ಬೆಂಗಳೂರು – ಮದುವೆಯ ಆಮಿಷವೊಡ್ಡಿ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಮತ್ತು ಮತಾಂತರಗೊಳ್ಳುವಂತೆ ಒತ್ತಡ ಹೇರಿದ ೨೫ ವರ್ಷದ ಶಬಾಬ್‌ನನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ. ವಾಹನದಲ್ಲಿ ಇಂಧನ ತುಂಬಿಸಲು ಬರುತ್ತಿದ್ದ ಶಬಾಬ್ ಪೆಟ್ರೋಲ್ ಪಂಪ್‌ನಲ್ಲಿ ಕೆಲಸ ಮಾಡುತ್ತಿದ್ದ ಸಂತ್ರಸ್ತೆಯೊಂದಿಗೆ ಪರಿಚಯವಾಯಿತು. ನಂತರ ಅವನು ಅವಳ ಸಂಚಾರವಾಣಿ ಸಂಖ್ಯೆಯನ್ನು ತೆಗೆದುಕೊಂಡು ಅವಳಿಗೆ ವಾಟ್ಸಾಪ್ ಸಂದೇಶಗಳನ್ನು ಕಳುಹಿಸಲು ಪ್ರಾರಂಭಿಸಿದನು. ಕೆಲವು ದಿನಗಳ ನಂತರ, ಅವನು ಅವಳನ್ನು ಪ್ರೀತಿಸುತ್ತಿರುವುದಾಗಿ ಹೇಳಿದನು. ಮತ್ತೆ ಶಬಾಬ್ ಸಂತ್ರಸ್ತೆಯನ್ನು ಪ್ರೆಸಿಡೆಂಟ್ ಹೋಟೆಲ್‌ನಲ್ಲಿ ಊಟಕ್ಕೆ ಕರೆದೊಯ್ದನು, ಅಲ್ಲಿಂದ ಹೊರಡಲು ತಡರಾತ್ರಿಯಾಗಿದ್ದರಿಂದ ಅವರು ಹೋಟೆಲ್‌ನಲ್ಲಿ ಒಂದು ಕೊಠಡಿಯನ್ನು ಕಾಯ್ದಿರಿಸಿ ಅಲ್ಲಿಯೇ ಇದ್ದರು. ಅಲ್ಲಿ ಅವನು ಅವಳೊಂದಿಗೆ ಲೈಂಗಿಕ ಸಂಬಂಧವನ್ನು ಮಾಡಿದನು. ಇದರ ನಂತರ ಅವರ ಪ್ರೇಮ ಸಂಬಂಧ ಮುಂದುವರೆಯಿತು. ಯುವತಿ ಮದುವೆಯಾಗಲು ಅವನ ಮೇಲೆ ಒತ್ತಡ ಹೇರಿದಾಗ ಅವನು ಮತಾಂತರಗೊಳ್ಳಲು ಬಲವಂತ ಮಾಡಿದನು. ಅವಳು ಅದನ್ನು ನಿರಾಕರಿಸಿದಳು ಮತ್ತು ಪೊಲೀಸರಿಗೆ ದೂರು ನೀಡಿದಳು.