‘ವಿಂಗ್ ಕಮಾಂಡರ್ ಅಭಿನಂದನ ವರ್ಥಮಾನ ಅವರನ್ನು ಬಿಡುಗಡೆ ಮಾಡದಿದ್ದರೆ ಭಾರತ ದಾಳಿ ಮಾಡಬಹುದೆಂಬ’ ಭಯದಿಂದ ನಡುಕ ಹಾಗೂ ಬೆವರಿಳಿಯುತ್ತಿತ್ತು

ಪಾಕಿಸ್ತಾನದ ಮಾಜಿ ಸಭಾಪತಿ ಅಯೋಜ್ ಸಾದಿಕ್‌ರಿಂದ ಸಂಸತ್ತಿನಲ್ಲಿ ರಹಸ್ಯಬಯಲು

ಈಗಲಾದರೂ ಭಾರತವು ಪಾಕಿಸ್ತಾನದ ಮೇಲೆ ದಾಳಿ ನಡೆಸಿ ತಕ್ಕ ಪಾಠ ಕಲಿಸಲಿದೆಯೇ? ಮತ್ತು ಭಾರತದಲ್ಲಿ ಜಿಹಾದಿ ಭಯೋತ್ಪಾದನೆಯನ್ನು ಬೇರುಸಮೇತ ನಿರ್ಮೂಲನೆ ಮಾಡುವುದೇ ?

ಇಸ್ಲಾಮಾಬಾದ್ (ಪಾಕಿಸ್ತಾನ) – ಪಾಕಿಸ್ತಾನದ ಮಾಜಿ ಸಭಾಪತಿ ಮತ್ತು ಈಗಿನ ಸಂಸದ ಅಯಾಜ ಸಾದಿಕ ಅವರು ಪಾಕಿಸ್ತಾನ ಸಂಸತ್ತಿನಲ್ಲಿ ಭಾರತೀಯ ವಿಂಗ್ ಕಮಾಂಡರ್ ಅಭಿನಂದನ ವರ್ಥಮಾನ್ ಅವರನ್ನು ಬಿಡುಗಡೆ ಮಾಡಿದ ಘಟನೆಯ ವಿವರ ಬಹಿರಂಗಪಡಿಸಿದ್ದಾರೆ. ಅವರು ಮುಂದಿನ ವಿಷಯವನ್ನು ಹೇಳಿದ್ದಾರೆ, “ಈ ಘಟನೆಯ ನಂತರ ನಡೆದ ಸಭೆಯಲ್ಲಿ ಪಾಕಿಸ್ತಾನದ ವಿದೇಶಾಂಗ ಸಚಿವ ಶಾಹ ಮಹಮೂದ್ ಖುರೇಷಿ ಮತ್ತು ಸೇನಾ ಮುಖ್ಯಸ್ಥ ಬಾಜ್ವಾ ಅವರು ನಡುಗುತ್ತಿದ್ದರು. ಅವನ ಹಣೆಯಿಂದ ಬೇವರಿಳಿಯುತ್ತಿತ್ತು. ವಿಂಗ್ ಕಮಾಂಡರ್ ಅಭಿನಂದನ್ ಅವರ ಬಗ್ಗೆ ಮಾತನಾಡುವಾಗ ‘ದೇವರ ಹೆಸರಿನಲ್ಲಿ ಅವರನ್ನು ಬಿಡುಗಡೆ ಮಾಡುವಂತೆ ವಿನಂತಿಸಿದರು ಹಾಗೂ ಒಂದುವೇಳೆ ‘ಪಾಕಿಸ್ತಾನ ಅಭಿನಂದನನ್ನು ಬಿಡುಗಡೆ ಮಾಡದಿದ್ದರೆ, ಭಾರತವು ರಾತ್ರಿ ೯ ಗಂಟೆಗೆ ಪಾಕಿಸ್ತಾನದ ಮೇಲೆ ದಾಳಿ ಮಾಡುವುದು’ ಎಂದು ಹೇಳಿದರು.

ಪಾಕಿಸ್ತಾನದ ಮಾಜಿ ಸಭಾಪತಿ ಮತ್ತು ಈಗಿನ ಸಂಸದ ಅಯಾಜ ಸಾದಿಕ

ಭಾಜಪದ ವಕ್ತಾರರಾದ ಡಾ. ಸಂಬಿತ್ ಪಾತ್ರಾ ಇವರು ರಾಹುಲ ಗಾಂಧಿಯವರನ್ನು ಟೀಕಿಸಿದ್ದಾರೆ, ರಾಹುಲ್ ಜಿ, ನೀವು ಸರ್ಜಿಕಲ್ ಸ್ಟ್ರೈಕ್ ಹಾಗೂ ಏರ್ ಸ್ಟ್ರೈಕ್‌ಗಳ ಮೇಲೆ ಪ್ರಶ್ನೆಯನ್ನು ಕೇಳಿದ್ದೀರಲ್ಲವೇ ? ಪಾಕಿಸ್ತಾನದಲ್ಲಿ ಮೋದಿಯ ಬಗೆಗಿನ ಭಯ ಹೇಗಿದೆ ಎಂಬುದು ನೋಡಿ ಎಂದು ಹೇಳುತ್ತಾ ಈ ಘಟನೆಯ ವಿಡಿಯೋವೊಂದನ್ನು ಟ್ವೀಟ್ ಮಾಡಿದ್ದಾರೆ.