ಯಾವುದೇ ವಿಷಯಕ್ಕಾಗಿ ನ್ಯಾಯಾಲಯಕ್ಕೆ ಹೋಗಿ ಮತ್ತೆ ಪಶ್ಚಾತ್ತಾಪ ಪಡೆಯಬೇಕಾಗುತ್ತದೆ ! – ಸರ್ವೋಚ್ಚ ನ್ಯಾಯಾಲಯದ ಮಾಜಿ ಮುಖ್ಯ ನ್ಯಾಯಾಧೀಶರ ಆರೋಪ

ಭಾರತದ ನ್ಯಾಯವ್ಯವಸ್ಥೆಯು ಶಿಥಿಲವಾಗಿದೆ !

* ಉನ್ನತ ಹುದ್ದೆಯಲ್ಲಿರುವ ಸರಕಾರಿ ಅಧಿಕಾರಿ, ನ್ಯಾಯಾಧೀಶರು ಮುಂತಾದದವರು ನಿವೃತ್ತರಾದ ನಂತರ ಇಂತಹ ಹೇಳಿಕೆಗಳನ್ನು ನೀಡುತ್ತಾರೆ ಅಥವಾ ಪುಸ್ತಕಗಳನ್ನು ಬರೆದು ಅವುಗಳಲ್ಲಿ ಇಂತಹ ಹೇಳಿಕೆ ನೀಡುತ್ತಾರೆ; ಆದರೆ ಅವರು ಹುದ್ದೆಯಲ್ಲಿರುವಾಗ ಮೌನವಾಗಿರುತ್ತಾರೆ, ಇಂತಹ ಜನರಲ್ಲಿ ಈಗ ರಂಜನ ಗೊಗೋಯಿಯವರ ಹೆಸರೂ ಸೇರಿದೆ !

* ಗೊಗೋಯಿಯವರಿಗೆ ಹೀಗೇಕೆ ಅನಿಸುತ್ತದೆ, ಈಗ ಇದಕ್ಕಾಗಿ ಕೇಂದ್ರ ಸರಕಾರವು ಚಿಂತನ ಸಮಿತಿಯನ್ನು ಸ್ಥಾಪಿಸಿ ನ್ಯಾಯವ್ಯವಸ್ಥೆಯಲ್ಲಿರುವ ಕೊರತೆಗಳನ್ನು ದೂರಗೊಳಿಸಿ ಜನತೆಗೆ ನಿಜವಾದ ನ್ಯಾಯ ದೊರಕಿಸುವಂತಹ ವ್ಯವಸ್ಥೆಯನ್ನು ರೂಪಿಸಬೇಕು!

* ಸರ್ವೋಚ್ಚ ನ್ಯಾಯಾಲಯದ ಮಾಜಿ ಮುಖ್ಯನ್ಯಾಯಾಧೀಶರಾದ ಗೊಗೋಯಿಯವರಿಗೇ ಹೀಗೆ ಅನಿಸುತ್ತಿದ್ದರೆ, ನ್ಯಾಯಾಲಯದ ಬಗ್ಗೆ ಜನಸಾಮಾನ್ಯರಿಗೆ ಹೇಗೆ ಅನಿಸುತ್ತಿರಬಹುದು ಎಂಬುದರ ಕಲ್ಪನೆ ಮಾಡಲೂ ಸಾಧ್ಯವಿಲ್ಲ. ಆದರೂ ಅವರು ನ್ಯಾಯಾಲಯದ ಮೇಲೆ ವಿಶ್ವಾಸವನ್ನಿಟ್ಟು ವರ್ಷಗಟ್ಟಲೆ ಖಟ್ಲೆಗಳನ್ನು ನಡೆಸುತ್ತಿರುತ್ತಾರೆ !

ಮಾಜಿ ಮುಖ್ಯನ್ಯಾಯಾಧೀಶ ರಂಜನ ಗೊಗೋಯಿ

ನವ ದೆಹಲಿ – ‘ನನಗೆ ಕೇಳಿದರೆ ನಾನು ಯಾವುದೇ ವಿಷಯಕ್ಕಾಗಿ ಖಂಡಿತವಾಗಿಯೂ ನ್ಯಾಯಾಲಯಕ್ಕೆ ಹೋಗುವುದಿಲ್ಲ. ನ್ಯಾಯಾಲಯಕ್ಕೆ  ಹೋಗುವುದೆಂದರೆ ಮತ್ತೆ ಪಶ್ಚಾತ್ತಾಪ ಪಡೆಯುವಂತೆ ಆಗಿದೆ. ನಿಮಗೆ ಅಲ್ಲಿ ನ್ಯಾಯ ಸಿಗುವುದಿಲ್ಲ. ಭಾರತದ ನ್ಯಾಯವ್ಯವಸ್ಥೆಯು ಶಿಥಿಲವಾಗಿದೆ’, ಎಂಬ ವಿವಾದಾತ್ಮಕ ಹೇಳಿಕೆಯನ್ನು ಸರ್ವೋಚ್ಚ ನ್ಯಾಯಾಲಯದ ಮಾಜಿ ಮುಖ್ಯನ್ಯಾಯಾಧೀಶರು ಹಾಗೂ ರಾಜ್ಯಸಭೆಯ ಸಂಸದರಾದ ರಂಜನ ಗೊಗೋಯಿಯವರು ಒಂದು ವಾರ್ತಾವಾಹಿನಿಯ ಕಾರ್ಯಕ್ರಮದಲ್ಲಿ ನೀಡಿದ್ದಾರೆ. ರಂಜನ ಗೊಗೋಯಿಯವರು ನವೆಂಬರ್ ೨೦೧೯ರಲ್ಲಿ ನಿವೃತ್ತರಾದರು. ಅನಂತರ ೨೦೨೦ರಲ್ಲಿ ಕೇಂದ್ರದ ಭಾಜಪ ಸರಕಾರವು ರಂಜನ ಗೊಗೋಯಿಯವರಿಗೆ ರಾಜ್ಯಸಭೆಯ ಸದಸ್ಯರನ್ನಾಗಿ ನೇಮಿಸಿತ್ತು.

ಸರ್ವೋಚ್ಚ ನ್ಯಾಯಾಲಯದ ಮಾಜಿ ಮುಖ್ಯನ್ಯಾಯಾಧೀಶರಾದ ಗೊಗೋಯಿಯವರು ಮಂಡಿಸಿದ ಅಂಶಗಳು

೧. ಕೊರೋನಾದ ಸಮಯದಲ್ಲಿ ಖಟ್ಲೆಗಳ ಸಂಖ್ಯೆಯಲ್ಲಿ ಹೆಚ್ಚಳ !

ನಮ್ಮ ದೇಶಕ್ಕೆ ೫ ಲಕ್ಷ ಕೋಟಿ ರೂಪಾಯಿಗಳ ಆರ್ಥಿಕ ವ್ಯವಸ್ಥೆಯು ಬೇಕಿದೆ; ಆದರೆ ನಮ್ಮ ನ್ಯಾಯವ್ಯವಸ್ಥೆಯು ಶಿಥಿಲವಾಗಿದೆ. ಸಂಸ್ಥೆಯ ಕಾರ್ಯಕ್ಷಮತೆಯು ಕ್ಷೀಣಿಸಿದಾಗ ದುರವಸ್ಥೆಯು ಉದ್ಭವಿಸುತ್ತದೆ. ೨೦೨೦ ಇದು ಕೊರೋನಾದ ವರ್ಷವಾಗಿದೆ. ಈ ವರ್ಷದಲ್ಲಿ ಕೆಳ ನ್ಯಾಯಾಲಯಗಳಲ್ಲಿ ೬೦ ಲಕ್ಷ, ಉಚ್ಚ ನ್ಯಾಯಾಲಯದಲ್ಲಿ ೩ ಲಕ್ಷ, ಸರ್ವೋಚ್ಚ ನ್ಯಾಯಾಲಯದಲ್ಲಿ ೭ ಸಾವಿರ ಖಟ್ಲೆಗಳ ಹೆಚ್ಚಳವಾಗಿದೆ.

೨. ಅಧಿಕಾರಿಗಳ ನೇಮಕಾತಿಯಾದಂತೆ ನ್ಯಾಯಾಧೀಶರ ನೇಮಕಾತಿಯು ಸಾಧ್ಯವಿಲ್ಲ !

ಕೆಲಸಕ್ಕಾಗಿ ಯೋಗ್ಯ ವ್ಯಕ್ತಿ ಸಿಗುವುದು ಮಹತ್ವದ್ದಾಗಿದೆ. ಸರಕಾರದಲ್ಲಿ ಅಧಿಕಾರಿಗಳನ್ನು ನೇಮಿಸಲಾಗುತ್ತದೆ, ಆದರೆ ನ್ಯಾಯಾಧೀಶರ ನೇಮಕಾತಿ ಆಗುವುದಿಲ್ಲ. ನ್ಯಾಯಾಧೀಶರ ನೌಕರಿಯ ಸಂಪೂರ್ಣ ಕಾಲದಲ್ಲಿ ಅವರು ಕರ್ತವ್ಯಕ್ಕೆ ವಚನಬದ್ಧರಾಗಿರಬೇಕು. ಕೆಲಸದ ಸಮಯವು ಅನಿಶ್ಚಿತವಾಗಿರುತ್ತದೆ. ೨೪ ಘಂಟೆ ಕೆಲಸ ಮಾಡಬೇಕಾಗುತ್ತದೆ. ಬೆಳಿಗ್ಗೆ ೨ ಗಂಟೆಗೂ ನಾವು ಕೆಲಸ ಮಾಡಿದ್ದೇವೆ. ನ್ಯಾಯಾಧೀಶರು ಎಲ್ಲವನ್ನೂ ಬದಿಗಿಟ್ಟು ಕೆಲಸ ಮಾಡುತ್ತಾರೆ. ಎಷ್ಟು ಜನರಿಗೆ ಇದರ ಅರಿವಿದೆ ? ನ್ಯಾಯಾಧೀಶರ ನೇಮಕಾತಿಯಾದಲ್ಲಿ ಅವರಿಗೆ ತರಬೇತಿ ನೀಡುವುದು ಆವಶ್ಯಕವಾಗಿದೆ. ಅವರಿಗೆ ಅದರ ಅರಿವು ಮಾಡಿಕೊಡಬೇಕು.

೩. ನ್ಯಾಯಾಧೀಶರಿಗೆ ತೀರ್ಪನ್ನು ಹೇಗೆ ಬರೆಯಬೇಕು ಎಂಬುದನ್ನು ಹೇಳಿಕೊಡಲಾಗುವುದಿಲ್ಲ !

ಭೋಪಾಲದ ರಾಷ್ಟ್ರೀಯ ಕಾನೂನು ಅಕಾಡೆಮಿಯಲ್ಲಿ ಏನು ಕಲಿಸಲಾಗುತ್ತದೆ ? ಇತರ ಕಾನೂನುಗಳನ್ನು ಕಲಿಸಲಾಗುತ್ತದೆ; ಆದರೆ ಅದಕ್ಕೆ ನ್ಯಾಯಾಂಗದ ನೈತಿಕತೆಯೊಂದಿಗೆ ಯಾವುದೇ ಸಂಬಂಧವಿಲ್ಲ. ತೀರ್ಪನ್ನು ಹೇಗೆ ಬರೆಯಬೇಕು ಎಂಬುದನ್ನು ಹೇಳಿಕೊಡಲಾಗುವುದಿಲ್ಲ. ನ್ಯಾಯಾಲಯದ ಕೆಲಸಗಳಲ್ಲಿ ಹೇಗೆ ವರ್ತಿಸಬೇಕು ಎಂಬುದನ್ನು ಕಲಿಸಲಾಗುವುದಿಲ್ಲ.

೪. ಹೊಸ ಕಾನೂನುಗಳು ಬಂದರೂ ಆ ಕೆಲಸಗಳನ್ನು ಇಂದಿನ ನ್ಯಾಯಾಧೀಶರೇ ಮಾಡುತ್ತಾರೆ !

ಸಿವಿಲ್ ನ್ಯಾಯಾಲಯಗಳು ಯಾವುದಕ್ಕೂ ಪ್ರಯೋಜನವಿಲ್ಲ. ಅರ್ಥವ್ಯವಸ್ಥೆಯ ಸುಧಾರಣೆಗಾಗಿ ಭದ್ರವಾದ ವ್ಯವಸ್ಥೆಯು ಬೇಕಿದೆ. ಈ ವ್ಯವಸ್ಥೆಯು ವ್ಯಾವಹಾರಿಕ ಜಗಳಗಳನ್ನು ಬಗೆಹರಿಸುವಂತಿರಬೇಕು. ಇಂತಹ ವ್ಯವಸ್ಥೆಯು ಇಲ್ಲದಿದ್ದರೆ ಹೂಡಿಕೆಯಾಗುವುದಿಲ್ಲ. ವ್ಯವಸ್ಥೆ ಹಾಗೂ ಆಡಳಿತ ವ್ಯವಸ್ಥೆಗಳು ಎಲ್ಲಿಂದ ಬರುತ್ತವೆ ? ವ್ಯಾವಹಾರಿಕ ನ್ಯಾಯಾಲಯ ಕಾನೂನಿನಿಂದಾಗಿ ಕೆಲವು ವ್ಯಾವಸಾಯಿಕ ಜಗಳಗಳನ್ನು ನ್ಯಾಯಾಂಗ ಕಕ್ಷೆಯಲ್ಲಿ ತಂದರೂ ಕಾನೂನನ್ನು ಯಾರು ಜಾರಿಗೊಳಿಸುವರು ? ಅದೇ ನ್ಯಾಯಾಧೀಶರು !

೫. ನ್ಯಾಯಾಧೀಶರು ಪ್ರಧಾನಮಂತ್ರಿಗಳನ್ನು ಹೊಗಳಬಾರದು !

ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಎಮ್. ಆರ್. ಶಹಾರವರು ಪ್ರಧಾನಿ ಮೋದಿಯವರನ್ನು ಬಹಿರಂಗವಾಗಿ ಸ್ತುತಿಸಿದರು; ಆದರೆ ಅವರು ಹಾಗೆ ಹೇಳಿಕೆ ನೀಡಬಾರದಿತ್ತು. ಅವರಿಗೆ ಪ್ರಧಾನಮಂತ್ರಿಗಳ ಬಗ್ಗೆ ಏನೇ ಅನಿಸುತ್ತಿದ್ದರೂ ಅದನ್ನು ತಮ್ಮ ಬಳಿಯೇ ಇಟ್ಟುಕೊಳ್ಳಬೇಕಾಗಿತ್ತು. ಇದರ ಹೊರತು ನಾನು ಏನೂ ಹೇಳಲಾರೆನು; ಆದರೆ ಇದರಿಂದ ಅವರು ಯಾವುದೋ ಕಾರಣಕ್ಕಾಗಿ ಮೋದಿಯವರ ಸ್ತುತಿ ಮಾಡಿದರು ಎಂಬ ಅರ್ಥ ಬರುವುದಿಲ್ಲ.

೬. ರಾಷ್ಟ್ರೀಯ ಪೌರತ್ವ ನೋಂದಣಿಯು ಭವಿಷ್ಯದಲ್ಲಿನ ಮಹತ್ವದ ಕಾಗದಪತ್ರವಾಗುವುದು !

ಅಸ್ಸಾಂನಲ್ಲಿ ಪೌರತ್ವ ನೋಂದಣಿ ಪ್ರಕ್ರಿಯೆಯಲ್ಲಿನ ನ್ಯಾಯಾಂಗ ಪ್ರಕ್ರಿಯೆಯಲ್ಲಿ ನಾನು ಶಕ್ತಿ ಹಾಗೂ ಸಮಯವನ್ನು ವ್ಯಯಿಸಿರುವ ಬಗ್ಗೆ ನನಗೆ ಸ್ವಲ್ಪವೂ ಬೇಸರವಿಲ್ಲ. ಎಲ್ಲ ಪಕ್ಷಗಳು ಈ ಬಗ್ಗೆ ಉತ್ಸಾಹ ಹೊಂದಿಲ್ಲ; ಆದರೆ ಸರ್ವೋಚ್ಚ ನ್ಯಾಯಾಲಯವು ಈ ಪ್ರಕ್ರಿಯೆಯನ್ನು ಸಮಯ ಮಿತಿ ಹಾಕಿ ನೀಡಿತ್ತು. ನ್ಯಾಯಾಲಯವು ಏನು ಮಾಡಬಹುದಿತ್ತು ಅದನ್ನು ನಾವು ಮಾಡಿದ್ದೇವೆ. ಇದರ ಬಗ್ಗೆ ಬೇಸರವಿಲ್ಲ. ರಾಷ್ಟ್ರೀಯ ಪೌರತ್ವ ನೋಂದಣಿಯು ಭವಿಷ್ಯದಲ್ಲಿ ಮಹತ್ವದ ಕಾಗದಪತ್ರವಾಗಲಿದೆ. ಇದರ ಬಗ್ಗೆ ವಿಶ್ಲೇಷಣೆ ಮಾಡಿದರೆ, ಅದರಲ್ಲಿ ಯಾವುದೇ ತಪ್ಪಿಲ್ಲ ಎಂಬುದು ಕಂಡುಬರುತ್ತದೆ. ಇದರ ಮೇಲೆ ಕಾರ್ಯಾಚರಣೆ ಮಾಡಬೇಕು. ಇದರ ಬಗ್ಗೆ ರಾಜಕೀಯ ಪಕ್ಷಗಳು ಇಚ್ಛಾಶಕ್ತಿಯನ್ನು ತೋರಿಸದೇ ಆಟ ಆಡುತ್ತಿವೆ.

೭. ರಾಜ್ಯಸಭೆಯ ಸದಸ್ಯತ್ವಕ್ಕಾಗಿ ಯಾರಾದರೂ ವ್ಯಾಪಾರ ಮಾಡಬಹುದೇ ?

‘ಅಯೋಧ್ಯೆ ಮತ್ತು ರಫೇಲ ಪ್ರಕರಣದಲ್ಲಿ ಕೇಂದ್ರ ಸರಕಾರದ ಪರವಾಗಿ ತೀರ್ಪು ನೀಡುವ ಬದಲಾಗಿ ರಾಜ್ಯಸಭೆಯಲ್ಲಿ ಜಾಗ ಪಡೆಯುವ ಒಪ್ಪಂದ ನಡೆಸಲಾಗಿತ್ತೇ ? ಎಂಬ ಪ್ರಶ್ನೆಗೆ ಗೊಗೋಯಿಯವರು ‘ನಾನು ಇಂತಹ ವಿಷಯಗಳ ಬಗ್ಗೆ ವಿಚಾರ ಮಾಡುವುದಿಲ್ಲ. ನನ್ನ ವಿವೇಕಕ್ಕೆ ನಾನು ಕಟಿಬದ್ಧನಾಗಿದ್ದೇನೆ. ನಾನು ಭಾಜಪ ಸರಕಾರದ ಪಕ್ಷದಲ್ಲಿ ತೀರ್ಪು ನೀಡಿದ್ದೇನೆ ಎಂದು ಹೇಳಲಾಗುತ್ತದೆ; ಆದರೆ ಆ ತೀರ್ಪಿಗೆ ಹಾಗೂ ರಾಜ್ಯಸಭೆಯ ಸಂಸತ್ ಸದಸ್ಯತ್ವಕ್ಕೂ ಯಾವುದೇ ಸಂಬಂಧವಿಲ್ಲ. ಒಪ್ಪಂದ ಮಾಡಲೇ ಬೇಕಾಗಿದ್ದರೆ ರಾಜ್ಯಸಭೆಯ ಜಾಗದಲ್ಲಿ ಸಂತೃಪ್ತನಾಗಬೇಕಿತ್ತೇ ? ರಾಜ್ಯಸಭೆಯ ಸಂಸದನಾಗಿ ನಾನು ಒಂದು ರೂಪಾಯಿಯೂ ಪಡೆಯುತ್ತಿಲ್ಲ. ಇದರ ಬಗ್ಗೆ ಮಾಧ್ಯಮಗಳು ಹಾಗೂ ಟೀಕೆ ಮಾಡುವವರು ಏನೂ ಮಾತನಾಡುವುದಿಲ್ಲ.

೮. ನನ್ನ ಮೇಲಿನ ಆರೋಪಗಳ ಮೇಲೆ ನ್ಯಾಯಮೂರ್ತಿಗಳಾದ ಬೋಬಡೆಯವರು ವಿಚಾರಣೆ ಮಾಡಿದ್ದರು !

‘ತೃಣಮೂಲ ಕಾಂಗ್ರೆಸ್ಸಿನ ಸಂಸದರಾದ ಮಹುಆ ಮೊಯಿತ್ರಾರವರು ಲೋಕಸಭೆಯಲ್ಲಿ ‘ಗೊಗೋಯಿಯವರು ತಮ್ಮ ಮೇಲಿನ ಲೈಂಗಿಕ ಕಿರುಕುಳದ ಆರೋಪದ ತೀರ್ಪನ್ನು ಸ್ವತಃ ನೀಡಿದ್ದರು’ ಎಂಬ ಟೀಕೆ ಮಾಡಿದ್ದರಿಂದ ಅವರ ಮೇಲೆ ಕಾನೂನುಬದ್ಧವಾಗಿ ಕಾರ್ಯಾಚರಣೆಯನ್ನು ಮಾಡುತ್ತೀರಾ ?’ ಎಂಬ ಪ್ರಶ್ನೆಗೆ ಗೊಗೋಯಿಯವರು ಈ ಮಹಿಳಾ ಸಂಸದೆಗೆ ಪ್ರಕರಣದಲ್ಲಿನ ಯೋಗ್ಯ ಸಂಗತಿ ತಿಳಿದಿಲ್ಲ. ಆ ಸಮಯದಲ್ಲಿ ನಾನು ಆ ಪ್ರಕರಣವನ್ನು ನ್ಯಾಯಮೂರ್ತಿ ಶರದ ಬೋಬಡೆಯವರಿಗೆ ನೀಡಿದ್ದೆನು, ಅವರು ವಿಚಾರಣಾ ಸಮಿತಿಯನ್ನು ನೇಮಿಸಿದ್ದರು.