ರಾಷ್ಟ್ರೀಯ ತನಿಖಾ ದಳವು ಭಯೋತ್ಪಾದಕರನ್ನು ವಿಚಾರಣೆಗೊಳಪಡಿಸಿದಾಗ ಸಿಕ್ಕಿದ ಮಾಹಿತಿ
ಹಿಂದೂಗಳೇ, ಹಿಂದುತ್ವನಿಷ್ಠ ನಾಯಕರನ್ನು ಮುಗಿಸುವ ಜಿಹಾದಿಗಳ ಸಂಚನ್ನು ತಿಳಿದುಕೊಳ್ಳಿ ಹಾಗೂ ಕೂಡಲೇ ಜಾಗೃತರಾಗಿ !
ನವ ದೆಹಲಿ – ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಭಯೋತ್ಪಾದಕರ ವಿರುದ್ಧ ಸ್ಥಳೀಯ ನ್ಯಾಯಾಲಯದಲ್ಲಿ ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ, ‘ಕೊರೋನಾ ಜಿಹಾದ್’ನ ಹೆಸರಿನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಾಯಕರನ್ನು ಗುರಿಯಾಗಿಸುವುದು ಹಾಗೂ ಅವರಿಗೆ ಅರಿವಳಿಕೆ ಚುಚ್ಚುಮದ್ದು ನೀಡಿ ಹತ್ಯೆ ಮಾಡುವ ಇಸ್ಲಾಮಿಕ್ ಸ್ಟೇಟ್‌ನ(ಐ.ಸ್.ನ) ಸಂಚಾಗಿತ್ತು. ‘ಇಸ್ಲಾಮಿಕ್ ಸ್ಟೇಟ್ ಖೋರಾಸಾನ್ ಪ್ರಾಂತ್ಯ’ದ ಬಂಧಿಸಲ್ಪಟ್ಟ ಐದು ಭಯೋತ್ಪಾದಕರ ವಿಚಾರಣೆಯಿಂದ ಈ ಮಾಹಿತಿ ಬಂದಿದೆ. ಈ ಭಯೋತ್ಪಾದಕರು ಪೌರತ್ವ ಸುಧಾರಣಾ ಕಾಯ್ದೆ (ಸಿಎಎ ಯ) ಅಡಿಯಲ್ಲಿ ಮುಸಲ್ಮಾನರನ್ನು ಸರಕಾರದ ವಿರುದ್ಧ ಪ್ರಚೋದಿಸಲು ಸಂಚು ರೂಪಿಸುತ್ತಿದ್ದರು.
Corona Jihad, attack on RSS members, anaesthesia injection to target leaders in discussions of IS members: NIA#Corona #RSS #NIA https://t.co/DhIAiS0SYz
— Catch News (@CatchNews) October 27, 2020
ಕಾಶ್ಮೀರಿ ದಂಪತಿಗಳಾದ ಜಹಾಂಗೀಬ್ ಸಾಮಿ ಹಾಗೂ ಹಿನಾ ಬಶೀರ್ ಬೇಗ್, ಭಾಗ್ಯನಗರದ ಅಬ್ದುಲ್ಲಾ ಬಾಸಿತ್, ಸಾದಿಯಾ ಅನ್ವರ್ ಶೇಖ್ ಹಾಗೂ ಪುಣೆಯ ನಬಿಲ್ ಸಿದ್ದೀಕ್ ಖತ್ರಿ ವಿರುದ್ಧ ಚಾರ್ಜ್‌ಶೀಟ್ ದಾಖಲಿಸಲಾಗಿದೆ. ಈ ಭಯೋತ್ಪಾದಕರು ಶಸ್ತ್ರಾಸ್ತ್ರಗಳನ್ನು ಖರೀದಿಸಲು ಹಣವನ್ನು ಸಂಗ್ರಹಿಸುತ್ತಿದ್ದರು. ಕಾಶ್ಮೀರದಲ್ಲಿ ನೆಲೆಯನ್ನು ಸ್ಥಾಪಿಸುವ ಮೂಲಕ ಇಸ್ಲಾಮಿಕ್ ಸ್ಟೇಟ್ ದೇಶದಲ್ಲಿ ರಕ್ತಪಾತವನ್ನುಂಟು ಮಾಡಲು ತಯಾರಿ ನಡೆಸಿತ್ತು. ಅದಕ್ಕಾಗಿ ಕ್ರಮ ಕೈಗೊಳ್ಳುವಂತೆ ಅವರು ಈ ೫ ಜನರನ್ನು ಕೇಳಿದ್ದರು.
ಚಾರ್ಜ್‌ಶೀಟ್‌ನ ಪ್ರಕಾರ ಭಯೋತ್ಪಾದಕರು ನಡೆಸಿದ ಪಿತೂರಿಗಳು
೧. ಜನದಟ್ಟಣೆ ಇರುವ ಸ್ಥಳಗಳಲ್ಲಿ ಬಾಂಬ್ ಸ್ಫೋಟ ನಡೆಸುವುದು
೨. ಮುಸಲ್ಮಾನರನ್ನು ರಾ.ಸ್ವ.ಸಂಘದ ವಿರುದ್ಧ ಪ್ರಚೋದಿಸುವುದು
೩. ದೇಶದಾದ್ಯಂತ ಸಣ್ಣ ಸಣ್ಣ ಕಟ್ಟರ ಗುಂಪುಗಳನ್ನು ಒಟ್ಟುಗೂಡಿಸುವುದು
೪. ದೇಶದಲ್ಲಿ ಗಲಭೆಗಳನ್ನು ಪ್ರಚೋದಿಸಲು ಸಂಘದ ಮುಖಂಡರ ಮೇಲೆ ದಾಳಿ ಮಾಡುವುದು
೫. ಸಿಎಎ ವಿರೋಧಿ ಚಳವಳಿಯಡಿಯಲ್ಲಿ ಮುಸಲ್ಮಾನರನ್ನು ಇತರ ಧರ್ಮಗಳ ವಿರುದ್ಧ ಪ್ರಚೋದಿಸುವುದು
೬. ಸಾಮಾಜಿಕ ಮಾಧ್ಯಮಗಳಿಂದ ಇದಕ್ಕಾಗಿ ಪ್ರಚಾರ ಹಮ್ಮಿಕೊಳ್ಳುವುದು
ಶ್ರೀ ಗಣೇಶಮೂರ್ತಿಯ ವಿಸರ್ಜನೆಯ ಸಮಯದಲ್ಲಿ ಟ್ರಕ್ ಸಹಾಯದಿಂದ ಹಿಂದೂಗಳನ್ನು ಕೊಲ್ಲುವ ಸಂಚು
ಜಹಾನಜೆಬ್ ಮತ್ತು ನಬಿಲ್ ಭಾರತದಲ್ಲಿ ಆತ್ಮಾಹುತಿ ದಾಳಿ ನಡೆಸಲು ಹಾಗೂ ಶ್ರೀ ಗಣೇಶಮೂರ್ತಿಯ ವಿಸರ್ಜನೆಯ ಟ್ರಕ್‌ನ ಸಹಾಯದಿಂದ ಭಕ್ತರನ್ನು ಕೊಲ್ಲಲು ಸಂಚು ರೂಪಿಸುತ್ತಿದ್ದರು.