‘ಸನಾತನ ಪ್ರಭಾತ ಈಗ ‘ಡೈಲಿ ಹಂಟ್ನಲ್ಲಿ ಲಭ್ಯ !

ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಕಾರ್ಯನಿರತವಾಗಿರುವ ‘ಸನಾತನ ಪ್ರಭಾತದ ನಿಯತ ಕಾಲಿಕೆಗಳು ಈಗ ಪ್ರಸಿದ್ಧ ಆಂಡ್ರಾಯ್ಡ್ ಅಪ್ಲಿಕೇಶನ್ ‘ಡೈಲಿ ಹಂಟ್ನಲ್ಲಿ ಲಭ್ಯವಿವೆ. ಇದರಿಂದ ‘ಸನಾತನ ಪ್ರಭಾತ ನಿಯತಕಾಲಿಕೆಗಳಲ್ಲಿನ ರಾಷ್ಟ್ರ- ಧರ್ಮದ ಜ್ವಲಂತ ವಿಚಾರಗಳು, ಹಾಗೆಯೇ ಹಿಂದೂ ರಾಷ್ಟ್ರದ ವಿಚಾರಗಳು ಭಾರತದಾದ್ಯಂತದ ಹಿಂದೂ ಜನಸಾಮಾನ್ಯರ ತನಕ ಹೆಚ್ಚು ಪ್ರಭಾವಿಯಾಗಿ ಹಾಗೂ ಪರಿಣಾಮಕಾರಿಯಾಗಿ ತಲುಪಲಿವೆ. ‘ಡೈಲಿ ಹಂಟ್ ಭಾರತದ ಅತ್ಯಂತ ಜನಪ್ರಿಯ ‘ನ್ಯೂಸ್ ಆಪ್ ಆಗಿದ್ದು ಇದು ೧೪ ಭಾಷೆಗಳಲ್ಲಿ ಲಭ್ಯವಿದೆ. ಭಾರತ ಸಹಿತ ಬಾಂಗ್ಲಾದೇಶ, ನೇಪಾಳ, ಶ್ರೀಲಂಕಾ ಹಾಗೂ ಆಫ್ರಿಕಾ ಖಂಡದಲ್ಲಿಯೂ ಬಳಸಲಾಗುತ್ತದೆ. ಈ ಆಪ್ನಲ್ಲಿ, ‘ಸನಾತನ ಪ್ರಭಾತವನ್ನು ಎಲ್ಲ ಭಾಷೆಗಳಲ್ಲಿ ಅಂದರೆ ಕನ್ನಡ, ಮರಾಠಿ, ಹಿಂದಿ ಹಾಗೂ ಆಂಗ್ಲ ನಿಯತಕಾಲಿಕೆಗಳ ಲೇಖನ/ಸುದ್ದಿ ಓದಬಹುದು. ‘ಡೈಲಿ ಹಂಟ್ನಲ್ಲಿ ‘ಸನಾತನ ಪ್ರಭಾತ ಓದಲು, ವಾಚಕರು ಈ ಆಪ್‌ಅನ್ನು ತಮ್ಮ ಸಂಚಾರವಾಣಿಯಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬೇಕು. ನೀವು ಆಪ್‌ನಲ್ಲಿ ಹೋದಾಗ ಆರಂಭದಲ್ಲೇ ‘Search’ ನ ಆಯ್ಕೆ ಇದೆ. ಅಲ್ಲಿ ತಮ್ಮ ಭಾಷೆಯಲ್ಲಿ ‘ಸನಾತನ ಪ್ರಭಾತ ಪದವನ್ನು ಹಾಕಿ ಹುಡುಕಿದರೆ, ನಿಮಗೆ ವಿವಿಧ ಆಯ್ಕೆಗಳು ಸಿಗುತ್ತದೆ. ಇದರಲ್ಲಿ ನೀವು ಸನಾತನ ಪ್ರಭಾತದ ಚಿಹ್ನೆಯ ಮೇಲೆ ಕ್ಲಿಕ್ ಮಾಡಿದರೆ ಆ ಭಾಷೆಯ ಸನಾತನ ಪ್ರಭಾತದ ಪುಟ ತೆರೆಯುತ್ತದೆ. ಅಲ್ಲಿ ‘ಫಾಲೋ ಬಟನ್ ಮೇಲೆ ‘ಕ್ಲಿಕ್ ಮಾಡಿ ‘ಫಾಲೋ ಮಾಡಬೇಕು. ಇದರಿಂದ, ಡೈಲಿ ಹಂಟ್‌ನಲ್ಲಿ ಸನಾತನ ಪ್ರಭಾತ ವೆಬ್‌ಸೈಟ್ ನಲ್ಲಿರುವ ಎಲ್ಲ ಸುದ್ದಿ, ಲೇಖನಗಳು ಇತ್ಯಾದಿ ಮಾಹಿತಿಯನ್ನು ನೀವು ಸುಲಭವಾಗಿ ಓದಬಹುದು.