೬೦ ವರ್ಷಗಳಿಂದ ಗುಹೆಯಲ್ಲಿದ್ದು ಧ್ಯಾನ ಸಾಧನೆ ಮಾಡುತ್ತಿರುವ ಋಷಿಕೇಶದ ಸಂತರಿಂದ ಶ್ರೀರಾಮ ಮಂದಿರಕ್ಕಾಗಿ ೧ ಕೋಟಿ ರೂಪಾಯಿ ದಾನ!

ಹರಿದ್ವಾರ (ಉತ್ತರಾಖಂಡ) : ಸ್ಥಳೀಯ ೭೩ ವರ್ಷದ ಸ್ವಾಮಿ ಶಂಕರ ದಾಸರು ಶ್ರೀರಾಮಮಂದಿರಕ್ಕಾಗಿ ೧ ಕೋಟಿ ರೂಪಾಯಿಗಳ ದಾನ ನೀಡಿದ್ದಾರೆ. ಸ್ವಾಮಿ ಶಂಕರ ದಾಸರು ಸುಮಾರು ೬೦ ವರ್ಷಗಳಿಂದ ಋಷಿಕೇಶದ ಗುಹೆಯೊಂದರಲ್ಲಿ ಧ್ಯಾನ ಸಾಧನೆಯನ್ನು ಮಾಡುತ್ತಿದ್ದಾರೆ. ಸ್ವಾಮಿಜೀಯ ಗುರುಗಳಾದ ಟಾಟಾವಾಲೆ ಬಾಬಾ ಇವರ ಗುಹೆಗೆ ಬರುತ್ತಿದ್ದ ಶ್ರದ್ಧಾಳುಗಳಿಂದ ಸಿಕ್ಕಿದ ಅರ್ಪಣೆಯಿಂದ ಅವರು ೧ ಕೋಟಿ ರೂಪಾಯಿಗಳನ್ನು ಸಂಗ್ರಹಿಸಿರುವುದಾಗಿ ತಿಳಿಸಿದ್ದಾರೆ. ಅವರು ಇಲ್ಲಿನ ಸ್ಟೇಟ್ ಬ್ಯಾಂಕ್ ಖಾತೆಗೆ ಹೋಗಿ ಧನಾದೇಶ (ಚೆಕ್) ವನ್ನು ನೀಡಿದರು.

ಸ್ವಾಮಿ ಶಂಕರ ದಾಸ ಇವರ ಪ್ರಕಾರ, ಅವರಿಗೆ ಗುಪ್ತವಾಗಿ ದಾನ ಮಾಡುವ ಇಚ್ಛೆಯಿತ್ತು. ಆದರೆ ಮಂದಿರ ನಿರ್ಮಾಣಕ್ಕೆ ಎಲ್ಲರಿಗೂ ಪ್ರೇರಣೆ ಸಿಗಲಿ ಎಂದು ದಾನದ ಮೊತ್ತವನ್ನು ಘೋಷಿಸಲಾಯಿತು. ಸ್ವಾಮಿ ಶಂಕರ ದಾಸ ಇವರನ್ನು ಸ್ಥಳೀಯ ಜನರು ‘ಫಕ್ಕಡ ಬಾಬಾ’ ಎಂದು ಕರೆಯುತ್ತಾರೆ. ಜನರು ನೀಡಿದ ದಾನ-ಧರ್ಮದಿಂದಲೇ ಅವರು ಜೀವನವನ್ನು ನಡೆಸುತ್ತಾರೆ.