ಹಿಂದೂ ಹೆಸರು ಹೇಳಿ ಹಿಂದೂ ಹುಡುಗಿಯನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸುವ ಮುಸಲ್ಮಾನ ಯುವಕನ ಪ್ರಯತ್ನ ಬಯಲು

ಈ ಬಗ್ಗೆ ಜಾತ್ಯತೀತವಾದಿಗಳು ಮತ್ತು ಪ್ರಗತಿ(ಅಧೋಗತಿ)ಪರರು ಬಾಯಿ ತೆರೆಯುವುದಿಲ್ಲ; ಏಕೆಂದರೆ ಯುವಕ ಮುಸಲ್ಮಾನ ಹಾಗೂ ಯುವತಿ ಹಿಂದೂಯಾಗಿದ್ದರಿಂದ ಅದರಲ್ಲಿ ಯಾವುದೇ ತಪ್ಪು ಕಾಣಿಸುತ್ತಿಲ್ಲ ! ಏನಾದರೂ ವಿರುದ್ದವಾಗಿರುತ್ತಿದ್ದರೆ, ಅಗ ಅವರು ‘ಇದು ಮೋಸವಾಗಿದೆ, ಇದನ್ನು ಪ್ರೀತಿ ಎನ್ನಲಾಗದು’ ಎಂದು ಕೋಲಾಹಲವೆಬ್ಬುಸುತ್ತಿದ್ದರು !

ದಕ್ಷಿಣ ಕನ್ನಡ – ಇಲ್ಲಿಯ ಅಬ್ದುಲ್ ರಜ್ಜಾಕನು ಹಿಂದೂ ಯುವತಿಯೊಬ್ಬಳನ್ನು ತನ್ನ ಪ್ರೀತಿಯ ಬಲೆಯಲ್ಲಿ ಸಿಲುಕಿಸಲು ತನ್ನ ಮುಸಲ್ಮಾನ ಗುರುತನ್ನು ಮರೆಮಾಚಿ ‘ಸಂಜು’ ಎಂಬ ಹಿಂದೂ ಹೆಸರನ್ನು ಬಳಸಿ ಯುವತಿಯನ್ನು ಮೋಸ ಮಾಡಿರುವ ಪ್ರಕರಣದಲ್ಲಿ ಆತನ ಮೇಲೆ ದೂರು ದಾಖಲಿಸಲಾಗಿದೆ. ಆತ ದಕ್ಷಿಣ ಕನ್ನಡ ಜಿಲ್ಲೆಯ ಕಡಬಾ ತಾಲ್ಲೂಕಿನ ನಿವಾಸಿಯಾಗಿದ್ದಾನೆ.

ಅಬ್ದುಲ್ ಈತನು ಸಂಜು ಹೆಸರು ಇಟ್ಟುಕೊಂಡು ೨೪ ವರ್ಷದ ಹಿಂದೂ ಯುವತಿಯ ಜೊತೆ ಸ್ನೇಹ ಬೆಳೆಸಿದ್ದ. ಆತ ಕಟ್ಟರ ಹಿಂದೂ ಆಗಿದ್ದು ಅನಾಥನಾಗಿದ್ದೇನೆ ಎಂದು ಹೇಳಿಕೊಂಡಿದ್ದ. ನಂತರ ಅವರ ಸ್ನೇಹ ಬೆಳೆಯಿತು. ಈ ಯುವತಿಯನ್ನು ಹಿಂದೂ ತೀರ್ಥಕ್ಷೇತ್ರಕ್ಕೆ ಕರೆದೊಯ್ಯುವುದು ಸಿದ್ಧನಾದನು. ಅವರಿಬ್ಬರೂ ತೀರ್ಥಕ್ಷೇತ್ರಕ್ಕೆ ತೆರಳಿದರು. ಆಗ ಆತ ಹಣೆಯ ಮೇಲೆ ತಿಲಕವನ್ನು ಇಟ್ಟುಕೊಂಡು ದೇವಾಲಯಕ್ಕೂ ಹೋದ. ಆತ ತೀರ್ಥಕ್ಷೇತ್ರದಲ್ಲಿ ಹುಡುಗಿಯ ಕೆಲವು ಛಾಯಾಚಿತ್ರಗಳನ್ನು ತೆಗೆದಿದ್ದ. ಅದನ್ನು ಆತ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ್ದ. ಹುಡುಗಿಯ ಪೋಷಕರು ಅವನ ಬಗ್ಗೆ ಅನುಮಾನ ವ್ಯಕ್ತಪಡಿಸಿದಾಗ, ಅವನ ಮಾಹಿತಿಯನ್ನು ಸಂಗ್ರಹಿಸಲು ಪ್ರಾರಂಭಿಸಿದಾಗ ‘ಆತ ಮುಸಲ್ಮಾನ ಆಗಿದ್ದು ಆತ ತನ್ನ ಮಗಳಿಗೆ ಮೋಸ ಮಾಡುತ್ತಿದ್ದಾನೆ’ ಎಂಬುದು ಗಮನಕ್ಕೆ ಬಂದಿತು. ನಂತರ ಅವರು ಪೊಲೀಸರಿಗೆ ದೂರು ನೀಡಿದರು. ಅನಂತರ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.