ತರಗತಿಯಲ್ಲಿ ಕುಳಿತುಕೊಳ್ಳುವ ಆಸನದ ಬಗ್ಗೆ ನಡೆದ ವಾಗ್ವಾದದಲ್ಲಿ ಸ್ನೇಹಿತನನ್ನು ಗುಂಡಿಕ್ಕಿ ಕೊಂದ ೧೦ ನೇ ತರಗತಿಯ ವಿದ್ಯಾರ್ಥಿ

ಇದು ಬಾಲ್ಯದಿಂದಲೇ ವಿದ್ಯಾರ್ಥಿಗಳಿಗೆ ಸಾಧನೆಯನ್ನು ಕಲಿಸದ ಪರಿಣಾಮವಾಗಿದೆ ! ಸ್ವಾತಂತ್ರ್ಯದಿಂದ ಇಲ್ಲಿಯವರೆಗೆ ಆಡಳಿತಗಾರರು ಇದಕ್ಕೆ ಹೊಣೆಗಾರರು ! ಹಿಂದೂ ರಾಷ್ಟ್ರದಲ್ಲಿ ವಿದ್ಯಾರ್ಥಿಗಳಿಗೆ ಸಾಧನೆಯನ್ನು ಕಲಿಸುವ ಮೂಲಕ ಧರ್ಮಾಚರಣೆಯನ್ನು ಮಾಡಲು ಹೇಳಲಾಗುವುದು !

ಪ್ರಾತಿನಿಧಿಕ ಚಿತ್ರ

ಬುಂದೇಲಶಹರ್ (ಉತ್ತರ ಪ್ರದೇಶ) – ಸ್ಥಳೀಯ ಶಿಕರಪುರದ ಸರಸ್ವತಿ ಇಂಟರ್ ಮಹಾವಿದ್ಯಾಲಯದ ೧೦ ನೇ ತರಗತಿಯ ವಿದ್ಯಾರ್ಥಿಯೊಬ್ಬ, ತರಗತಿಯಲ್ಲಿ ಕುಳಿತುಕೊಳ್ಳುವ ವ್ಯವಸ್ಥೆಯಲ್ಲಿ ನಿರ್ಮಾಣವಾದ ವಿವಾದದಿಂದ ತನ್ನ ಸಹಪಾಠಿಯನ್ನು ಗುಂಡಿಕ್ಕಿ ಕೊಂದಿದ್ದಾನೆ. ಹಿಂದಿನ ದಿನ ನಡೆದ ವಾಗ್ವಾದದಿಂದಾಗಿ, ವಿದ್ಯಾರ್ಥಿ ಮರುದಿನ ತರಗತಿಗೆ ಚೀಲದಲ್ಲಿ ಪಿಸ್ತೂಲ್ ತಂದು ತನ್ನ ಸಹಪಾಠಿಯನ್ನು ಗುಂಡಿಕ್ಕಿ ಕೊಂದನು. ಆತನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ. ವಿದ್ಯಾರ್ಥಿಯು ತಂದ ಪಿಸ್ತೂಲ್ ತನ್ನ ಸೈನ್ಯದಲ್ಲಿದ್ದ ಚಿಕ್ಕಪ್ಪನಿಗೆ ಸೇರಿತ್ತು. ಅವನ ಚಿಕ್ಕಪ್ಪ ರಜೆಯ ನಿಮಿತ್ತ ಮನೆಗೆ ಬಂದಿದ್ದರು.