ಸದರಘಾಟ (ಬಾಂಗ್ಲಾದೇಶ)ನಲ್ಲಿ ನಡೆದ ಘಟನೆ !
ಹಿಂದೂ ಯುವತಿಯನ್ನು ಮತಾಂಧರೇ ಅಪಹರಿಸಿರದಬಹುದು ಎಂಬ ಸಂದೇಹ ಪಡಲು ಹಿಂದೂಗಳಿಗೆ ಯಾವುದೇ ಕಾರಣ ಬೇಕಿಲ್ಲ. ಮುಸಲ್ಮಾನ ಬಹುಸಂಖ್ಯಾತ ಬಾಂಗ್ಲಾದೇಶದಲ್ಲಿ ಹಿಂದೂಗಳು ಏನೂ ಮಾಡದೇ ಇದ್ದರೂ, ಅವರು ‘ಹಿಂದೂ’ ಆಗಿದ್ದರಿಂದ ಅವರ ಮೇಲೆ ದಾಳಿ, ಮಹಿಳೆಯರ ಮೇಲೆ ಅತ್ಯಾಚಾರ, ದೇವಸ್ಥಾನಗಳನ್ನು ಧ್ವಂಸ ಮಾಡಲಾಗುತ್ತದೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !
ಸದರಘಾಟ(ಬಾಂಗ್ಲಾದೇಶ) : ಇಲ್ಲಿರುವ ಜಗನ್ನಾಥ ವಿಶ್ವವಿದ್ಯಾಲಯದಲ್ಲಿ ಕಲಿಯುತ್ತಿರುವ ತಥಿ ಸರಕಾರ ಎಂಬ ಹಿಂದೂ ಯುವತಿಯು ನವರಾತ್ರಿಯ ಕಾಲಾವಧಿಯಲ್ಲಿ ಶ್ರೀ ದುರ್ಗಾದೇವಿಯ ಪೂಜಾ ಮಂಟಪಕ್ಕೆ ದರ್ಶನಕ್ಕಾಗಿ ಹೋಗುತ್ತಿರುವಾಗ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾಳೆ. ಈ ಬಗ್ಗೆ ಪೊಲೀಸರಲ್ಲಿ ದೂರನ್ನು ದಾಖಲಿಸಲಾಗಿದೆ. ೬ ದಿನಗಳು ಕಳೆದರೂ ಇಲ್ಲಿಯವರೆಗೆ ಅವಳನ್ನು ಪತ್ತೆಹಚ್ಚಲು ಆಗಲಿಲ್ಲ.
ಕೆಲವು ದಿನಗಳ ಹಿಂದೆ ತಿಥಿಯನ್ನು ವಿಶ್ವವಿದ್ಯಾಲಯವು ಅಮಾನತ್ತುಪಡಿಸಿ ಕಾರಣನೀಡಿ ನೋಟಿಸನ್ನು ಜಾರಿ ಮಾಡಿತ್ತು. ಅವಳ ಫೇಸ್‌ಬುಕ್‌ನಲ್ಲಿ ಇಸ್ಲಾಂ ಹಾಗೂ ಪ್ರವಾದಿ ಮಹಮ್ಮದ ವಿರುದ್ಧ ಲೇಖನವನ್ನು ಬರೆದಿದ್ದಳು ಎಂದು ಅದರಲ್ಲಿ ಆರೋಪಿಸಲಾಗಿತ್ತು; ಆದರೆ ಸ್ಥಳೀಯ ಹಿಂದೂ ಸಂಘಟನೆಗಳು ಈ ಆರೋಪವನ್ನು ಅಲ್ಲಗಳೆದಿದ್ದರು. ಅದೇರೀತಿ ಅವಳು ಕೂಡಾ ತನ್ನ ಫೇಸ್‌ಬುಕ್ ಹ್ಯಾಕ್ ಆಗಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಳು.