ಪ್ರಯಾಗರಾಜ್ ನ್ಯಾಯವಾದಿ ಅಭಿಷೇಕ್ ಶುಕ್ಲಾ ಅವರ ಮೇಲಿನ ಗುಂಡುಹಾರಾಟ ಪ್ರಕರಣ
ಹೀಗೆ ಆಮೆ ಗತಿಯಲ್ಲಿ ನಡೆಯುತ್ತಿರುವ ಆಡಳಿತವು ಜನರನ್ನು ಹೇಗೆ ರಕ್ಷಿಸಬಹುದು ? ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಕೂಡ ಇದರ ಬಗ್ಗೆ ಗಮನ ಹರಿಸಬೇಕು !
ಸಂಭಾಜಿನಗರ – ಪ್ರಯಾಗರಾಜ್‌ನಲ್ಲಿರುವ ಹಿಂದೂ ವಿಧಿಜ್ಞ ಪರಿಷತ್ತಿನ ಸದಸ್ಯ ನ್ಯಾಯವಾದಿ ಅಭಿಷೇಕ್ ಶುಕ್ಲಾ ಅವರ ಮೇಲೆ ಆಗಸ್ಟ್ ೧೦ ರ ರಾತ್ರಿ ಅಪರಿಚಿತ ವ್ಯಕ್ತಿಗಳು ಗುಂಡು ಹಾರಿಸಿದ್ದರು. ಈ ಘಟನೆಯಲ್ಲಿ ಅವರು ಗಾಯಗೊಂಡಿದ್ದರು. ನ್ಯಾಯವಾದಿ ಶುಕ್ಲಾ ಇವರು ಅಲಹಾಬಾದ್ ಉಚ್ಚ ನ್ಯಾಯಾಲಯದ ವಕೀಲರ ಸಂಘದ ಕಾರ್ಯದರ್ಶಿಯಾಗಿದ್ದಾರೆ. ಈ ಬಗ್ಗೆ ಪರಿಷತ್ತಿನ ಸದಸ್ಯ ಪೂ. (ನ್ಯಾಯವಾದಿ) ಸುರೇಶ್ ಕುಲಕರ್ಣಿ ಅವರು ಉತ್ತರ ಪ್ರದೇಶದ ಮುಖ್ಯ ಕಾರ್ಯದರ್ಶಿಗೆ ನ್ಯಾಯವಾದಿ ಶುಕ್ಲಾ ಅವರಿಗೆ ಪೊಲೀಸ್ ಭದ್ರತೆ ಹಾಗೂ ಅವರ ಮೇಲೆ ಹಲ್ಲೆ ನಡೆಸಿದವರನ್ನು ಬಂಧಿಸುವಂತೆ ಒತ್ತಾಯಿಸಿ ಪತ್ರ ಕಳುಹಿಸಿದ್ದರು. ಪತ್ರ ಕಳುಹಿಸಿದ ಸುಮಾರು ೨ ತಿಂಗಳ ನಂತರ ಅಂದರೆ ಅಕ್ಟೋಟೋಬರ್ ೧೦ ರಂದು ಪ್ರಯಾಗರಾಜ್ ಪೊಲೀಸ್ ವರಿಷ್ಠಾಧಿಕಾರಿ ಶೈಲೇಂದ್ರ ದ್ವಿವೇದಿ ಅವರು ನ್ಯಾಯವಾದಿ ಪೂ. ಕುಲಕರ್ಣಿಯನ್ನು ದೂರವಾಣಿ ಮೂಲಕ ಸಂಪರ್ಕಿಸಿದರು. ಆ ಸಮಯದಲ್ಲಿ ದ್ವಿವೇದಿ ಅವರು ನ್ಯಾಯವಾದಿ ಶುಕ್ಲಾ ಅವರಿಗೆ ೧ ತಿಂಗಳ ಮಟ್ಟಿಗೆ ೧ ಪೊಲೀಸ್ ಕಾನ್‌ಸ್ಟೆಬಲ್ ಭದ್ರತೆ ಒದಗಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು ಮತ್ತು ಈ ಪ್ರಕರಣದಲ್ಲಿ ಓರ್ವ ಮತಾಂಧನನ್ನು ಬಂಧಿಸಲಾಗಿದೆ ಎಂದು ಹೇಳಿದರು.