ಹಿಂದೂಗಳ ಧಾರ್ಮಿಕ ಭಾವನೆ ನೋಯಿಸುವ ವೆಬ್ ಸಿರೀಸ್‌ಗಳಿಗೆ ಸೆನ್ಸಾರ್ಶಿಪ್ ತನ್ನಿ ! – ಲೋಕಸಭೆಯಲ್ಲಿ ಬಿಜೆಪಿ ಸಂಸದರ ಒಮ್ಮತ

ಅಂತಹ ಬೇಡಿಕೆ ಏಕೆ ಮಾಡಬೇಕಾಗುತ್ತದೆ ? ಸರಕಾರಕ್ಕೆ ಅದೇಕೆ ಗಮನಕ್ಕೆ ಬರುವುದಿಲ್ಲ? ಹಿಂದೂಗಳು ಅಂತಹ ಬೇಡಿಕೆಯನ್ನು ಮಾಡುವುದು ಅಪೇಕ್ಷಿತವಲ್ಲ ! ಬಿಜೆಪಿ ಸಂಸದರು ಈ ಬೇಡಿಕೆಯ ಬಗ್ಗೆ ಸರ್ಕಾರದ ಮೇಲೆ ಒತ್ತಡ ಹೇರಬೇಕು ಮತ್ತು ಇಂತಹ ವೆಬ್ ಸಿರೀಸ್‌ಗಳ ಮೇಲೆ ಕ್ರಮಕೈಗೊಳ್ಳಬೇಕು !

ನವ ದೆಹಲಿ : ವೆಬ್ ಸಿರೀಸ್ ಮಾಧ್ಯಮದಿಂದ ಹಿಂದೂಗಳ ದೇವತೆಗಳನ್ನು ಅವಮಾನಿಸುವ ಮೂಲಕ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ನೋವುಂಟು ಆಗುತ್ತಿರುವುದರಿಂದ ವೆಬ್ ಸಿರೀಸ್‌ಗೆ ಸೆನ್ಸಾರ್ಶಿಪ್ (ನಿರ್ಬಂಧಗಳನ್ನು) ವಿಧಿಸಬೇಕೆಂದು ಲೋಕಸಭೆಯಲ್ಲಿ ಬಿಜೆಪಿ ಸಂಸದರು ಒತ್ತಾಯಿಸಿದ್ದಾರೆ.

ಲೋಕಸಭೆಯಲ್ಲಿ ವಿವಿಧ ಬಿಜೆಪಿ ಸಂಸದರು ಮಾಡಿದ ಬೇಡಿಕೆಗಳು

. ಮನೋಜ್ ಕೋಟಕ ಇವರು ಮಾತನಾಡುತ್ತಾ, ವೆಬ್ ಸಿರೀಸ್ ಅನಗತ್ಯ ಹಿಂಸೆ, ಮದ್ಯಪಾನ ಮತ್ತು ಹಿಂದೂ ದೇವತೆಗಳನ್ನು ಅವಮಾನಿಸುವುದನ್ನು ಚಿತ್ರಿಸುತ್ತವೆ. ಈ ರೀತಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವುದನ್ನು ಸರಕಾರ ನಿಲ್ಲಿಸಬೇಕು ಮತ್ತು ವೆಬ್ ಸಿರೀಸ್‌ಗಳನ್ನು ಸೆನ್ಸಾರ್ ಮಾಡಬೇಕು, ಎಂದರು.

೨. ಡಾ. ಕಿರಿಟ್ ಸೋಲಂಕಿಯವರು ಮಾತನಾಡುತ್ತಾ, ‘ವೆಬ್ ಸಿರೀಸ್‌ಗಳ ಮೂಲಕ ಭಾರತೀಯ ಸಂಸ್ಕೃತಿಯ ಮೇಲೆ ಆಕ್ರಮಣ ಮಾಡಲಾಗುತ್ತಿದೆ. ಇದು ಯುವ ಪೀಳಿಗೆಯ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತದೆ. ಒಟಿಟಿ ಆಪ್‌ಗಳ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು ಮತ್ತು ಅವುಗಳನ್ನು ನಿಷೇಧಿಸಬೇಕು’, ಎಂದರು.

. ಸಂಸದ ಶಂಕರ್ ಲಾಲ್ವಾನಿಯವರು ಮಾತನಾಡುತ್ತಾ ಮೊಬೈಲ್ ಫೋನ್‌ಗಳಲ್ಲಿ ವೆಬ್ ಸಿರೀಸ್ ಮೂಲಕ ಹಿಂಸೆ, ಅವಮಾನ ಇತ್ಯಾದಿಗಳನ್ನು ತೋರಿಸಲಾಗುತ್ತಿದೆ ಎಂದು ಹೇಳಿದರು. ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಲಾಗುತ್ತಿದೆ. ಹಾಗಾಗಿ ಸೆನ್ಸಾರ್‌ಶಿಪ್ ಇರಬೇಕು, ಎಂದು ಒತ್ತಾಯಿಸಿದರು.

೪. ವಿನೋದ್‌ಕುಮಾರ್ ಸೋಂಕರ್ ಕೂಡ ವೆಬ್ ಸಿರೀಸ್‌ಗಳಿಗೆ ಸೆನ್ಸಾರ್‌ಶಿಪ್ ಅನ್ವಯಿಸುವಂತೆ ಒತ್ತಾಯಿಸಿದರು. ವೆಬ್ ಸಿರೀಸ್‌ನ ಪಾತ್ರವೊಂದನ್ನು ಉಲ್ಲೇಖಿಸಿದ ಅವರು, ಉತ್ತರ ಪ್ರದೇಶದ ಉದ್ಯಮವೊಂದನ್ನು ಅಪಖ್ಯಾತಿಗೆ ಒಳಪಡಿಸಲಾಗುತ್ತಿದೆ ಎಂದು ಹೇಳಿದರು.