ಚೀನಾದ ಗೂಢಾಚಾರರು ಪ್ರಧಾನಿ ಕಚೇರಿಯಲ್ಲಿಯೂ ಸುತ್ತಾಡುತ್ತಿರುವ ಬಗ್ಗೆ ಬಹಿರಂಗ

ಕ್ವಿಂ ಶಿ(ಬಲಬದಿ) ಆಕೆಯೊಂದಿಗೆ ನೇಪಾಳದ ಸಹಚರ ಶೇರ್ ಬಹಾದ್ದೂರ್(ಮಧ್ಯ) ಹಾಗು ಭಾರತೀಯ ಪತ್ರಕರ್ತ ರಾಜೀವ್ ಶರ್ಮಾ(ಎಡಬದಿ)

ಪಾಟಲಿಪುತ್ರ (ಬಿಹಾರ) – ಚೀನಾದ ಗೂಢಾಚಾರರು ಪ್ರಧಾನಮಂತ್ರಿ ಕಚೇರಿ, ದಲೈ ಲಾಮಾ ಮತ್ತು ಭಾರತದಲ್ಲಿ ಹಾಕಲಾಗಿರುವ ಭದ್ರತಾ ಉಪಕರಣಗಳ ಮೇಲೆ ನಿಗಾವಹಿಸುತ್ತಿರುವುದು ಬೆಳಕಿಗೆ ಬಂದಿದೆ. ಸಚಿವಾಲಯದಲ್ಲಿ ಕೆಲಸ ಮಾಡುತ್ತಿರುವ ಉನ್ನತ ಅಧಿಕಾರಿಗಳ ಬಗ್ಗೆ ಗೂಢಾಚಾರರು ಮಾಹಿತಿ ಸಂಗ್ರಹಿಸುತ್ತಿರುವ ಬಗ್ಗೆ ಬಂಧಿಸಲಾಗಿರುವ ಚೀನಾದ ಗೂಢಾಚಾರನ ತನಿಖೆಯಿಂದ ಬೆಳಕಿಗೆ ಬಂದಿದೆ.

ಚೀನಾದ ಗೂಢಾಚಾರ ಕ್ವಿಂ ಶಿ ಎಂಬವನ ವಿಚಾರಣೆಯಲ್ಲಿ ಆತ,

೧. ಪ್ರಧಾನ ಮಂತ್ರಿಗಳ ಕಚೇರಿ ಸೇರಿದಂತೆ ದೊಡ್ಡ ಕಚೇರಿಗಳಿಂದ ಮಾಹಿತಿ ಸಂಗ್ರಹಿಸುವ ಮೂಲಕ ಚೀನಾವು ಭಾರತದಲ್ಲಿರುವ ಗೂಢಾಚಾರರು ತಂಡಕ್ಕೆ ಕೆಲಸ ನೀಡಿತ್ತು. ಕಚೇರಿಯಲ್ಲಿ ಪ್ರಮುಖ ವ್ಯಕ್ತಿ ಯಾರು ? ಯಾವ ಸ್ಥಾನದಲ್ಲಿ ಯಾರು ಕೆಲಸ ಮಾಡುತ್ತಿದ್ದಾರೆ ? ಮತ್ತು ಎಷ್ಟು ಪ್ರಭಾವಶಾಲಿಯಾಗಿದ್ದಾರೆ ? ಎಂಬ ಮಾಹಿತಿಯನ್ನು ಸಂಗ್ರಹಿಸುವ ಬಗ್ಗೆ ಹೇಳಲಾಗಿತ್ತು.

೨. ಚೀನಾದ ಗೂಢಾಚಾರ ತಂಡದಲ್ಲಿ ಮಹಾಬೋಧಿ ದೇವಸ್ಥಾನದ ಪ್ರಮುಖ ಬೌದ್ಧ ಸನ್ಯಾಸಿ ಹಾಗೂ ಕೋಲಕಾತಾದ ಓರ್ವ ಮಹಿಳೆ ಸೇರಿದ್ದಾರೆ. ಕ್ವಿಂಗ್ ಶಿ ಮತ್ತು ಈ ಮಹಿಳೆಯನ್ನು ಪರಿಚಯಿಸಲಾಗಿತ್ತು. ಈ ಮಹಿಳೆಯು ಆತನಿಗೆ ಪ್ರಮುಖ ದಾಖಲೆಗಳನ್ನು ನೀಡುತ್ತಿದ್ದಳು. ಶಿ ಈ ದಾಖಲೆಗಳನ್ನು ಚೀನಾಕ್ಕೆ ಕಳುಹಿಸುತ್ತಿದ್ದನು.

(ಸೌಜನ್ಯ : ABP NEWS)

೩. ದೆಹಲಿ ಪೊಲೀಸರ ವಿಶೇಷ ತಂಡ ಕಳೆದ ತಿಂಗಳು ಕ್ವಿಂಗ್ ಶಿ ಮತ್ತು ಅವನ ನೇಪಾಳಿ ಸಹಚರ ಶೇರ್ ಬಹದ್ದೂರ್ ಹಾಗೂ ಭಾರತೀಯ ಪತ್ರಕರ್ತ ರಾಜೀವ್ ಶರ್ಮಾನನ್ನು ಬಂಧಿಸಿತ್ತು. ಆತನ ವಿಚಾರಣೆಯ ಸಮಯದಲ್ಲಿ ಕೆಲವು ದಾಖಲೆಗಳು ಪತ್ತೆಯಾಗಿವೆ. ಅದರಲ್ಲಿ ಪ್ರಧಾನಿ ಕಚೇರಿಯ ಅಧಿಕಾರಿಯೊಬ್ಬರು ಮತ್ತು ದಲೈ ಲಾಮಾಯವರ ಎಲ್ಲ ಕಾರ್ಯಕ್ರಮಗಳ ಕುರಿತು ಮಾಹಿತಿ ಸಂಗ್ರಹಿಸಲಾಗಿತ್ತು.

೪. ಭಾರತದಲ್ಲಿ ಬೇಹುಗಾರಿಕೆ ನಡೆಸಲು ಕ್ವಿಂಗ್ ಶಿಗೆ ಚೀನಾ ಪ್ರತಿ ತಿಂಗಳಿಗೆ ಒಂದು ಲಕ್ಷ ರೂಪಾಯಿ ನೀಡುತ್ತಿತ್ತು. ದಕ್ಷಿಣ ದೆಹಲಿ ಪ್ರದೇಶದಲ್ಲಿ ವಾಸಿಸುತ್ತಿದ್ದ ಶಿಯ ಮನೆಯ ಬಾಡಿಗೆ ತಿಂಗಳಿಗೆ ೫೦,೦೦೦ ರೂಪಾಯಿ ಇತ್ತು. ಬಾಡಿಗೆ ಯಾರು ಪಾವತಿಸುತ್ತಿದ್ದರು ?, ಎಂಬುವುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ.