ಉಜ್ಜೈನಿಯ ಮಹಾಕಾಲೇಶ್ವರ ದೇವಾಲಯದ ಪರಿಸರದಲ್ಲಿ ಉತ್ಖನನದಲ್ಲಿ ಒಂದು ಸಾವಿರ ವರ್ಷಗಳ ಹಳೆಯ ದೇವಾಲಯ ಪತ್ತೆ !

ಇಸ್ಲಾಮಿಕ್ ಆಕ್ರಮಣದ ಸಮಯದಲ್ಲಿ ದೇವಾಲಯವನ್ನು ಧ್ವಂಸ ಮಾಡಿ ಅದನ್ನು ಮುಚ್ಚಿಹಾಕಿರುವ ಸಾಧ್ಯತೆ !

ಉಜ್ಜೈನಿ (ಮಧ್ಯಪ್ರದೇಶ) – ಇಲ್ಲಿಯ ೧೨ ಜ್ಯೋತಿರ್ಲಿಂಗಗಳಲ್ಲಿ ಒಂದಾದ ಮಹಾಕಾಲೇಶ್ವರ ದೇವಸ್ಥಾನವನ್ನು ವಿಸ್ತರಿಸುವ ಕೆಲಸ ನಡೆಯುತ್ತಿರುವಾಗ ಇಲ್ಲಿಯ ಉತ್ಖನನದ ಸಮಯದಲ್ಲಿ ೧೦೦೦ ವರ್ಷಗಳಷ್ಟು ಹಿಂದಿನ ಪುರಾತನ ದೇವಾಲಯವು ಪತ್ತೆಯಾಗಿದೆ. ಈ ದೇವಾಲಯದ ಗೋಡೆಗಳ ಮತ್ತು ಕಲ್ಲುಗಳ ಮೇಲೆ ಕೆತ್ತನೆಗಳಿವೆ. ಈ ಮಾಹಿತಿ ಸಿಕ್ಕಿದ ಕೂಡಲೇ ಪುರಾತತ್ವ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ.

ಪುರಾತತ್ವ ಇಲಾಖೆಯ ಅಧಿಕಾರಿ ರಮಣ ಸೋಲಂಕಿಯವರು, ‘ನಮಗೆ ಇದೇ ಮೊದಲ ಬಾರಿಗೆ ಅಂತಹ ಅವಶೇಷಗಳು ಸಿಕ್ಕಿವೆ ಮತ್ತು ಅಂತಹ ರಚನೆಯನ್ನು ನಾವು ಎಂದೂ ನೋಡಿಲ್ಲ. ನಾವು ಉತ್ಖನನವನ್ನು ಪೂರ್ಣಗೊಳಿಸಿದಾಗ ಮಾತ್ರ ಈ ದೇವಾಲಯದ ಪೂರ್ಣಆಕಾರವು ಗೊತ್ತಾಗಬಲ್ಲದು. ಮೊದಲ ನೋಟದಲ್ಲಿ, ಈ ಎಲ್ಲಾ ಅವಶೇಷಗಳು ಮೇಲ್ನೋಟಕ್ಕೆ ಇತ್ಲುತಮಿಶನ ಆಕ್ರಮಣದ ಸಮಯದ್ದಾಗಿದೆ ಎಂದು ಕಂಡುಬರುತ್ತದೆ. ದೇವಾಲಯವನ್ನು ನೆಲಸಮಗೊಳಿಸಿ ಅದನ್ನು ಮುಚ್ಚಿಹಾಕಲಾಗಿದೆ(ಹೂತು ಬಿಡಲಾಗಿದೆ) ಎಂಬುದು ಸ್ಪಷ್ಟವಾಗಿದೆ. ಈ ದೇವಾಲಯವು ಪರಮಾರ್ ಆಳ್ವಿಕೆಯ ಕಾಲದ್ದಾಗಿದ್ದು ಇದು ೧೦೦೦ ವರ್ಷಗಳಷ್ಟು ಹಳೆಯದ್ದಾಗಿದೆ; ಎಂದು ತಿಳಿಸಿದ್ದಾರೆ.