‘ಪ್ರಿಯಾಂಕಾ ವಾದ್ರಾ ದುರ್ಗಾದೇವಿಯ ಅವತಾರವಾಗಿದ್ದು ಅವರಿಂದಲೇ ಭಾಜಪದ ವಧೆಯಾಗಲಿದೆ (ಯಂತೆ)! – ಕಾಂಗ್ರೆಸ್ ಸಮರ್ಥಕ ಆಚಾರ್ಯ ಪ್ರಮೋದ್ ಕೃಷ್ಣನ್

ಹಿಂದುತ್ವದ ವಿಷಯದ ಬಗ್ಗೆ ಒಂದಿಷ್ಟೂ ಜ್ಞಾನವಿಲ್ಲದ ಕ್ರೈಸ್ತ ಪ್ರಿಯಾಂಕಾ ವಾದ್ರಾ ದುರ್ಗಾದೇವಿಯ ಅವತಾರವಂತೆ ! ಪ್ರಮೋದ ಕೃಷ್ಣನ್‌ರವರ ಅಜ್ಞಾನದ ಬಗ್ಗೆ ಕನಿಕರವೆನಿಸಿದರೆ ಅದು ಕೂಡ ಅತ್ಯಲ್ಪ !

ಆಚಾರ್ಯ ಪ್ರಮೋದ್ ಕೃಷ್ಣನ್

ನವ ದೆಹಲಿ – ಪ್ರಿಯಾಂಕಾ ವಾದ್ರಾರವರು ಶಾಕಂಭರೀ ದೇವಿಯ ಆಶೀರ್ವಾದ ಪಡೆದುಕೊಳ್ಳುತ್ತಿದ್ದಾರೆ, ಸಂಗಮದಲ್ಲಿ ಸ್ನಾನ ಮಾಡುತ್ತಾರೆ. ಅವರ ಈ ಅಭಿಯಾನದಿಂದ ಭಾಜಪ ಕೆಳಗುಂದಿದೆ. ಪ್ರಿಯಾಂಕಾ ವಾದ್ರಾರವರ ಕೈಯ್ಯಾರೆ ಭಾಜಪದ ವಧೆಯಾಗಲಿದೆ, ಎಂದು ಕಾಂಗ್ರೆಸ್ ಸಮರ್ಥಕ ಆಚಾರ್ಯ ಪ್ರಮೋದ್ ಕೃಷ್ಣನ್‌ರವರು ಹೇಳಿದ್ದಾರೆ. ಅವರು ‘ಪ್ರಿಯಾಂಕಾ ಗಾಂಧಿಯು ಶ್ರೀದುರ್ಗಾಮಾತೆಯ ಅವತಾರವಾಗಿದ್ದಾರೆ, ಎಂದು ಕೂಡ ಹೇಳಿದ್ದಾರೆ.