ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಹೇಳಿದ್ದನ್ನು ನಾನು ಮಾಡಬೇಕಾಗುತ್ತಿದೆ !

ಕೃಷಿ ಕಾನೂನುಗಳ ಬಗ್ಗೆ ಪ್ರಧಾನಿ ಮೋದಿಯಿಂದ ಕಾಂಗ್ರೆಸ್‌ಗೆ ಟಾಂಗ್!

ಪ್ರಧಾನ ಮಂತ್ರಿ ನರೇಂದ್ರ ಮೋದಿ

ನವ ದೆಹಲಿ: ಕೃಷಿ ಕಾನೂನಿನ ಕುರಿತು ಕಾಂಗ್ರೆಸ್ ತನ್ನ ನಿಲುವನ್ನು ಬದಲಿಸಿದೆ ಮತ್ತು ‘ಯು-ಟರ್ನ್’ ತೆಗೆದುಕೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಬಗ್ಗೆ ನಡೆದ ಚರ್ಚೆಯ ವೇಳೆ ಪ್ರತಿಕ್ರಿಯಿಸಿದರು. ಆಗ ಅವರು ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಹಳೆಯ ಹೇಳಿಕೆಯನ್ನು ಓದಿ. ಅದರಲ್ಲಿ ಮನಮೋಹನ್ ಸಿಂಗ್ ಅವರು ರೈತರಿಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವ ಹಕ್ಕನ್ನು ಹೊಂದಿಲ್ಲ ಎಂದು ಉಲ್ಲೇಖಿಸಿದ್ದರು.

ಮನಮೋಹನ್ ಸಿಂಗ್ ಅವರ ಹೇಳಿಕೆಯನ್ನು ಓದಿದ ನಂತರ ಮೋದಿಯವರು, ‘ರೈತರು ಈ ಹಕ್ಕನ್ನು ಪಡೆಯಬೇಕು. ಕೃಷಿ ಮಾರುಕಟ್ಟೆಗಳನ್ನು ಹೆಚ್ಚು ಮುಕ್ತಗೊಳಿಸಬೇಕಾಗಿದೆ. ಕೃಷಿ ಮಾರುಕಟ್ಟೆಗಳನ್ನು ಪರಾವಲಂಬಿ ಮಾಡುವ ವ್ಯವಸ್ಥೆಯನ್ನು ಬದಲಾಯಿಸುವುದು ನಮ್ಮ ಉದ್ದೇಶ. ೧೯೩೦ ರಿಂದ ಅಸ್ತಿತ್ವದಲ್ಲಿದ್ದ ಕೃಷಿ ಸರಕುಗಳ ಮಾರಾಟಕ್ಕೆ ಹೊಸ ಕಾರ್ಯವಿಧಾನವನ್ನು ಸ್ಥಾಪಿಸುವ ಆವಶ್ಯಕತೆಯಿದೆ. ’ಆದ್ದರಿಂದ, ಕಾಂಗ್ರೆಸ್ ನನ್ನ ಮಾತನ್ನು ಕೇಳುವುದಿಲ್ಲ, ಆದರೆ ಕನಿಷ್ಠಪಕ್ಷ ಡಾ. ಮನಮೋಹನ ಸಿಂಗ್ ಅವರ ಮಾತನ್ನು ಕೇಳಬಹುದು. ಕೃಷಿ ಕ್ಷೇತ್ರದಲ್ಲಿ ಬದಲಾವಣೆ ತರಲು ನಿರ್ಧರಿಸಿದ್ದೇವೆ. ‘ಮನಮೋಹನ್ ಸಿಂಗ್ ಹೇಳಿದ್ದನ್ನು ಮೋದಿಗೆ ಮಾಡಬೇಕಾಗುತ್ತಿದೆ’ ಎಂಬುದರ ಬಗ್ಗೆ ನಿಮಗೆ (ಕಾಂಗ್ರೆಸ್) ಹೆಮ್ಮೆ ಅನಿಸಬೇಕು ಎಂದು ಪ್ರಧಾನಿ ಮೋದಿ ಟೀಕಿಸಿದರು.