ಡಾ. ಸ್ವಾಮಿಯವರಿಗೇ ಈ ಸರಕಾರೀಕರಣದ ವಿರುದ್ಧ ಸ್ವತಃ ನ್ಯಾಯಾಲಯದಲ್ಲಿ ಹೋರಾಟ ನಡೆಸಬೇಕಾಗುತ್ತಿದೆ. ಇತರ ಯಾವುದೇ ಜನಪ್ರತಿನಿಧಿಗಳು ಅಥವಾ ನಾಯಕರು ಇದರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಿಲ್ಲ ಅಥವಾ ಅದರ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುತ್ತಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !
ನವ ದೆಹಲಿ – ಬಿಜೆಪಿಯ ಹಿರಿಯ ಮುಖಂಡ ಮತ್ತು ಸಂಸದ ಡಾ. ಸುಬ್ರಮಣ್ಯಮ್ ಸ್ವಾಮಿ ಇವರು ಉತ್ತರಾಖಂಡದ ಭಾಜಪ ಸರಕಾರ ‘ಚಾರಧಾಮ್ ದೇವಸ್ಥಾನ ವ್ಯವಸ್ಥಾಪನ ಬೋರ್ಡ್’ ಮೂಲಕ ಚಾರಧಾಮ್ ಹಾಗೂ ಇತರ ೫೧ ದೇವಾಲಯಗಳನ್ನು ವಶಪಡಿಸಿಕೊಂಡಿರುವ ವಿರುದ್ಧ ಸುಬ್ರಮಣ್ಯಮ್ ಸ್ವಾಮಿಯವರು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಜುಲೈ ೨೧ ರಂದು ಉತ್ತರಾಖಂಡ ನ್ಯಾಯಾಲಯವು ಡಾ. ಸ್ವಾಮಿಯವರ ಈ ಅರ್ಜಿಯನ್ನು ತಿರಸ್ಕರಿಸಿತ್ತು. ಈಗ ಸರ್ವೋಚ್ಚ ನ್ಯಾಯಾಲಯದಲ್ಲಿ ಕದ ತಟ್ಟಿದ್ದಾರೆ.
ಹಿಂದೂ ದೇವಸ್ಥಾನಗಳು ಮಾತ್ರ ಸರಕಾರೀಕರಣ ಏಕೆ ?
ಡಾ. ಸ್ವಾಮಿಯವರು, ಭಾರತದಂತಹ ಜಾತ್ಯತೀತ ದೇಶದಲ್ಲಿ ಕೇವಲ ಹಿಂದೂ ದೇವಸ್ಥಾನಗಳ ಸರಕಾರೀಕರಣ ಮಾತ್ರ ಮಾಡಲಾಗುತ್ತಿದೆ ಎಂದು ಹೇಳಿದರು; ಆದರೆ ಮಸೀದಿಗಳು ಮತ್ತು ಇತರ ಪಂಥಗಳ ಧಾರ್ಮಿಕ ಸ್ಥಳಗಳ ಸರಕಾರೀಕರಣ ಮಾಡಲಾಗುತ್ತಿಲ್ಲ.
ಡಾ. ಸ್ವಾಮಿಯಲ್ಲದೆ ‘ಪೀಪಲ್ ಫಾರ್ ಧರ್ಮ’ ಹಾಗೂ ‘ಇಂಡಿಕ್ ಕಲೆಕ್ಟಿವ್ ಟ್ರಸ್ಟ್’ ಈ ಎರಡು ಸಂಘಟನೆಗಳು ಸಹ ಸರಕಾರೀಕರಣದ ವಿರುದ್ಧ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿವೆ.