ರೈಲ್ವೆ ನಿಲ್ದಾಣದಲ್ಲಿ ೪ ವರ್ಷಗಳಿಂದ ೩ ಲಕ್ಷ ರೂಪಾಯಿ ಇದ್ದ ತಿಜೋರಿ ಹಾಗೆ ಬಿದ್ದಿಕೊಂಡಿದ್ದರಿಂದ ನೋಟುಗಳು ಹಾಳಾದವು

ರೈಲ್ವೆ ಆಡಳಿತದ ಅಕ್ಷಮ್ಯ ನಿರ್ಲಕ್ಷ್ಯ!

ಇದಕ್ಕೆ ಕಾರಣರಾದವರಿಂದ ಬಡ್ಡಿ ಸೇರಿ ಎಲ್ಲಾ ಮೊತ್ತವನ್ನು ವಸೂಲಿ ಮಾಡಬೇಕು!

(ಸಾಂಕೇತಿಕ ಚಿತ್ರ)

ನವ ದೆಹಲಿ : ನವ ದೆಹಲಿಯಿಂದ ಅಂಬಾಲಾ ರೈಲು ನಿಲ್ದಾಣಕ್ಕೆ ೩ ಲಕ್ಷ ರೂಪಾಯಿಗಳ ನಗದು ಇದ್ದ ತಿಜೋರಿ ಕೊಂಡೊಯ್ದಿದ್ದ ಪ್ಯಾಸೆಂಜರ್ ರೈಲಿನಿಂದು ಆ ತಿಜೋರಿಯನ್ನು ಕೆಳಗಿಳಿಸಲೇ ಇಲ್ಲ. ಅದು ನೇರವಾಗಿ ಕಲಕಾಗೆ ತಲುಪಿತು. ಈ ತಿಜೋರಿ ಸುಮಾರು ೪ ವರ್ಷಗಳಿಂದ ಕಲಕಾ ರೈಲು ನಿಲ್ದಾಣದಲ್ಲಿ ಹಾಗೆ ಇತ್ತು. ಈ ಅವಧಿಯಲ್ಲಿ ನೋಟು ಅನಾಣ್ಯೀಕರಣ ಸಹ ಆಯಿತು. ಅನಂತರ ರೈಲ್ವೆ ಅಧಿಕಾರಿಗಳಿಗೆ ತಿಜೋರಿಯ ನೆನಪಾದಾಗ ಅದನ್ನು ಹುಡುಕಿಕೊಂಡು ತೆರೆದಾಗ ಅದರಲ್ಲಿದ್ದ ೫೦೦ ಮತ್ತು ೧,೦೦೦ ರೂ ನೋಟುಗಳು ಸಂಪೂರ್ಣವಾಗಿ ಹಾನಿಯಾಗಿದ್ದ ಸ್ಥಿತಿಯಲ್ಲಿ ದೊರೆತವು. ಇದರಿಂದಾಗಿ ೩ ಲಕ್ಷ ರೂ. ಹಾನಿ ಆಯಿತು. ಈ ಘಟನೆಯ ತನಿಖೆಗಾಗಿ ಅಧಿಕಾರಿಗಳನ್ನು ನೇಮಿಸಲಾಯಿತು. ೨೫ ಅಕ್ಟೋಬರ್ ೨೦೧೬ ರಂದು ತಿಜೋರಿಯನ್ನು ಅಂಬಾಲಾ ಗೆ ಕಳುಹಿಸಲಾಗಿತ್ತು.