ಜಗತ್ತಿನಲ್ಲಿ ಹಿಂದೂಗಳಿಲ್ಲದ ಸ್ಥಳಗಳಲ್ಲಿ ಮುಸಲ್ಮಾನರು ತಮ್ಮಲ್ಲೇ ಹೋರಾಡಿ ಸಾಯುತ್ತಿದ್ದಾರೆ! – ಕಾಂಗ್ರೆಸ್ ಮುಖಂಡ ಗುಲಾಮ್ ನಬಿ ಆಜಾದ್

* ಗುಲಾಮ್ ನಬಿ ಆಜಾದ್ ಅವರು ೨೮ ವರ್ಷಗಳ ಕಾಲ ರಾಜಕೀಯದಲ್ಲಿ ಸಕ್ರಿಯವಾಗಿದ್ದರೂ ಈ ಸತ್ಯವನ್ನು ಹೇಳಲು ಅವರಿಗೆ ಇಷ್ಟು ವರ್ಷ ಏಕೆ ಬೇಕಾಯಿತು? ಈ ಸಂಗತಿಯನ್ನು ತಿಳಿದಿರುವ ಎಷ್ಟೋ ಮುಸ್ಲಿಂ ನಾಯಕರು ಇದ್ದಾರೆ; ಆದರೆ ಅವರು ಎಂದಿಗೂ ಸತ್ಯವನ್ನು ಮಾತನಾಡುವುದಿಲ್ಲವಲ್ಲ? ತಥಾಕಥಿತ ಜಾತ್ಯತೀತವಾದಿಗಳು, ಪ್ರಗತಿ(ಅಧೋಗತಿ)ಪರರು ಈಗ ಈ ಬಗ್ಗೆ ಮಾತನಾಡುವರೇ ?

* ಭಾರತದಲ್ಲಿ ಹಿಂದೂಗಳು ಜಾತ್ಯತೀತ ಮತ್ತು ಸಹಿಷ್ಣುರಾಗಿರುವುದರಿಂದ ಭಾರತವು ಇಡೀ ವಿಶ್ವದ ಒಂದು ಶಾಂತಿಪ್ರಿಯ ದೇಶವಾಗಿದೆ; ಆದರೆ ಹಿಂದೂಗಳು ತಮ್ಮ ಜೀವ ಕೊಟ್ಟು ಅಥವಾ ನಿರಂತರ ದೌರ್ಜನ್ಯಗಳನ್ನು ಸಹಿಸಿ ಅದರ ಮೌಲ್ಯವನ್ನು ತೆರುತ್ತಿದ್ದಾರೆ. ಹಿಂದೂಗಳು ಶಾಂತಿಯನ್ನು ಬಯಸುತ್ತಿರುವುದರಿಂದ, ಅವರು ಈಗ ಹಿಂದೂ ರಾಷ್ಟ್ರಕ್ಕಾಗಿ ಕಟಿಬದ್ಧರಾಗಿರಬೇಕು!

* ಗುಲಾಮ್ ನಬಿ ಆಜಾದ್ ಕಾಶ್ಮೀರದ ಮುಖ್ಯಮಂತ್ರಿಯಾಗಿದ್ದಾಗ ಅಥವಾ ಕೇಂದ್ರದಲ್ಲಿ ಸಚಿವರಾಗಿದ್ದಾಗ, ಅವರು ಹಿಂದೂಗಳಿಗೆ ಕಾಶ್ಮೀರದಲ್ಲಿ ಪುನರ್ವಸತಿ ಕಲ್ಪಿಸಲು ಏಕೆ ಪ್ರಯತ್ನಿಸಲಿಲ್ಲ, ಎಂಬುದನ್ನೂ ವಿವರಿಸಬೇಕು!

ಗುಲಾಮ್ ನಬಿ ಆಜಾದ್

ನವ ದೆಹಲಿ : ಕಳೆದ ೩೦ ರಿಂದ ೩೫ ವರ್ಷಗಳಲ್ಲಿ, ಅಫ್ಘಾನಿಸ್ತಾನದಿಂದ ಇರಾಕ್ ವರೆಗೆ, ಮುಸ್ಲಿಮರು ಹೇಗೆ ಪರಸ್ಪರ ಜಗಳವಾಡುತ್ತಾ ಸಾಯುತ್ತಿದ್ದಾರೆ ಎಂಬುದನ್ನು ನಾವು ನೋಡಿದ್ದೇವೆ. ಅಲ್ಲಿ ಹಿಂದೂಗಳಿಲ್ಲ, ಕ್ರೈಸ್ತರು ಇಲ್ಲ. ಅಲ್ಲಿ ಬೇರೆ ಯಾರೂ ಜಗಳವಾಡುತ್ತಿಲ್ಲ. ಅವರು ತಮ್ಮಲ್ಲಿಯೇ ಹೋರಾಡುತ್ತಿದ್ದಾರೆ. ಪಾಕಿಸ್ತಾನದ ಪರಿಸ್ಥಿತಿಯ ಬಗ್ಗೆ ಓದಿದಾಗ, ನಾನು ಭಾರತೀಯ ಮುಸಲ್ಮಾನ ಎಂದು ಹೇಳಲು ಹೆಮ್ಮೆಪಡುತ್ತೇನೆ. ಅಷ್ಟೇ ಅಲ್ಲ, ಜಗತ್ತಿನಲ್ಲಿ ಯಾರಾದರೂ ಮುಸ್ಲಿಮರು ಹೆಮ್ಮೆ ಪಡಬೇಕಾದರೆ ಅದು ಭಾರತೀಯ ಮುಸ್ಲಿಮರಾಗಿರಬೇಕು ಎಂದು ಕಾಂಗ್ರೆಸ್ ಹಿರಿಯ ಮುಖಂಡ ಗುಲಾಮ್ ನಬಿ ಆಜಾದ್ ಅವರು ರಾಜ್ಯಸಭೆಯಲ್ಲಿ ಅವರ ಅವಧಿ ಮುಗಿದ ದಿನದಂದು ಆಭಾರ ಸಲ್ಲಿಸುವಾಗ ಭಾಷಣ ಮಾಡುತ್ತಾ ಹೇಳಿದರು.

‘ನಾವು ಯಾವಾಗಲೂ ಅದೃಷ್ಟವಂತರೆಂದು ನಂಬಿದ್ದೇನೆ. ನಾನು ಸ್ವಾತಂತ್ರ್ಯದ ನಂತರ ಜನಿಸಿದೆ. ಪಾಕಿಸ್ತಾನಕ್ಕೆ ಹೋಗದ ಅದೃಷ್ಟಶಾಲಿಗಳಲ್ಲಿ ನಾನೂ ಒಬ್ಬನು. ನಾನು ಭಾರತೀಯ ಮುಸ್ಲಿಂ ಎಂದು ಹೇಳಲು ಹೆಮ್ಮೆ ಪಡುತ್ತೇನೆ, ಎಂದು ಆಜಾದ್ ಹೇಳಿದರು