|
ತಿರುಪತ್ತೂರು (ತಮಿಳುನಾಡು) – ನಟರಂಪಳ್ಳಿ ತಾಲ್ಲೂಕಿನ ಎಲಾಪಲ್ಲಿ ಗ್ರಾಮದಲ್ಲಿ ೨೫೦ ವರ್ಷಗಳಷ್ಟು ಪ್ರಾಚೀನ ಹಿಂದೂ ಅಮ್ಮನ್ ದೇವಸ್ಥಾನದ ಎಲ್ಲಾ ಗೋಡೆಗಳು ಮತ್ತು ನೆಲಹಾಸುಗಳಲ್ಲಿ ಕ್ರಿಶ್ಚಿಯನ್ ಶಿಲುಬೆಯನ್ನು ಚಿತ್ರಿಸಿ ಅದನ್ನು ಚರ್ಚ್ ಆಗಿ ಪರಿವರ್ತಿಸುವ ಪ್ರಯತ್ನ ನಡೆದಿರುವುದು ಗಮನಕ್ಕೆ ಬಂದಿದೆ. ಈ ಪ್ರಕರಣದ ಬಗ್ಗೆ ಪೊಲೀಸರಲ್ಲಿ ದೂರನ್ನು ದಾಖಲಿಸಲಾಗಿದೆ.
ಮಹೇಂದ್ರನ್ ಮತ್ತು ಬೇಬಿ ಎಂಬವರ ಮಗ ಭಾಸ್ಕರನು ಈ ಹಿಂದೆಯೂ ದೇವಾಲಯದಲ್ಲಿ ವಿಗ್ರಹಗಳು ಮತ್ತು ದಾನ ಪೆಟ್ಟಿಗೆಗಳನ್ನು ಒಡೆದಿದ್ದನು, ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿತ್ತು. (ದೂರು ದಾಖಲಿಸಿದ ನಂತರ ಪೊಲೀಸರು ಯಾವ ಕ್ರಮ ಕೈಗೊಂಡಿದ್ದಾರೆ ? ಅದೇ ಸಮಯದಲ್ಲಿ ಕ್ರಮ ಕೈಗೊಂಡಿದ್ದಿದ್ದರೆ, ಮತಾಂಧರು ಭವಿಷ್ಯದಲ್ಲಿ ಹಿಂದೂವಿರೋಧಿ ಕೃತ್ಯಗಳನ್ನು ಮಾಡುವ ಧೈರ್ಯವನ್ನು ತೋರುತ್ತಿರಲಿಲ್ಲ! – ಸಂಪಾದಕರು) ಈ ಬಗ್ಗೆ ಗ್ರಾಮಸ್ಥರು ಭಾಸ್ಕರ ಅವರನ್ನು ಕೇಳಿದಾಗ ಅವರು ಅವಾಚ್ಯವಾಗಿ ಬೈದಿದ್ದಲ್ಲದೇ, ‘ನನ್ನೊಂದಿಗೆ ಹಳ್ಳಿಯ ಕೆಲವರು ಇದ್ದಾರೆ ಮತ್ತು ನಾವು ಇದನ್ನು ಒಟ್ಟಿಗೆ ಸೇರಿಮಾಡಿದ್ದೇವೆ. ಆದ್ದರಿಂದ ಯಾರೂ ನನಗೆ ಯಾವುದೇ ಹಾನಿ ಮಾಡಲು ಸಾಧ್ಯವಿಲ್ಲ.’, ಎಂದು ಬೆದರಿಕೆಯನ್ನೂ ಒಡ್ಡಿದ್ದಾರೆ. (ಮತಾಂಧರ ದುರಹಂಕಾರ! ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಂಡರೆ ಮಾತ್ರ ಅವರು ಸರಿದಾರಿಗೆ ಬರುವರು ! – ಸಂಪಾದಕರು)

Telegram App Ban : ‘ಟೆಲಿಗ್ರಾಂ’ ಆ್ಯಪ್ ಮೇಲಿನ ತಾತ್ಕಾಲಿಕ ನಿಷೇಧ ಮುಂದುವರಿಕೆ! – ದೆಹಲಿ ಹೈಕೋರ್ಟ್
ದೇವಸ್ಥಾನ ಇನಾಮು ಭೂಮಿಗಳ ಕುರಿತಾದ ಕರಡು ಸಿದ್ಧಪಡಿಸುವ ಸಮಿತಿಯಲ್ಲಿ ದೇವಸ್ಥಾನಗಳ ಪ್ರತಿನಿಧಿಗಳ ಸೇರ್ಪಡೆ!
ರಾಜಕೀಯ ಪಕ್ಷಾಂತರದ ಘಟನೆಗಳಲ್ಲಿ ಮಧ್ಯಪ್ರವೇಶಿಸಲು ಕೋರಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯ ವಜಾಗೊಳಿಸಿದೆ.
ಚಲನಚಿತ್ರ ನಿರ್ಮಾಪಕ ಇಮ್ತಿಯಾಜ್ ಅಲಿ ಅವರಿಗೆ ‘ರಾಧಾ-ಕೃಷ್ಣ’ ಕುರಿತು ಸಿನಿಮಾ ಮಾಡುವ ಆಸೆ!
ಶ್ರೀರಾಮ ಮಂದಿರದ ದಾನವನ್ನು ಕಳ್ಳತನ ಮಾಡುವವರ 7 ತಲೆಮಾರುಗಳಿಗೆ ಶಾಪ ತಟ್ಟಲಿದೆ! : Ram Mandir Donation Theft
ರಾಂಚಿ (ಜಾರ್ಖಂಡ್) ನಲ್ಲಿರುವ ರಾ.ಸ್ವ. ಸಂಘದ ಕಚೇರಿಯ ಮೇಲಿನ ದಾಳಿಯ ಹಿಂದೆ ಐ.ಎಸ್.ಐ. (ISI) ಕೈವಾಡದ ಶಂಕೆ! : RSS Office Attack