|
ನವ ದೆಹಲಿ – ಇಲ್ಲಿಯ ಮಹೇಂದ್ರ ಪಾರ್ಕ್ ಪ್ರದೇಶದಲ್ಲಿ ವಾಸಿಸುವ ಅಬ್ದುಲ್ ಸತ್ತಾರ್ ತಮ್ಮ ಮನೆಯಲ್ಲಿ ದೊಡ್ಡ ಧ್ವನಿಯಲ್ಲಿ ಡಿಜೆ ಹಾಕಿದ್ದರು. ಇದರಂದ ನೆರೆಹೊರೆಯವರಿಗೆ ತೊಂದರೆಯಾಗುತ್ತಿತ್ತು. ನೆರೆಯ ಸುಶೀಲ್ ಈ ಬಗ್ಗೆ ಹೇಳಿದಾಗ, ಸತ್ತಾರ್ ಹಾಗೂ ಆತನ ನಾಲ್ಕು ಮಕ್ಕಳು ಸುಶೀಲ್ ಅವರ ಕುಟುಂಬದ ಮೇಲೆ ಶಸ್ತ್ರಾಸ್ತ್ರಗಳಿಂದ ಹಲ್ಲೆ ನಡೆಸಿದರು. ಇದರಲ್ಲಿ ಸುಶೀಲ್ ಮೃತಪಟ್ಟರು ಮತ್ತು ಇತರ ಇಬ್ಬರು ಗಾಯಗೊಂಡರು. ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಬ್ದುಲ್ ಸತ್ತಾರ್ ಮತ್ತು ಆತನ ನಾಲ್ಕು ಮಕ್ಕಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಅವರಲ್ಲಿ ಮೂವರನ್ನು ಬಂಧಿಸಲಾಗಿದೆ. ಸಧ್ಯ ಇಲ್ಲಿ ಧಾರ್ಮಿಕ ಉದ್ವಿಗ್ನತೆ ಉಂಟಾಗಬಹುದೆಂಬ ಭಯದಿಂದ ಪೊಲೀಸರು ಜಾಗ್ರತೆ ವಹಿಸುತ್ತಿದ್ದಾರೆ.