ಸಮಾಜದ ಸಾತ್ತ್ವಿಕತೆಯನ್ನು ಹೆಚ್ಚಿಸುವ ಕಲಾಕೃತಿಗಳ ಸೇವೆ ಮಾಡುವ ಸುವರ್ಣಾವಕಾಶ !

ಕುಶಲತೆ, ಸ್ಪಂದನಶಾಸ್ತ್ರದ ಅಧ್ಯಯನ, ಸೇವಾಭಾವ ಮತ್ತು ಗುರುಕೃಪೆ ಇವುಗಳ ಸಂಗಮವಿರುವ ಕಲಾಯೋಗದ ಮೂಲಕ ಸಮಾಜದ ಸಾತ್ತ್ವಿಕತೆಯನ್ನು ಹೆಚ್ಚಿಸಲು ಸಾತ್ತ್ವಿಕ ಕಲಾಕೃತಿಗಳ ಸೇವೆ ಮಾಡಿ ಆಧ್ಯಾತ್ಮಿಕ ಪ್ರಗತಿಯನ್ನು ಮಾಡಿಕೊಳ್ಳುವ ಅಮೂಲ್ಯ ಅವಕಾಶವು ಗುರುಕೃಪೆಯಿಂದ ಲಭಿಸುತ್ತಿದೆ. ಸಂಸ್ಥೆಯ ಉಪಕ್ರಮಗಳಿಗಾಗಿ ಅಗತ್ಯವಿರುವಂತಹ ಹಲವಾರು ಕಲಾಕೃತಿಗಳನ್ನು (ಉದಾ. ಗ್ರಂಥಗಳ ಮುಖಚಿತ್ರಗಳು, ಪಂಚಾಂಗ, ಫಲಕ, ಕರಪತ್ರಗಳು, ‘ಸಿಡಿ ಕವರ್ ಛಾಯಾಚಿತ್ರಗಳ ಸಂಚುಗಳನ್ನು ಸಿದ್ಧಪಡಿಸುವುದು, ಸೂಕ್ಷ್ಮ-ಚಿತ್ರಗಳು, ಬೋಧಚಿತ್ರಗಳು, ಜಾಹೀರಾತುಗಳು ಇತ್ಯಾದಿ) ಸಿದ್ಧಪಡಿಸುವ ಸೇವೆಗಳನ್ನು ಸನಾತನ ಸಂಸ್ಥೆಯ ರಾಮನಾಥಿ ಆಶ್ರಮದಲ್ಲಿ ಮಾಡಲಾಗುತ್ತದೆ. ಈ ಕಲಾಕೃತಿಗಳನ್ನು ಸಿದ್ಧಪಡಿಸಲು ‘ಕೋರಲ್ ಡ್ರಾ’ ಮತ್ತು ‘ಫೋಟೊಶಾಪ್’ ಈ ಗಣಕೀಯ ತಂತ್ರಾಂಶಗಳ ಜ್ಞಾನ ಮತ್ತು ರಾಮನಾಥಿ ಆಶ್ರಮದಲ್ಲಿ ಪೂರ್ಣ ಸಮಯ ಇದ್ದು ಸೇವೆ ಮಾಡಲು ಬಯಸುವ ಸಾಧಕರು ಜಿಲ್ಲಾಸೇವಕರ ಮೂಲಕ ಸಂಪರ್ಕಿಸಬೇಕು. ಯಾರಿಗೆ ಈ ತಂತ್ರಾಶವನ್ನು ಕಲಿತುಕೊಂಡು ಸೇವೆ ಮಾಡಲು ಇಚ್ಛೆಯಿದೆ ಮತ್ತು ಮನೆಯಲ್ಲಿದ್ದು ವ್ಯವಸಾಯವೆಂದು ಜಾಹೀರಾತುಗಳನ್ನು ಮಾಡುವಂತಹ ಸಾಧಕರು ಸಹ ಸಂಪರ್ಕ ಮಾಡಬಹುದು. ಕೊರೋನಾದ ಸಂಕ್ರಮಣ ಕಡಿಮೆಯಾದ ನಂತರ ಇಚ್ಛೆಪಡುವ ಸಾಧಕರಿಗೆ ಆಶ್ರಮಕ್ಕೆ ಕರೆಸಿಕೊಳ್ಳುವ ಆಯೋಜನೆ ಮಾಡಲಾಗುವುದು.

ಮೇಲಿನ ಸೇವೆಯನ್ನು ಮಾಡಲು ಇಚ್ಛಿಸುವ ಸಾಧಕರು ಸ್ವತಃ ಸಿದ್ಧಪಡಿಸಿದ ಯಾವುದಾದರೊಂದು ವಿಷಯದ ಕಲಾಕೃತಿಯನ್ನು (ಆರ್ಟ್‌ವರ್ಕ್) ವಿ-ಅಂಚೆಯ ಮೂಲಕ ಕಳುಹಿಸಿಕೊಡಬೇಕು. ಆಶ್ರಮದಲ್ಲಿದ್ದು ಪಂಚಾಂಗವನ್ನು ನಿರ್ಮಿಸಲು ಪಂಚಾಂಗದ ಅಧ್ಯಯನ ಮಾಡಿರುವ ಸಾಧಕರ ಹಾಗೆಯೇ ಮರಾಠಿ ಭಾಷೆಯ ಉತ್ತಮ ಜ್ಞಾನ ಮತ್ತು ಸಂಕಲನ ಮಾಡಿ ಅನುಭವುಳ್ಳ ಸಾಧಕರ ಅವಶ್ಯಕತೆಯೂ ಇದೆ. ಸನಾತನದ ಉತ್ಪಾದನೆಗಳು ಮತ್ತು ಪ್ರಸಾರಸಾಹಿತ್ಯ ಇವುಗಳ ಮಹತ್ವವನ್ನು ಗಮನದಲ್ಲಿಟ್ಟು ಜಿಲ್ಲಾಸೇವಕರು ಸಹ ತಮ್ಮ ಜಿಲ್ಲೆಯ ವಿಶೇಷವಾಗಿ ಯುವಕ ಸಾಧಕ-ಸಾಧಕಿಯರ ಪೈಕಿ ಮೇಲಿನ ಸೇವೆಯನ್ನು ಯಾರು ಮಾಡಬಹುದು, ಎಂಬುದರ ವಿಚಾರ ಮಾಡಿ ಆ ಸಾಧಕ-ಸಾಧಕಿಯರ ಅನುಮತಿಯಿಂದ ಅವರ ಹೆಸರುಗಳನ್ನು ಕಳುಹಿಸಬೇಕು.

ಹೆಸರು ಮತ್ತು ಸಂಪರ್ಕ ಸಂಖ್ಯೆ

ಸೌ. ಭಾಗ್ಯಶ್ರೀ ಸಾವಂತ : 7058885610

ವಿ-ಅಂಚೆ ವಿಳಾಸ : [email protected]