ್ದು ಅದರ ನಿರ್ವಹಣೆಯಾಗದ ಕಾರಣ ಅದು ಯಾವುದೇ ಕ್ಷಣದಲ್ಲಾದರೂ ಕುಸಿಯಬಹುದು. ದೇವಾಲಯಕ್ಕೆ ಸೇರಿದ ಭೂಮಿಯೊಂದೇ ಉತ್ಪನ್ನದ ಮೂಲವಾಗಿದ್ದು ಅದು ಕೇವಲ ದೇವಾಲಯದ ಒಳಿತಿಗಾಗಿ ಬಳಸುವಂತಾಗಲಿ. ಇದನ್ನು ಬೇರೆ ಯಾರೂ ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

೨. ನ್ಯಾಯಾಲಯದಲ್ಲಿ ಆಲಿಕೆ ಸಮಯದಲ್ಲಿ ನ್ಯಾಯಾಲಯವು ಈ ಭೂಮಿಯನ್ನು ಕೇವಲ ಸಾರ್ವಜನಿಕ ಹಿತಕ್ಕಾಗಿ ಬಳಸುವ ಪ್ರಸ್ತಾಪವಿದ್ದು ಅದು ಸಮಾಜ ಹಿತಕ್ಕಾಗಿದೆ.

೩. ನ್ಯಾಯಾಲಯವು ದೇವಾಲಯದ ಭೂಮಿಯ ಮೂಲ್ಯಮಾಪನೆ ಮಾಡಲು ಕಲ್ಲಕುರುಚಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾನ್ಯಾಯಾಧೀಶರು ಸೇರಿದಂತೆ ೨ ಸದಸ್ಯರ ಸಮಿತಿಯನ್ನು ನೇಮಿಸಲು ಆದೇಶಿಸಿದೆ.