ಹಿಂದೂ ದೇವರನ್ನು ಅಪಹಾಸ್ಯ ಮಾಡುವವರಿಗೆ ಶಿಕ್ಷೆಯಾಗಲೇ ಬೇಕು ! – ಪಾಯಲ ರೋಹತಗಿ, ಚಿತ್ರನಟಿ
ಮುಂಬೈ – ಚಲನಚಿತ್ರ, ವೆಬ್ ಸಿರೀಸ್ ಇವುಗಳ ಮೂಲಕ ಉದ್ದೇಶಪೂರ್ವಕವಾಗಿ ಹಿಂದೂದ್ವೇಷವನ್ನು ಹಬ್ಬಿಸುವ ಷಡ್ಯಂತ್ರವನ್ನು ರಚಿಸಲಾಗಿದೆ. ಇದರಿಂದ ಸನಾತನ ಹಿಂದೂ ಧರ್ಮದ ಅನುಯಾಯಿಗಳಲ್ಲಿ ಕೀಳರಿಮೆ ಮತ್ತು ಹಿಂದೂ ಧರ್ಮದ ವಿಷಯದಲ್ಲಿ ನಕಾರಾತ್ಮಕತೆಯು ಉಂಟಾಗುತ್ತದೆ ಮತ್ತು ಅವರು ತಮ್ಮ ‘ಹಿಂದೂ ಎಂಬ ಪರಿಚಯವನ್ನು ಮರೆತು ಬಿಡುವರು. ಚಲನಚಿತ್ರ, ವೆಬ್ ಸಿರೀಸ್ ಇವುಗಳನ್ನು ಪ್ರಸಿದ್ಧಿಗೊಳಿಸಲು ಈ ರೀತಿ ಮಾಡಲಾಗುತ್ತದೆ. ಯಾರಿಗೆ ಸರಿಯಾಗಿ ನಟನೆ ಮಾಡಲು ಸಹ ಗೊತ್ತಿಲ್ಲವೋ ಅಂತಹವರಿಗೆಲ್ಲ ತಮ್ಮ ದೇಶವಿರೋಧಿ ಅಥವಾ ಹಿಂದೂವಿರೋಧಿ ನಿಲುವಿನಿಂದ ಚಲನಚಿತ್ರಗಳಲ್ಲಿ ಅಥವಾ ವೆಬ್ ಸಿರೀಸ್ ಇವುಗಳಲ್ಲಿ ಕೆಲಸ ಸಿಗುತ್ತದೆ. ಇದು ಒಂದು ರಣನೀತಿ ಮತ್ತು ಹಿಂದೂ ಧರ್ಮದ ಮೇಲೆ ತೆರೆಮರೆಯಲ್ಲಿ ಮಾಡಲಾಗುತ್ತಿರುವ ಆಕ್ರಮಣವಾಗಿದೆ. ಕೇಂದ್ರ ಸರಕಾರವು ಬಹುಸಂಖ್ಯಾತರ ಧಾರ್ಮಿಕ ಭಾವನೆಗಳನ್ನು ದಾಖಲಿಸಿಕೊಂಡು ಸಾಮಾಜಿಕ ಸಾಮರಸ್ಯಕ್ಕಾಗಿ ದೇವನಿಂದನೆವಿರೋಧಿ ಕಾನೂನಿನಂತಹ ಕಠಿಣ ಕಾನೂನು ತರಬೇಕು. ಹಾಗೆಯೇ ಸ್ವಂತದ ‘ಕರಿಯರ್ ಅಥವಾ ‘ಫ್ಯಾಶನ್ಗಾಗಿ ಹಿಂದೂ ದೇವತೆಗಳ ಅಪಹಾಸ್ಯ ಮಾಡುವವರಿಗೆ ಶಿಕ್ಷೆಯಾಗಲೇಬೇಕು ಎಂದು ನಟಿ ಪಾಯಲ ರೊಹತಗಿಯವರು ಸ್ಪಷ್ಟವಾಗಿ ಪ್ರತಿಪಾದಿಸಿದರು.
ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ‘ಚರ್ಚಾ ಹಿಂದೂ ರಾಷ್ಟ್ರ ಕಿ ಎಂಬ ಕಾರ್ಯಕ್ರಮದ ಅಂತರ್ಗತ ‘ದೇವನಿಂದನೆ ವಿರೋಧಿ ಕಾನೂನು ಏಕೆ ಬೇಕು ? ಎಂಬ ಆನ್‌ಲೈನ್ ವಿಚಾರ ಸಂಕಿರಣವನ್ನು ಆಯೋಜನೆ ಮಾಡಲಾಗಿತ್ತು. ಆ ಸಮಯದಲ್ಲಿ ಅವರು ಮಾತನಾಡುತ್ತಿದ್ದರು. ಯು-ಟ್ಯೂಬ್, ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲಿ ಪ್ರಸಾರವಾದ ಈ ಕಾರ್ಯಕ್ರಮವನ್ನು ೫೭ ಸಾವಿರಕ್ಕಿಂತಲೂ ಹೆಚ್ಚಿನ ಜನರು ವೀಕ್ಷಿಸಿದ್ದಾರೆ.
ಈ ಸಮಯದಲ್ಲಿ ಹಿಂದೂ ವಿಧಿಜ್ಞ ಪರಿಷತ್ತಿನ ನ್ಯಾಯವಾದಿ ವೀರೇಂದ್ರ ಇಚಲಕರಂಜಿಕರ ಇವರು ಮಾತನಾಡುತ್ತಾ, “ಚಲನಚಿತ್ರ, ವೆಬ್ ಸಿರೀಸ್ ಇವುಗಳ ಮೂಲಕ ಹಿಂದೂದ್ವೇಷವನ್ನು ಹಬ್ಬಿಸುವುದು ಒಂದು ರೀತಿಯಲ್ಲಿ ಬೌದ್ಧಿಕ ಉಗ್ರವಾದವೇ ಆಗಿದೆ ಮತ್ತು ಹಿಂದೂಗಳು ಅದಕ್ಕೆ ಬಲಿಯಾಗುತ್ತಿದ್ದಾರೆ. ಇತರ ಧರ್ಮೀಯರು ಆಕ್ಷೇಪವೆತ್ತಿದಾಗ ‘ಸೆಟಾನಿಕ್ ವರ್ಸಸ್ ಈ ಕಾದಂಬರಿ ಹಾಗೂ ‘ದ ಡಾ ವಿಂಚಿ ಕೋಡ್ ನಂತಹ ಚಲನಚಿತ್ರಗಳನ್ನು ತಕ್ಷಣ ನಿಷೇಧಿಸಲಾಗುತ್ತದೆ. ಆದರೆ ಹಿಂದೂಗಳು ಆಕ್ಷೇಪವೆತ್ತಿದಾಗ ಮಾತ್ರ ಇಂತಹ ಕಾರ್ಯಾಚರಣೆ ಆಗುವುದಿಲ್ಲ. ಚಲನಚಿತ್ರಕ್ಕೆ ಮಾನ್ಯತೆಯನ್ನು ನೀಡಲು ಸೆನ್ಸಾರ್ ಬೋರ್ಡ್ ಇದೆ. ಆದರೆ ಅದರ ಸದಸ್ಯರು ಯಾವುದರ ಆಧಾರದಲ್ಲಿ ಚಲನಚಿತ್ರಗಳಿಗೆ ಮಾನ್ಯತೆ ನೀಡುತ್ತಾರೆ ಎಂಬುದು ಪ್ರಶ್ನಾರ್ಥಕವಾಗಿದೆ. ಈ ವಿಷಯದಲ್ಲಿ ಜಾಗೃತಿಯನ್ನು ಮೂಡಿಸಲು ದೊಡ್ಡ ಆಂದೋಲನವನ್ನು ಹಮ್ಮಿಕೊಳ್ಳುವ ಆವಶ್ಯಕತೆಯಿದೆ. ಇಂದು ಲಭ್ಯವಿರುವ ಕಾನೂನುರೀತ್ಯಾ ಸಾಧನಗಳನ್ನು ಉಪಯೋಗಿಸಿ ಹಿಂದೂದ್ವೇಷಕ್ಕೆ ಕಡಿವಾಣ ಹಾಕಬೇಕು ಎಂದರು.
ಈ ಸಮಯದಲ್ಲಿ ದೇವತೆಗಳ ಅವಮಾನದ ವಿರುದ್ಧ ಕಾನೂನುರೀತ್ಯಾ ಹೋರಾಟ ನಡೆಸುತ್ತಿರುವ ಹಿಂದೂ ಐ.ಟಿ.ಸೆಲ್‌ನ ಸಂಸ್ಥಾಪಕ ಶ್ರೀ. ರಮೇಶ ಸೋಲಂಕಿ ಇವರು ಮಾತನಾಡುತ್ತಾ, ‘ದೇವತೆಗಳ ಅವಮಾನಗಳ ವಿರುದ್ಧ ದೂರು ನೋಂದಾಯಿಸಿಕೊಳ್ಳಲು ಸಹ ಪೊಲೀಸರು ಹಿಂದೆಮುಂದೆ ನೋಡುತ್ತಾರೆಂಬ ಅನುಭವ ಬರುತ್ತದೆ. ಇದರ ಬಗ್ಗೆ ಹಿಂದೂಗಳು ಜಾಗೃತರಾಗುವ ಆವಶ್ಯಕತೆಯಿದೆ. ನೀವು ಸುಧಾರಿಸಿಕೊಳ್ಳಿ. ಇಲ್ಲದಿದ್ದರೆ ನಾವು ಕಾನೂನುಮಾರ್ಗದಲ್ಲಿ ನಿಮ್ಮನ್ನು ನಾವು ಸುಧಾರಣೆ ಮಾಡುವೆವು ಎಂದು ಅವರು ಹಿಂದೂವಿರೋಧಿಗಳಿಗೆ ಎಚ್ಚರಿಕೆಯನ್ನು ನೀಡಿದರು.