ಸಂಸ್ಕೃತವನ್ನು ರಾಷ್ಟ್ರೀಯ ಭಾಷೆ ಎಂದು ಘೋಷಿಸುವಂತೆ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ

ಇಂತಹ ಅರ್ಜಿಗಳನ್ನು ಏಕೆ ಸಲ್ಲಿಸಬೇಕಾಗುತ್ತದೆ ? ಕಾಂಗ್ರೆಸ್ ಸಂಸ್ಕೃತವನ್ನು ಮೃತವೆಂದು ನಿರ್ಧರಿಸಿದೆ, ಈ ಭಾಷೆಯನ್ನು ಈಗಿನ ಸರಕಾರವು ಪುನರುಜ್ಜೀವನಗೊಳಿಸಿ ಅದಕ್ಕೆ ತನ್ನ ಗತವೈಭವವನ್ನು ಮರಳಿ ದೊರಕಿಸಿಕೊಡಬೇಕೆಂದು ಸಂಸ್ಕೃತಪ್ರೇಮಿಗಳ ಅಪೇಕ್ಷೆಯಾಗಿದೆ !

ನವ ದೆಹಲಿ – ಸಂಸ್ಕೃತ ಭಾಷೆಯನ್ನು ರಾಷ್ಟ್ರೀಯ ಭಾಷೆ ಹಾಗೂ ಹಿಂದಿಯನ್ನು ಅದರ ಅಧಿಕೃತ ಭಾಷೆ ಎಂದು ಘೋಷಿಸುವಂತೆ ಆಗ್ರಹಿಸುವ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ದಾಖಲಿಸಲಾಗಿದೆ. ಗುಜರಾತನ ಮಾಜಿ ಹೆಚ್ಚುವರಿ ಕಾರ್ಯದರ್ಶಿ ಕೆ.ಜಿ. ವಂಜಾರಾ ಇವರು ಈ ಅರ್ಜಿಯನ್ನು ಸಲ್ಲಿಸಿದ್ದಾರೆ. ಸಧ್ಯ ಅವರು ಗುಜರಾತನ ಉಚ್ಚ ನ್ಯಾಯಾಲಯದ ವಕಾಲತ್ತನ್ನು ಮಾಡುತ್ತಿದ್ದಾರೆ. ಭಾರತದಲ್ಲಿ ಪ್ರಸ್ತುತ ೨೨ ಭಾಷೆಗಳಿವೆ; ಆದರೆ ಯಾವುದೇ ಭಾಷೆಗೆ ರಾಷ್ಟ್ರೀಯ ಸ್ಥಾನಮಾನವನ್ನು ನೀಡಿಲ್ಲ.

ಈ ಅರ್ಜಿಯಲ್ಲಿ, ಭಾರತವು ಇಸ್ರೈಲ್‌ನಿಂದ ಕಲಿಯಬೇಕಿದೆ. ಅದು ೧೯೪೮ ರಲ್ಲಿ ಹಿಬ್ರೂ(ಇಬ್ರಾನಿ) ಭಾಷೆಯನ್ನು ಆಂಗ್ಲ ಭಾಷೆಯ ಸಹಿತ ಅಧಿಕೃತ ರಾಷ್ಟ್ರೀಯ ಭಾಷೆಯನ್ನು ಘೋಷಿಸಿತು. ಹಿಬ್ರೂ ಭಾಷೆಯನ್ನು ಕಳೆದ ಜ್ಯೂಜನರ ೨ ಸಾವಿರ ವರ್ಷಗಳ ಹಳೆಯ ಮೃತ ಭಾಷೆಯೆಂದು ಪರಿಗಣಿಸಲಾಗಿತ್ತು. ಸಂಸ್ಕೃತವನ್ನು ರಾಷ್ಟ್ರೀಯ ಭಾಷೆಯೆಂದು ಘೋಷಿಸಿದರೆ ಅದಕ್ಕೆ ಯಾವುದೇ ಧರ್ಮ ಅಥವಾ ಜಾತಿಯಿಂದ ವಿರೋಧವಾಗುವುದಿಲ್ಲ. ಸಂಸ್ಕೃತದಿಂದ ಮಕ್ಕಳಲ್ಲಿ ಬೌದ್ಧಿಕ ವಿಕಾಸವಾಗುತ್ತದೆ ಎಂದು ಹೇಳಿದರು.