ಇಂತಹ ಅಪರಾಧದ ಪ್ರಕರಣದಲ್ಲಿ ಅಪರಾಧಿಗಳಿಗೆ ಕಠಿಣ ಶಿಕ್ಷೆ ಸಿಗುವುದಿಲ; ಹಾಗಾಗಿ ಇಂತಹ ಅಪರಾಧಗಳು ಕೊನೆಗೊಳ್ಳುತ್ತಿಲ್ಲ. ಸರಕಾರವು ಅಪರಾಧಿಗಳಿಗೆ ಶಿಕ್ಷೆ ವಿಧಿಸಲು ಪ್ರಯತ್ನಿಸಬೇಕು, ಇದರಿಂದ ಇತರರಲ್ಲಿಯೂ ಭಯ ಮೂಡುತ್ತದೆ !
ವೈಶಾಲೆ (ಬಿಹಾರ) – ಸಾಮಾಜಿಕ ಮಾಧ್ಯಮದಲ್ಲಿ ಪ್ರಸಿದ್ಧವಾಗಿರುವ ಕಿರಣ ಯಾದವ ಎಂಬ ಮಹಿಳೆಯನ್ನು ಹಿಂದೂ ದೇವತೆಗಳನ್ನು ಅವಮಾನಿಸಿದ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದಾರೆ. (ಮುಸಲ್ಮಾನ ಅಥವಾ ಕ್ರೈಸ್ತರು ಎಂದಿಗೂ ತಮ್ಮ ಧರ್ಮವನ್ನು ಅವಮಾನಿಸುವುದಿಲ್ಲ; ಆದರೆ ತಮ್ಮನ್ನು ಪ್ರಗತಿ(ಅಧೋಗತಿ)ಪರು ಹಾಗೂ ಜಾತ್ಯತವಾದಿಗಳೆಂದು ತಿಳಿದುಕೊಂಡಿರುವ ಹಾಗೂ ಅದನ್ನು ಜಗತ್ತಿಗೆ ತೋರಿಸಲು ಜನ್ಮ ಹಿಂದೂಗಳು ತಮ್ಮ ದೇವತೆಗಳನ್ನೇ ಅವಮಾನಿಸುತ್ತಾರೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ ! – ಸಂಪಾದಕ)
(ಸೌಜನ್ಯ : Bihar Tak)
ಡಿಸೆಂಬರ ೨ ರಂದು ಒಂದು ವಿಡಿಯೋ ಪ್ರಸಾರವಾಗಿತ್ತು. ಅದರಲ್ಲಿ ಹಿಂದೂ ದೇವತೆಗಳ ಬಗ್ಗೆ ಆಕ್ಷೇಪಾರ್ಹ ಶಬ್ದಗಳನ್ನು ಬಳಸಲಾಗಿತ್ತು. ಈ ವಿಡಿಯೋದಿಂದ ಕಿರಣ ಯಾದರ ವಿರುದ್ಧ ಅಪರಾಧವನ್ನು ದಾಖಲಿಸಲಾಗಿತ್ತು. ಅದರಂತೆ ಆಕೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.