ರೈತ ಆಂದೋಲನದ ಬಗ್ಗೆ ‘ಪರಿಸರವಾದಿ’ ಗ್ರೇಟಾ ಥನಬರ್ಗ ‘ಟೂಲಕಿಟ್ ಟ್ವಿಟ್ ಮಾಡಿದ ಪ್ರಕರಣ

ಬೆಂಗಳೂರಿನ ಕಾರ್ಯಕರ್ತೆ ದಿಶಾ ರವಿಯ ಬಂಧನ

ಈ ಪ್ರಕರಣದಿಂದ ಭಾರತದಲ್ಲಿರುವ ಪರಿಸರವಾದಿಗಳು ‘ಪರಿಸರ ಉಳಿಸುವ’ ನೆಪದಲ್ಲಿ ಯಾವ ರೀತಿ ರಾಷ್ಟ್ರಘಾತಕ ಕಾರವಾಹಿಗಳನ್ನು ಮಾಡುತ್ತಿದ್ದಾರೆ ಎಂದು ಬಯಲಾಗುತ್ತಿದೆ. ಭಾರತ ಸರಕಾರವು ಅಂತಹವರ ಮೇಲೆ ಕಠೋರ ಕ್ರಮ ಜರುಗಿಸುವುದು ಅಗತ್ಯ !

ಬೆಂಗಳೂರು (ಕರ್ನಾಟಕ) – ಸ್ವಿಡನ್‌ನ ‘ಪರಿಸರವಾದಿ’ ಕಾರ್ಯಕರ್ತೆ ಗ್ರೇಟಾ ಥನಬರ್ಗ ಭಾರತದಲ್ಲಿ ನಡೆಯುತ್ತಿರುವ ರೈತ ಆಂದೋಲನದ ಬಗ್ಗೆ ಮಾಡಿದ ಟ್ವಿಟ್ ಹಾಗೂ ‘ಟೂಲಕಿಟ್ (ರೈತ ಆಂದೋಲನವನ್ನು ವಿವಿಧ ರೀತಿಯಲ್ಲಿ ಬೆಂಬಲಿಸಲು ಮಾಡಬಹುದಾದ ಕೃತಿಗಳ ವಿಷಯದಲ್ಲಿ ಸಂಪೂರ್ಣ ರೂಪರೇಖೆ) ಅನ್ನು ಪ್ರಕಟಿಸಿದ ಪ್ರಕರಣದಲ್ಲಿ ದೆಹಲಿ ಪೋಲೀಸರು ಇಲ್ಲಿನ ೨೧ ವರ್ಷದ ‘ಪರಿಸರ’ ಕಾರ್ಯಕರ್ತೆ ಹಾಗೂ ವಿಧ್ಯಾರ್ಥಿ ದಿಶಾ ರವಿ ಎಂಬ ಯುವತಿಯನ್ನು ಬಂಧಿಸಿದ್ದಾರೆ. ಟೂಲಕಿಟ್ನಲ್ಲಿ ಮಾರ್ಪಾಟು ಮಾಡಿ ಅದರ ಜೊತೆಗೆ ಬೇರೆ ಅಂಶಗಳನ್ನು ಸೇರಿಸಿ ಅದನ್ನು ಮುಂದೆ ಕಳುಹಿದ ಆರೋಪ ದಿಶಾ ಮೇಲಿದೆ.

ಈ ಪ್ರಕರಣದಲ್ಲಿ ಫೆಬ್ರವರಿ ೪ ರಂದು ಪೋಲೀಸರು ಅಪರಾಧ ನೋಂದಾಯಿಸಿದ್ದರು. ದಿಶಾ ಹವಾಮಾನ ಬದಲಾವಣೆಯ ವಿಷಯದ ಮೇಲೆ ‘ಫ್ರಾಯಡೇ ಫಾರ್ ಫ್ಯೂಚರ್’ ಎಂಬ ಅಭಿಯಾನದ ಸಂಸ್ಥಾಪಕ ಸದಸ್ಯೆ. ಪೂಲೀಸರು ದಿಶಾಳ ವಿಚಾರಣೆ ಮಾಡಿದಾಗ ಆಕೆ ‘ಟೂಲಕಿಟ್‌ನಲ್ಲಿ ಮಾರ್ಪಾಟು ಮಾಡಿ ಮುಂದೆ ಕಳುಹಿಸಿದ್ದಾಗಿ’ ಒಪ್ಪಿಕೊಂಡಿರುವುದಾಗಿ ದೆಹಲಿ ಪೋಲೀಸರ ವಿಶೇಷ ಉಪಶಾಖೆಯ ಅಧಿಕಾರಿಗಳು ಹೇಳಿದ್ದಾರೆ. ಭಾರತದಲ್ಲಿ ನಡೆಯುತ್ತಿರುವ ರೈತರ ಆಂದೋಲನದಲ್ಲಿ ಈ ಟೂಲಕಿಟ್‌ನ ಮೂಲಕ ಅಶಾಂತಿ ಹಬ್ಬಿಸುವ ರೂಪರೇಖೆ ಸಂಬಂಧಪಟ್ಟವರಿಗೆ ನೀಡಲಾಗಿತ್ತು ಹಾಗೂ ಅದಕ್ಕೆ ಅನುಸಾರವಾಗಿ ಪ್ರತಿಯೊಂದು ಕೃತಿ ಮಾಡಲಾಗುತ್ತಿತ್ತು.