ಚೀನಾ ಭಾರತಕ್ಕೆ ನಂಬಿಕೆದ್ರೋಹ ಬಗೆದಿದೆ ! – ರಕ್ಷಣಾ ಸಚಿವ ರಾಜನಾಥ ಸಿಂಗ್

 ‘ಚೀನಾ ವಿಶ್ವಾಸಕ್ಕೆ ಅರ್ಹವಲ್ಲ’, ಎಂದು ಕೆಲವು ದಶಕಗಳ ಹಿಂದೆಯೇ ಸ್ಪಷ್ಟವಾಗಿರುವಾಗ ಭಾರತವು ಪುನಃಪುನಃ ಅದರ ಮೇಲೆ ಹೇಗೆ ವಿಶ್ವಾಸವಿಡುತ್ತದೆ ? ‘ಚೀನಾದ ಮೇಲೆ ವಿಶ್ವಾಸವಿಡುವುದು ಆತ್ಮಘಾತವಾಗಿದ್ದು, ಅದಕ್ಕೆ ತಿಳಿಯುವಂತಹ ಭಾಷೆಯಲ್ಲಿಯೇ ಉತ್ತರ ನೀಡುವುದು ಆವಶ್ಯಕವಾಗಿದೆ’, ಎಂದು ಭಾರತೀಯರಿಗೆ ರಾಜಕಾರಣಿಗಳಿಂದ ಅಪೇಕ್ಷಿತವಿದೆ !

ರಕ್ಷಣಾ ಸಚಿವ ರಾಜನಾಥ ಸಿಂಗ್

ಹೊಸ ದೆಹಲಿ – ಚೀನಾ ಎಲ್ಲಿಯವರೆಗೆ ತನ್ನ ಸೈನಿಕರ ಸಂಖ್ಯೆಯನ್ನು ಕಡಿಮೆ ಮಾಡುವುದಿಲ್ಲವೋ ಅಲ್ಲಿಯವರೆಗೆ ಭಾರತವೂ ತನ್ನ ಸೈನಿಕರ ಸಂಖ್ಯೆಯನ್ನು ಕಡಿಮೆ ಮಾಡಲಾರದು, ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಇವರು ಒಂದು ವಾರ್ತಾವಾಹಿನಿಗೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟಪಡಿಸಿದರು. ‘ಚೀನಾ ನಂಬಿಕೆಡ್ರೋಹ ಮಾಡಿದೆಯೇ ?’ ಎಂಬ ಪ್ರಶ್ನೆಗೆ ರಾಜನಾಥ ಸಿಂಗ್ ಇವರು, “ಇದರಲ್ಲಿ ಯಾವುದೇ ಸಂದೇಹವಿಲ್ಲ. ಭಾರತ-ಚೀನಾ ಇವುಗಳಲ್ಲಿನ ವಾದದ ಕುರಿತು ಚರ್ಚೆಗಳಿಂದ ಪರಿಹಾರ ಕಂಡು ಹಿಡಿಯಬಹುದು”, ಎಂದು ಹೇಳಿದರು. ರಾಜನಾಥ ಸಿಂಗ್ ಇವರು, ‘ಭಾರತವು ತನ್ನ ಗಡಿ ಕ್ಷೇತ್ರದಲ್ಲಿ ವೇಗವಾಗಿ ಮೂಲಸೌಕರ್ಯಗಳ ವಿಕಾಸ ಮಾಡುತ್ತಿದೆ ಮತ್ತು ಚೀನಾ ಕೆಲವು ಯೋಜನೆಗಳ ಬಗ್ಗೆ ಆಕ್ಷೇಪವನ್ನು ಎತ್ತಿದೆ’, ಎಂದು ಹೇಳಿದರು.