ಪಾಕಿಸ್ತಾನದ ಅತ್ಯುನ್ನತ ಇಸ್ಲಾಮಿಕ್ ಸಂಸ್ಥೆಯು ಹಿಂದೂ ದೇವಾಲಯ ನಿರ್ಮಾಣಕ್ಕೆ ಅನುಮೋದನೆ ನೀಡಿದೆ !

ಅಂತರರಾಷ್ಟ್ರೀಯ ಮಟ್ಟದಲ್ಲಿ ‘ನಾವು ಹಿಂದೂಗಳಿಗಾಗಿ ಏನಾದರೂ ಮಾಡುತ್ತಿದ್ದೇವೆ’, ಎಂದು ತೋರಿಸಲು ಪಾಕಿಸ್ತಾನದಲ್ಲಿ ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ. ಪಾಕಿಸ್ತಾನಕ್ಕೆ ನಿಜವಾಗಿಯೂ ಹಿಂದೂಗಳ ಬಗ್ಗೆ ಕಳವಳ ಇದ್ದರೆ, ಅವರು ಹಿಂದೂಗಳ ಮೇಲಿನ ದೌರ್ಜನ್ಯವನ್ನು ನಿಲ್ಲಿಸಬೇಕು ! ದೇವಾಲಯವನ್ನು ನಿರ್ಮಿಸಲಾಗುವುದು; ಆದರೆ ಜಿಹಾದಿಗಳ ಭಯದಿಂದ ಎಷ್ಟು ಹಿಂದೂಗಳು ಅಲ್ಲಿಗೆ ದರ್ಶನಕ್ಕಾಗಿ ಹೋಗಬಹುದು ಎಂಬುವುದೇ ಪ್ರಶ್ನೆಯಾಗಿದೆ !

ಇಸ್ಲಾಮಾಬಾದ್ (ಪಾಕಿಸ್ತಾನ) – ಧಾರ್ಮಿಕ ವಿಷಯಗಳ ಬಗ್ಗೆ ಸರಕಾರಕ್ಕೆ ಸಲಹೆ ನೀಡುವ ಪಾಕಿಸ್ತಾನದ ರಾಜ್ಯಮಟ್ಟದ ಮೌಲ್ವಿ ಸಮಿತಿಯು ದೇಶದ ಅಲ್ಪಸಂಖ್ಯಾತ ಹಿಂದೂಗಳಿಗೆ ಹೊಸ ದೇವಾಲಯ ನಿರ್ಮಿಸಲು ಅನುಮೋದನೆ ನೀಡಿದೆ. ‘ಇಸ್ಲಾಮಿಕ್ ಕಾನೂನಿನ ಪ್ರಕಾರ ಅಲ್ಪಸಂಖ್ಯಾತರಿಗೆ ಪೂಜಾ ಸ್ಥಳಗಳನ್ನು ನಿರ್ಮಿಸಲು ಅವಕಾಶ ನೀಡಿದೆ’, ಎಂದು ಮೌಲ್ವಿ ಸಮಿತಿಯು ಹೇಳಿಕೆ ನೀಡಿದೆ; ಆದರೆ ‘ಇದಕ್ಕಾಗಿ ಸರಕಾರದ ಹಣವನ್ನು ಖರ್ಚು ಮಾಡಬಾರದು’, ಎಂದು ಸಮಿತಿ ಹೇಳಿದೆ.

೧. ಸಂಸತ್ ಸದಸ್ಯರಾಗಿರುವ ಪ್ರಮುಖ ಹಿಂದೂ ನಾಯಕ ಲಾಲ್ ಮಹ್ಲಿ ಈ ನಿರ್ಧಾರವನ್ನು ಶ್ಲಾಘಿಸಿದರು. ‘ಸರಕಾರವು ಖಾಸಗಿ ಪೂಜಾ ಸ್ಥಳಗಳ ನಿರ್ಮಾಣಕ್ಕಾಗಿ ಸಾರ್ವಜನಿಕ ಹಣವನ್ನು ಖರ್ಚು ಮಾಡದಂತೆ ಶಿಫಾರಸು ಮಾಡಿದೆ’, ಈ ಕಕಡೆಯೂ ಮಹ್ಲಿ ಗಮನ ಸೆಳೆದರು. ಈಗ ಇಸ್ಲಾಮಾಬಾದ್‌ನಲ್ಲಿ ಹಿಂದೂಗಳಿಗೆ ಯಾವುದೇ ದೇವಾಲಯ ಕಾರ್ಯನಿರತವಿಲ್ಲ. ಹತ್ತುಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜಧಾನಿಯಲ್ಲಿ ಸುಮಾರು ೩ ಸಾವಿರ ಹಿಂದೂಗಳು ನೆಲೆಸಿದ್ದಾರೆ, ಉಳಿದವರು ಹೆಚ್ಚಿನವರು ಮುಸಲ್ಮಾನರಾಗಿದ್ದಾರೆ.

೨. ‘ಇಸ್ಲಾಮಿಕ್ ಐಡಿಯಾಲಜಿ ಕೌನ್ಸಿಲ್’ ಪ್ರಸಾರ ಮಾಡಿದ ಮನವಿಯಲ್ಲಿ, ಪಾಕಿಸ್ತಾನದ ಹಿಂದೂಗಳು ತಮ್ಮ ಮೃತದೇಹಗಳ ಅಂತ್ಯಸಂಸ್ಕಾರ ಮಾಡಲು ಸಾಂವಿಧಾನಿಕ ಹಕ್ಕನ್ನು ಹೊಂದಿದ್ದಾರೆ ಎಂದೂ ಕೂಡ ಈ ಮನವಿಯಲ್ಲಿ ಹೇಳಿದೆ. ಈ ಹಕ್ಕಿನಿಂದಾಗಿ ಇಸ್ಲಾಮಾಬಾದ್‌ನ ಹಿಂದೂ ಸಮುದಾಯಕ್ಕೆ ಧಾರ್ಮಿಕ ಪದ್ಧತಿಗಳ ಪ್ರಕಾರ ಅಂತ್ಯಸಂಸ್ಕಾರಕ್ಕೆ ಸೂಕ್ತ ಸ್ಥಳ ನೀಡಬಹುದು.

೩. ಅಲ್ಪಸಂಖ್ಯಾತ ಗುಂಪುಗಳಿಗೆ (ಹಿಂದೂಗಳು) ಮದುವೆ ಮತ್ತು ಧಾರ್ಮಿಕ ಕಾರ್ಯಗಳನ್ನು ಆಯೋಜಿಸಲು ಸಾಮಾಜಿಕ ಕೇಂದ್ರಗಳನ್ನು ಸ್ಥಾಪಿಸಲು ಪರಿಷತ್ತು ಅನುಮತಿ ನೀಡಿತು. ಇದು ಅವರ ಸಾಂವಿಧಾನಿಕ ಹಕ್ಕು ಎಂದು ಪರಿಷತ್ತು ನಮೂದಿಸಿದೆ. ಪ್ರಧಾನಿ ಇಮ್ರಾನ್ ಖಾನ್ ಅವರು ಜೂನ್‌ನಲ್ಲಿ ರಾಜಧಾನಿ ಇಸ್ಲಾಮಾಬಾದ್‌ನಲ್ಲಿನ ಶ್ರೀಕೃಷ್ಣ ದೇವಾಲಯದ ನಿರ್ಮಾಣವನ್ನು ಹಠಾತ್ತನೆ ನಿಲ್ಲಿಸಿದ ನಂತರ ಇಸ್ಲಾಮಿಕ್ ಐಡಿಯಾಲಜಿ ಕೌನ್ಸಿಲ್ ಈ ನಿರ್ಧಾರ ಕೈಗೊಂಡಿದೆ.