ಕಾಶ್ಮೀರದಲ್ಲಿ ಭಯೋತ್ಪಾದಕರಿಗೆ ಸಹಾಯ ಮಾಡುವ ಕಾಂಗ್ರೆಸ್ ನಾಯಕನ ಬಂಧನ

ಇದು ಕಾಂಗ್ರೆಸ್ಸಿನ ನಿಜವಾದ ಮುಖ ! ಕಾಶ್ಮೀರದಲ್ಲಿ ಭಯೋತ್ಪಾದನೆ ಇನ್ನೂ ಮುಗಿಯದಿರಲು ಇದು ಒಂದು ಕಾರಣವಾಗಿದೆ, ಎಂದು ಹೇಳಿದರೆ ತಪ್ಪೆಂದು ಭಾವಿಸಬೇಡಿ ! ಕಾಶ್ಮೀರದ ರಾಜಕೀಯ ಪಕ್ಷಗಳು ಭಯೋತ್ಪಾದಕರಿಗೆ ಒಂದಲ್ಲ ಒಂದು ರೀತಿಯಲ್ಲಿ ಸಹಾಯ ಮಾಡುತ್ತಿರುವುದರಿಂದ, ಅಲ್ಲಿ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಲು ಅಂತಹ ಪಕ್ಷಗಳ ವಿರುದ್ಧ ಕ್ರಮ ಕೈಗೊಳ್ಳಬೇಕು !

ಶ್ರೀನಗರ – ಶೋಪಿಯಾ ಜಿಲ್ಲೆಯಲ್ಲಿ ಭಯೋತ್ಪಾದಕರಿಗೆ ಪರಾರಿಯಾಗಲು ಸಹಾಯ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ನ್ಯಾಯವಾದಿ ಗೌಹರ್ ಅಹಮದ ವಾನಿಯನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬಂಧಿಸಿದ್ದಾರೆ.

೧. ಡಿಸೆಂಬರ್ ೭ ರಂದು ಕೆಲವು ಭಯೋತ್ಪಾದಕರು ವಾಹನವೊಂದಲ್ಲಿ ಪ್ರಯಾಣಿಸುತ್ತಿದ್ದರು. ಆ ಸಮಯದಲ್ಲಿ ಭಾರತೀಯ ಸೇನೆಯು ಬಾಬಾ ಖದರ್ ರಾಮಪುರ ಚೌಕ್‌ನಲ್ಲಿ ಅವರ ವಾಹನವನ್ನು ನಿಲ್ಲಿಸಲು ಪ್ರಯತ್ನಿಸಿದಾಗ, ಭಯೋತ್ಪಾದಕರು ವಾಹನವನ್ನು ಬಿಟ್ಟು ಪರಾರಿಯಾಗಿದ್ದಾರೆ. ಆ ಸಮಯದಲ್ಲಿ ಗೌಹರ್ ವಾನಿ ಕೂಡ ವಾಹನದಲ್ಲಿದ್ದರು. ಅವನು ತನ್ನನ್ನು ಪೀಡಿತನೆಂದು ತೋರಿಸಲು ಪ್ರಯತ್ನಿಸಿದನು; ಆದರೆ ವಿಚಾರಣೆಗೊಳಪಡಿಸಿದಾಗ, ಭಯೋತ್ಪಾದಕರೊಂದಿಗೆ ಸೇರಿಕೊಂಡಿದ್ದಾನೆಂದು ತಿಳಿದುಬಂದಿದೆ. ನಂತರ ವಾನಿಯನ್ನು ಬಂಧಿಸಲಾಯಿತು.

೨. ಮೂಲಗಳ ಪ್ರಕಾರ, ವಾನಿ ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿರುವುದರ ಜೊತೆಗೆ ಅವರಿಗೆ ವಾಹನಗಳನ್ನು ಒದಗಿಸುತ್ತಿದ್ದ ಎಂದು ತಿಳಿದು ಬಂದಿದೆ. ಬಂಧಿಸಲ್ಪಟ್ಟ ದಿನ ಅವನು ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕರಿಗೆ ತಪ್ಪಿಸಿಕೊಳ್ಳಲು ಸಹಾಯ ಮಾಡುತ್ತಿದ್ದ ಎಂದು ಹೇಳಿದ್ದಾರೆ.