|
ನವ ದೆಹಲಿ – ಆಗಿನ ಮುಖ್ಯಮಂತ್ರಿ ನರೇಂದ್ರ ಮೋದಿ ವಿರುದ್ಧ ಯಾವುದೇ ಪುರಾವೆಗಳು ಸಿಗದ ಕಾರಣ ೨೦೦೨ ರ ಗುಜರಾತ ಗಲಭೆ ಪ್ರಕರಣದಲ್ಲಿ ಖುಲಾಸೆಗೊಳಿಸಿದಾಗ ಅವರ ವಿರೋಧಿಗಳಿಂದ ನನಗೆ ಕಿರುಕುಳ ನೀಡಲಾಯಿತು ಎಂದು ಮಾಜಿ ಸಿಬಿಐ ನಿರ್ದೇಶಕ ಆರ್.ಕೆ. ರಾಘವನ್ ಹೇಳಿದ್ದಾರೆ. ರಾಘವನ್ ಅವರು ಬರೆದ ಆತ್ಮಚರಿತ್ರೆ ’ಎ ರೋಡ್ ವೆಲ್ ಟ್ರಾವೆಲ್ಡ್’ ಪ್ರಕಾಶನಗೊಂಡಿದೆ. ಅದರಲ್ಲಿ ಅವರು ಈ ಮಾಹಿತಿಯನ್ನು ನೀಡಿದ್ದಾರೆ. ಈ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದಿಂದ ವಿಶೇಷ ವಿಚಾರಣಾ ತಂಡವನ್ನು ರಚಿಸಲಾಗಿತ್ತು. ಆ ಸಮಯದಲ್ಲಿ ರಾಘವನ್ ಸಿಬಿಐ ಮುಖ್ಯಪದವಿಯಲ್ಲಿದ್ದರು. ರಾಘನವ್ ಇವರು ಬೊಫೋರ್ಸ್ ಹಗರಣ, ೨೦೦೦ ರ ದಕ್ಷಿಣ ಆಫ್ರಿಕಾದ ಕ್ರಿಕೆಟ್ ಮ್ಯಾಚ್ ಫಿಕ್ಸಿಂಗ್ ಹಗರಣ, ಮೇವು ಹಗರಣ ಸೇರಿದಂತೆ ಹಲವಾರು ಪ್ರಮುಖ ಪ್ರಕರಣಗಳ ತನಿಖೆಯನ್ನು ನಡೆಸಿದ್ದಾರೆ.
ರಾಘವನ್ ಇವರು ಈ ಪುಸ್ತಕದಲ್ಲಿ ಮುಂದಿನ ವಿಷಯಗಳನ್ನು ತಿಳಿಸಿದ್ದಾರೆ
೧. ನನ್ನ ವಿರುದ್ಧ ನ್ಯಾಯಾಲಯಗಳಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಮೋದಿಯ ಪರ ವಹಿಸಿದ್ದೇನೆಂದು ನನ್ನ ಮೇಲೆ ಆರೋಪವಾಯಿತು. ನನ್ನ ದೂರವಾಣಿ ಸಂಭಾಷಣೆಗಳ ಮೇಲೆ ನಿಗಾ ವಹಿಸಲು ಕೇಂದ್ರ ತನಿಖಾ ದಳವನ್ನು ದುರುಪಯೋಗಿಸಲಾಯಿತು. ಅದರಲ್ಲಿ ಅವರಿಗೆ ಏನೂ ಸಿಗಲಿಲ್ಲ ಇದರಿಂದ ಅವರು ನಿರಾಶೆಗೊಂಡರು.
೨. ಈ ಗಲಭೆ ಪ್ರಕರಣದಲ್ಲಿ ಮೋದಿಯವರನ್ನು ಸತತ ೯ ಗಂಟೆಗಳ ಕಾಲ ವಿಚಾರಣೆ ನಡೆಸಲಾಯಿತು. ಈ ಅವಧಿಯಲ್ಲಿ ಮೋದಿ ಅವರಿಗೆ ಕೇಳಿದ ೧೦೦ ಪ್ರಶ್ನೆಗಳಲ್ಲಿ ಯಾವುದನ್ನೂ ತಪ್ಪಿಸಲಿಲ್ಲ. ಇಡೀ ವಿಚಾರಣೆಯ ಸಮಯದಲ್ಲಿ ಅವನು ತುಂಬಾ ಶಾಂತವಾಗಿದ್ದರು. ೯ ಗಂಟೆಗಳ ವಿಚಾರಣೆಯ ಸಮಯದಲ್ಲಿ ಅವರು ಚಹಾವನ್ನು ಸಹ ಸ್ವೀಕರಿಸಲಿಲ್ಲ. ಅವರು ಸ್ವತಃ ಗಾಂಧಿನಗರದ ವಿಶೇಷ ತನಿಖಾ ದಳದ ಕಚೇರಿಗೆ ಬರುವ ಸಿದ್ಧತೆಯನ್ನು ತೋರಿಸಿದ್ದರು. ಅಲ್ಲದೆ ಒಂದು ನೀರಿನ ಬಾಟಲಿಯನ್ನೂ ತಂದಿದ್ದರು. ಅವರಿಗೆ ಊಟಕ್ಕೆ ಸಮಯ ಬೇಕೇನು ಎಂದು ಕೇಳಿದಾಗ, ಅವರು ನಿರಾಕರಿಸಿದ್ದರು.
Modi didn’t accept even tea during questioning by riots SIT: R K Raghavan https://t.co/RaWzqDyV0Q via @TOIAhmedabad pic.twitter.com/j89KVcafCz
— The Times Of India (@timesofindia) October 27, 2020