ಚೀನಾದ ಪ್ರಯಾಣಿಕರನ್ನು ಭಾರತಕ್ಕೆ ಕರೆತರಬಾರದು ! – ಭಾರತ ಸರಕಾರದಿಂದ ವಿಮಾನ ಸಂಸ್ಥೆಗಳಿಗೆ ಆದೇಶ

ಭಾರತೀಯ ಪ್ರಯಾಣಿಕರ ಬಗ್ಗೆ ಚೀನಾದ ನಿರ್ಧಾರಕ್ಕೆ ಭಾರತದ ತಕ್ಕ ಪ್ರತ್ಯುತ್ತರ !

ನವ ದೆಹಲಿ – ‘ಚೀನಾದ ಪ್ರಯಾಣಿಕರನ್ನು ಭಾರತಕ್ಕೆ ಕರೆತರಬಾರದು’ ಎಂದು ಭಾರತ ಸರಕಾರ ಎಲ್ಲಾ ವಿಮಾನಯಾನ ಸಂಸ್ಥೆಗಳಿಗೆ ಅನಧಿಕೃತ ಸೂಚನೆಗಳನ್ನು ನೀಡಿದೆ. ಭಾರತೀಯ ಪ್ರಯಾಣಿಕರ ಬಗ್ಗೆ ನವೆಂಬರ್‌ನಲ್ಲಿ ಚೀನಾ ಇದೇ ರೀತಿಯ ನಿರ್ಧಾರವನ್ನು ತೆಗೆದುಕೊಂಡಿದ್ದು, ಭಾರತವು ಅದಕ್ಕೆ ಪ್ರತ್ಯುತ್ತರ ನೀಡಿದೆ.(ಭಾರತವು ಯೋಗ್ಯವೇ ಮಾಡಿದೆ; ಆದರೆ ಅದರೊಂದಿಗೆ ಚೀನಾವು ನವೆಂಬರನಲ್ಲಿ ಇಂತಹ ನಿರ್ಧಾರವನ್ನು ಕೈಗೊಂಡಿದ್ದರೆ, ಭಾರತವೂ ಕೂಡ ಕೂಡಲೇ ಈ ರೀತಿಯ ನಿರ್ಧಾರವನ್ನು ಕೈಗೊಳ್ಳಬೇಕಿತ್ತು ಎಂದು ರಾಷ್ಟ್ರಪ್ರೇಮಿಗಳಿಗೆ ಅನಿಸುತ್ತದೆ ! – ಸಂಪಾದಕರು)
ಚೀನಾ ಒಳಪ್ರವೇಷಿಸಲು ಅನುಮತಿಯನ್ನು ನಿರಾಕರಿಸಿದ್ದರಿಂದ ಭಾರತೀಯ ಪ್ರಜೆಗಳು ಚೀನಾದ ವಿವಿಧ ಬಂದರುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಿಲುಕಿಕೊಂಡಿದ್ದಾರೆ. ಅಷ್ಟೇ ಅಲ್ಲ, ಚಾಲಕನನ್ನು ಬದಲಿಸಲು ಸಹ ನಿರಾಕರಿಸಲಾಗಿದೆ. ಇದರಿಂದ ಹಡಗುಗಳಲ್ಲಿ ಕೆಲಸ ಮಾಡುವ ಸುಮಾರು ೧೫೦೦ ಭಾರತೀಯರ ಮೇಲೆ ಪರಿಣಾಮ ಬೀರಿದೆ; ಕಾರಣ ಅವರಿಗೆ ಮನೆಗೆ ಮರಳಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಭಾರತ ಸರಕಾರ ಈ ನಿರ್ಧಾರ ಕೈಗೊಂಡಿದೆ. (ಭಾರತೀಯ ಪ್ರಯಾಣಿಕರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ಭಾರತ ಸರಕಾರ ಪ್ರಯತ್ನಗಳನ್ನು ಮಾಡಬೇಕು ! – ಸಂಪಾದಕ)